‘ಬಿಗ್ ಬಾಸ್’ ಸ್ಪರ್ಧಿ ಸಪ್ನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ: ಬಂಧಿಸಲು ಕಾಯುತ್ತಿರುವ ಪೊಲೀಸರು

Public TV
1 Min Read
sapna choudhary 3

ಖ್ಯಾತ ಗಾಯಕಿ, ಡಾನ್ಸರ್ ಆಗಿರುವ ಹರ್ಯಾಣದ ಸಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಅವರನ್ನು ಬಂಧಿಸಲು ಲಕ್ನೋ ಪೊಲೀಸರು ಹರ್ಯಾಣಗೆ ಪ್ರಯಾಣ ಬೆಳೆಸಿದ್ದಾರೆ. ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ಬಂಧಿಸುವಂತೆ ನ್ಯಾಯಾಲಯವು ವಾರೆಂಟ್ ಹೊರಡಿಸಲಾಗಿದೆ. ಯುಪಿ ಪೊಲೀಸ್ ತಂಡ ಇಂದು ಅಥವಾ ನಾಳೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

sapna choudhary 2

ನೃತ್ಯ ಕಾರ್ಯಕ್ರಮವೊಂದನ್ನು ಒಪ್ಪಿಕೊಂಡು, ಮುಗಂಡ ಹಣ ಪಡೆದು ಕಾರ್ಯಕ್ರವನ್ನು ನೀಡದೆ ವಂಚಿಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಸಪ್ನಾ ಚೌಧರಿ ವಿರುದ್ಧ ಎಸಿಜೆಎಂ ನ್ಯಾಯಾಲಯವು ಸೋಮವಾರ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಹಾಜರಾಗದೇ, ತಮ್ಮ ಪರವಾಗಿಯೂ ಯಾರೂ ಅರ್ಜಿ ಸಲ್ಲಿಸದೇ ಇರುವ ಕಾರಣಕ್ಕಾಗಿ ನ್ಯಾಯಾಲಯವು ಈ ನಿಲುವು ತೆಳೆದಿದೆ. ಅಲ್ಲದೇ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಶಾಂತನು  ತ್ಯಾಗಿ ಅವರು ಮುಂದಿನ ವಿಚಾರಣೆಯನ್ನು ಸೆ.30ಕ್ಕೆ ನಿಗದಿಪಡಿಸಿದ್ದಾರೆ. ಈ ಕೇಸಿಗೆ ಸಂಬಂಧಿಸಿದಂತೆ ನವೆಂಬರ್ 2021ರಲ್ಲೂ ಇದೇ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿತ್ತು. ಆಗ ಸಪ್ನಾ ಜಾಮೀನು ಪಡೆದುಕೊಂಡಿದ್ದರು. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

sapna choudhary 1

ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ಕೊಡಲು ಒಪ್ಪಿಕೊಂಡಿದ್ದ ಸಪ್ನಾ ಚೌಧರಿ ಆ ಒಪ್ಪಂದನ್ನು ಮುರಿದಿದ್ದಾರಂತೆ. ಅಲ್ಲದೇ, ಪಡೆದ ಹಣವನ್ನೂ ವಾಪಸ್ಸು ನೀಡಿಲ್ಲ. ಒಪ್ಪಂದ ಪ್ರಕಾರ ಅವರು ಗ್ರಾಹಕರ ಜೊತೆ ನೇರ ಸಂಪರ್ಕ ಇಟ್ಟುಕೊಳ್ಳಬಾರದು ಮತ್ತು ಒಪ್ಪಂದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು ಎನ್ನುವ ನಿಯಮವಿತ್ತು ಎಂದು ಹೇಳಲಾಗಿತ್ತು. ಅದನ್ನು ಅವರು ಮುರಿದಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಈ ಸಪ್ನ ಹಿಂದಿಯ ಬಿಗ್ ಬಾಸ್ ಸೀಸನ್ 11ರಲ್ಲೂ ಭಾಗಿಯಾಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು ಎನ್ನುವುದು ವಿಶೇಷ.

Live Tv
[brid partner=56869869 player=32851 video=960834 autoplay=true]

Share This Article