ನವದೆಹಲಿ/ ಧಾರವಾಡ: ಅರೆ ಮಲೆನಾಡು, ಒಂದೆಡೆ ಬಯಲುಸೀಮೆ ಮತ್ತೊಂದೆಡೆ ದಟ್ಟವಾದ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಧಾರವಾಡ (Dharawada) ಈಗ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ದೆಹಲಿ ವಿಶೇಷ ಪೊಲೀಸ್ ದಳ ನಡೆಸಿದ ಮಹತ್ವದ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರಾದ ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಬಂಧಿಸಿದೆ. ಈ ಮೂವರ ಪೈಕಿ ಶಹನವಾಜ್ ಧಾರವಾಡ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾದು ಹೋಗುವ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾನೆ.
Advertisement
ಬಂಧನಕ್ಕೆ ಒಳಗಾಗಿದ್ದ ಶಹನವಾಜ್ (Shahnawaz) ಸುಳಿವು ನೀಡಿದವರಿಗೆ 3 ಲಕ್ಷ ರೂ. ಬಹುಮಾನ ಘೋಷಣೆಯಾಗಿತ್ತು. ಈ ಸಂಬಂಧ ಹುಬ್ಬಳ್ಳಿ, ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಈಗ ನಿರಂತರವಾಗಿ ದೆಹಲಿ ಪೊಲೀಸರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಡಿಕೆಶಿ, ಶಾಮನೂರ್‌ಗೆ ಹೆದರಬೇಡಿ- ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್
Advertisement
Advertisement
ಹುಬ್ಬಳ್ಳಿ, ಧಾರವಾಡದ ಯಾವ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣವಿದೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಇದುವರೆಗೂ ಉಗ್ರರು ಧಾರವಾಡ ಭಾಗದ ಯಾವ ಅರಣ್ಯದಲ್ಲಿ ಅಡಗಿದ್ದಾರೆ ಅಥವಾ ತರಬೇತಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
Advertisement
ಹುಬ್ಬಳ್ಳಿ, ಧಾರವಾಡ ಪೊಲೀಸರು ಈ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಧಾರವಾಡ ದಾಟುತ್ತಿದ್ದಂತೆ ಅನೇಕ ಕಾಡುಗಳಿವೆ. ಶಹನವಾಜ್ ಹೇಳಿದ ಹೇಳಿಕೆಯ ಜಾಡು ಹಿಡಿದು ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ 2014-15 ರಲ್ಲಿ ಧಾರವಾಡ ಆರೋಗ್ಯನಗರದಲ್ಲಿ ಮೂವರು ಶಂಕಿತ ಉಗ್ರರು ಬಂದು ಬಾಡಿಗೆ ಮನೆ ಮಾಡಿ ಇದ್ದರು. ಇವರ ಬೆನ್ನತ್ತಿ ಮುಂಬೈ ಎಟಿಎಸ್‌ನವರು ಬಂದು ಹೋಗಿದ್ದರು.
ಪಾಕ್‌ನಲ್ಲಿ ಹ್ಯಾಂಡ್ಲರ್: ಬಂಧಿತರಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಹನವಾಜ್ ಸೇರಿದಂತೆ ಮೂವರು ಅಯೋಧ್ಯೆಯಲ್ಲಿ ಲೋಕಾರ್ಪಣೆಗೆ ಸಜ್ಜಾಗುತ್ತಿರುವ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಈ ಶಂಕಿತರ ಹ್ಯಾಂಡ್ಲರ್ ಪಾಕಿಸ್ತಾನದಲ್ಲಿರುವ ಭಾರತೀಯ ಮೂಲದ ಭಯೋತ್ಪಾದಕ ಫರ್ಹಾತುಲ್ಲಾ ಗೋರಿ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭಾರತದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿರುವ ಫರ್ಹಾತುಲ್ಲಾ ಗೋರಿ ಭಾರತದಲ್ಲಿ ಐಸಿಸ್ ಹೆಸರಿನಲ್ಲಿ ಯುವಕರನ್ನು ತಲೆಕೆಡಿಸಿ ಆನ್‌ಲೈನ್ ಜಿಹಾದ್‌ಗೆ ತಯಾರು ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
Web Stories