ಜೈಪುರ: ಭಾನುವಾರ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ವೇಳೆ ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್ ಹೇಳಿಕೊಟ್ಟ ಹಿನ್ನೆಲೆ ವಿದ್ಯಾರ್ಥಿನಿ ಸೇರಿ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
Advertisement
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ರಿಚಾ ತೋಮರ್, ನೀಟ್ ಪರೀಕ್ಷೆ ಭಾನುವಾರ ನಡೆದಿದ್ದು, ನೀಟ್ ಪರೀಕ್ಷೆ ಪೇಪರ್ ಸೋರಿಕೆಯಾಗಿದೆ. ಈ ಹಿನ್ನೆಲೆ 18 ವರ್ಷದ ವಿದ್ಯಾರ್ಥಿನಿ ದಿನೇಶ್ವರಿ ಕುಮಾರಿ ಮತ್ತು ಪರೀಕ್ಷಾ ಕೇಂದ್ರ ಸಿಬ್ಬಂದಿ ರಾಮ್ ಸಿಂಗ್, ಪರೀಕ್ಷಾ ಕೊಠಡಿಯ ಸಿಬ್ಬಂದಿ, ಆಡಳಿತ ಘಟಕದ ಉಸ್ತುವಾರಿ ಮುಖೇಶ್, ದಿನೇಶ್ವರಿ ಚಿಕ್ಕಪ್ಪ ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚಿಂತಾಮಣಿ ಬಳಿ ಭೀಕರ ಅಪಘಾತ – ಆಸ್ಪತ್ರೆಗೆ ಭೇಟಿ ನೀಡಿದ ಕೋಲಾರ ಎಸ್‍ಪಿ
Advertisement
Advertisement
ಪರೀಕ್ಷೆ ಪ್ರಾರಂಭವಾದ ಬಳಿಕ ಆರೋಪಿ ರಾಮ್ ಸಿಂಗ್ ಮತ್ತು ಮುಖೇಶ್ ಪರೀಕ್ಷೆ ಪತ್ರಿಕೆಯ ಫೋಟೋಗಳನ್ನು ಜೈಪುರ ಚಿತ್ರಕೂಟ್ ಪ್ರದೇಶದ ಅಪಾರ್ಟ್‍ಮೆಂಟ್‍ನಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಆ ವ್ಯಕ್ತಿಗಳು ಕೀ ಆನ್ಸರ್ ಅನ್ನು ಮುಖೇಶ್ ಅವರಿಗೆ ಕಳುಹಿಸಿದ್ದಾರೆ. ನಂತರ ರಾಮ್ ಸಿಂಗ್ ದಿನೇಶ್ವರಿ ಅವರು ಪ್ರೆಶ್ನೆಗಳಿಗೆ ಉತ್ತರ ಬರೆಯಲು ಸಹಾಯ ಮಾಡಿದ್ದಾರೆ. ದಿನೇಶ್ವರಿ ಚಿಕ್ಕಪ್ಪ ಪರೀಕ್ಷಾ ಕೇಂದ್ರದ ಹೊರಗೆ 10 ಲಕ್ಷ ರೂ. ಹಿಡಿದುಕೊಂಡು ಸಿಬ್ಬಂದಿಗೆ ಕೊಡಲು ಕಾಯುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?
Advertisement
ಅದು ಅಲ್ಲದೇ ಇ-ಮಿತ್ರ ಕೇಂದ್ರದ ಮಾಲೀಕ ಅನಿಲ್ ಮತ್ತು ಕೋಚಿಂಗ್ ಸೆಂಟರ್ ಮಾಲೀಕ ಅಲ್ವಾರ್ ಅವರನ್ನು ಬಂಧಿಸಲಾಗಿದೆ. ಅವರು 30 ಲಕ್ಷಕ್ಕೆ ಈ ಡೀಲ್ ಮುಗಿಸಿ ನಂತರ ಸಿಕಾರ್ ನಲ್ಲಿ ಕೀ ಆನ್ಸರ್ ಗಳನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಮೂಲಕ ವಿದ್ಯಾರ್ಥಿನಿಗೆ ತಲುಪಿಸುತ್ತಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್ಗಳಿಂದ ಕರೆ