ದಾವಣಗೆರೆ: ಬೆಳಗಾವಿಯ ಆರು ರೈತರಿಗೆ ನೋಟಿಸ್ ನೀಡಿ ಸುದ್ದಿಯಾಗಿದ್ದ ಎಕ್ಸಿಸ್ ಬ್ಯಾಂಕ್ ಇದೀಗ ಮತ್ತೆ ಸುದ್ದಿಯಲ್ಲಿದೆ. ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್ ಇದೀಗ ಹರಿಹರ ತಾಲೂಕಿನ ಬೇವಿನಹಳ್ಳಿ ಗ್ರಾಮದ ರೈತರಿಗೆ ನೋಟಿಸ್ ನೀಡಿದೆ.
ದೂರದ ಕೋಲ್ಕತ್ತಾ ಕೋರ್ಟ್ ನಿಂದ ಮಹೇಶ್ ಅವರಿಗೆ ಇದೂವರೆಗೂ ಯಾವುದೇ ನೋಟಿಸ್ ಗಳು ಬಂದಿಲ್ಲ. ಆದರೇ ಸೋಮವಾರ ಏಕಾಏಕಿ ಕೋಲ್ಕತ್ತಾ ಕೋರ್ಟ್ ನಿಂದ ಮಹೇಶ್ ಬಂಧನಕ್ಕೆ ಅರೆಸ್ಟ್ ವಾರೆಂಟ್ ಬಂದಿದೆ.
ಮಹೇಶ್ 2015 ರಲ್ಲಿ ಭತ್ತ ಬೆಳೆಯಲು ಎಕ್ಸಿಸ್ ಬ್ಯಾಂಕ್ ನಿಂದ 3.93 ಸಾವಿರ ರೂ. ಸಾಲ ತೆಗೆದುಕೊಂಡಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಅವರು ಬ್ಯಾಂಕಿಗೆ ಸಾಲವನ್ನು ಕಟ್ಟಿರಲಿಲ್ಲ. ಅಷ್ಟರಲ್ಲಾಗಲೇ ಮಹೇಶ್ ಗೆ ಕೋಲ್ಕತ್ತಾ ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಇದೀಗ ಪೊಲೀಸರು ಮಹೇಶನನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದು ರೈತ ಮಹೇಶ್ ಕುಟುಂಬ ಕಂಗಾಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews