ಹೈದರಾಬಾದ್: ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಆನ್‌ಲೈನ್ ಐಪಿಎಲ್ ಬೆಟ್ಟಿಂಗ್ (Online IPL Betting) ದಂಧೆ ನಡೆಸುತ್ತಿದ್ದ ಮೂರು ಬುಕ್ಕಿಗಳನ್ನು (Bookie) ವಿಶೇಷ ಕಾರ್ಯಾಚರಣೆ ತಂಡವು (SOT) ಬಂಧಿಸಿ 1.84 ಕೋಟಿ ರೂ. ಸೇರಿದಂತೆ ಇತರೆ ವಸ್ತುಗಳನ್ನು ವಶ ಪಡಸಿಕೊಂಡಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.
ಎಸ್‌ಆರ್ ನಗರದ ನಿವಾಸಿ ಪೊಡಪತಿ ನರಸಿಂಗ್ ರಾವ್ (31), ಮಲ್ಲಂಪೇಟೆ ನಿವಾಸಿ ವೇಗೆಸಿನ ರವಿರಾಜು (45), ನಿಜಾಂಪೇಟೆ ನಿವಾಸಿ ಭೂಪತಿರಾಜು ಪ್ರಸಾದ್ (40) ಹಾಗೂ ಕೆ.ವಿನೋದ್ ಕುಮಾರ್ (32) ಬಂಧಿತ ಆರೋಪಿಗಳು. ಇದನ್ನೂ ಓದಿ: ಪಂಜಾಬ್ ಸ್ಫೋಟ ಪ್ರಕರಣ – ಐವರು ಆರೋಪಿಗಳ ಬಂಧನ
Advertisement
Advertisement
ಮೊದಲನೇ ಪ್ರಕರಣದಲ್ಲಿ ಎಸ್‌ಒಟಿ ಶಂಶಾಬಾದ್ ಮತ್ತು ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (RGIA) ಠಾಣಾ ಪೊಲೀಸರು ಐಪಿಎಲ್ ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ಎಸ್‌ಆರ್ ನಗರ ನಿವಾಸಿ ಪೊಡಪತಿ ನರಸಿಂಗ್ ರಾವ್ ಎಂಬಾತನನ್ನು ಬಂಧಿಸಿದ್ದಾರೆ. ಪೊಡಪತಿ ಸಬ್ ಬುಕ್ಕಿಯಾಗಿದ್ದು, ಪ್ರಮುಖ ಬುಕ್ಕಿಯಾದ ಗಣಪತಿ ರೆಡ್ಡಿ ಮತ್ತು ಶ್ರೀನಿವಾಸ್ ರಾಜು ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಬುಕ್ಕಿಗಳು ಆನ್‌ಲೈನ್ ಅಪ್ಲಿಕೇಷನ್ ಮೂಲಕ ನರಸಿಂಗ್ ರಾವ್‌ಗೆ ಪ್ರವೇಶ ಒದಗಿಸಿ ಅವರಿಂದ ಭಾರೀ ಹಣವನ್ನು ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯಿಂದ 60 ಲಕ್ಷ ರೂ. ನಗದು, ಬ್ಯಾಂಕ್ ಖಾತೆಯಲ್ಲಿದ್ದ 32 ಲಕ್ಷ ರೂ. ಹಣ ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯ – ಮಹಿಳೆಯ ಚಿನ್ನಾಭರಣದೊಂದಿಗೆ ಯುವಕ ಪರಾರಿ
Advertisement
ಎರಡನೇ ಆನ್‌ಲೈನ್ ಐಪಿಎಲ್ ಬೆಟ್ಟಿಂಗ್ ದಂಧೆಯನ್ನು ಎಸ್‌ಒಟಿ ರಾಜೇಂದ್ರನಗರ ಪತ್ತೆಹಚ್ಚಿದ್ದು, ಪ್ರಮುಖ ಬುಕ್ಕಿಯಾದ ರವಿರಾಜು ಹಾಗೂ ಸಬ್ ಬುಕ್ಕಿಯಾದ ಭೂಪತಿರಾಜು ಪ್ರಸಾದ್‌ನನ್ನು ಬಂಧಿಸಿದ್ದಾರೆ. ಈ ಬುಕ್ಕಿಗಳು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ (Andhra Pradesh) ಬೆಟ್ಟಿಂಗ್ ನಡೆಸುತ್ತಿದ್ದು, ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂ ಮೂಲಕ ವಹಿವಾಟು ನಡೆಸುತ್ತಿದ್ದರು. ಬಂಧಿತರಿಂದ 71 ಲಕ್ಷ ರೂ. ನಗದು, ಬ್ಯಾಂಕ್‌ನಲ್ಲಿದ್ದ 2 ಲಕ್ಷ ರೂ. ಹಣ, 17 ಮೊಬೈಲ್‌ಗಳು ಹಾಗೂ 2 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಬೇರೆ ಮಹಿಳೆ ಜೊತೆ ಓಡಾಟ – ಟ್ರಾಫಿಕ್ ಕ್ಯಾಮೆರಾದಿಂದ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ
Advertisement
ಮೂರನೇ ಪ್ರಕರಣದಲ್ಲಿ ಎಸ್‌ಒಟಿ ಬಾಲನಗರ ಮತ್ತು ನರಸಿಂಗಿ ಪೊಲೀಸ್ ತಂಡವು ಆರೋಪಿ ಕೆ.ವಿನೋದ್ ಕುಮಾರ್‌ನನ್ನು ಬಂಧಿಸಿದ್ದು, ಶ್ರೀಕಾಂತ್ ಎಂಬ ಸಬ್ ಬುಕ್ಕಿ ಪರಾರಿಯಾಗಿದ್ದಾನೆ. ಆರೋಪಿಗಳಿಬ್ಬರೂ ವನಪರ್ತಿ ಮೂಲದವರಾಗಿದ್ದು, 7.5 ಲಕ್ಷ ರೂ. ನಗದು, 17 ಮೊಬೈಲ್, 1 ಟ್ಯಾಬ್ ಹಾಗೂ 1 ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಚಿಕಿತ್ಸೆಗೆ ಕರೆತಂದಿದ್ದ ಆರೋಪಿಯಿಂದ ಚಾಕು ಇರಿತ – ಯುವ ವೈದ್ಯೆ ಸಾವು
ಮೂರೂ ಪ್ರಕರಣಗಳಲ್ಲಿನ ಎಲ್ಲಾ ಆರೋಪಿಗಳನ್ನು ತೆಲಂಗಾಣ ಗೇಮಿಂಗ್ ಆ್ಯಕ್ಟ್‌ನ (Telangana Gaming Act) ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್