ಶಿವಮೊಗ್ಗ: ಶಂಕಿತ ಉಗ್ರನ ತಂದೆ ನಿಧನ ಹಿನ್ನೆಲೆಯಲ್ಲಿ ಪೊಲೀಸರು ಅಂತ್ಯಕ್ರಿಯೆಗಾಗಿ ಮಾಝ್‌ನನ್ನು(Maz) ಶಿವಮೊಗ್ಗದಿಂದ (Shivamogga) ತೀರ್ಥಹಳ್ಳಿಗೆ ಕರೆದೊಯ್ಯುತ್ತಿದ್ದಾರೆ.
ಶಿವಮೊಗ್ಗ ಪೊಲೀಸರಿಂದ ಬಂಧಿತನಾಗಿದ್ದ ಶಂಕಿತ ಉಗ್ರ (Suspected Terrorist) ಮಾಝ್ ತಂದೆ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಮಾಝ್‌ನನ್ನು ಕರೆತರಲು ಶುಕ್ರವಾರ ನ್ಯಾಯಾಲಯದಿಂದ ಆದೇಶವನ್ನು ಪಡೆದಿದ್ದಾರೆ. ಘಟನೆ ಸಂಬಂಧಿಸಿ ನ್ಯಾಯಾಲಯವು ಮಾಝ್‌ನನ್ನು ಬೆಳಿಗ್ಗೆ ಕರೆದುಕೊಂಡು ಹೋಗಿ ಸಂಜೆ 7 ಗಂಟೆಯೊಳಗೆ ವಾಪಸ್ ಕರೆದುಕೊಂಡು ಬರಲು ಸೂಚಿಸಿದೆ.
Advertisement
Advertisement
ಶಂಕಿತ ಉಗ್ರ ಮಾಝ್ ತಂದೆ ನಿಧನ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತೀರ್ಥಹಳ್ಳಿಯಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮಾಡಿದ್ದು, ತಂದೆಯ ಅಂತ್ಯಕ್ರಿಯೆಗೆ ಮಾಝ್‌ನನ್ನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಪೊಲೀಸರು ಕರೆದೊಯ್ಯಲಿದ್ದಾರೆ. ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ
Advertisement
Advertisement
ಮಗನ ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮುನೀರ್ ಅಹಮದ್ ಶನಿವಾರ ಸಂಜೆ ಎದೆನೋವಿನ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮಾಝ್ ತಂದೆಗೆ 53 ವರ್ಷ ವಯಸ್ಸಾಗಿದ್ದು, ಮಗನ ಬಂಧನದ ಬಳಿಕ ಕುಗ್ಗಿಹೋಗಿದ್ದರು. ಹೀಗಾಗಿ ಅವರಿಗೆ ಹೃದಯಾಘಾತ ಉಂಟಾಗಿ ನಿಧನರಾಗಿದ್ದಾರೆ ಎನ್ನಲಾಗಿದೆ.