ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿ 1 ಲಕ್ಷ ರೂ. ದರೋಡೆ – ಆರೋಪಿಗಳು ಅರೆಸ್ಟ್

Public TV
1 Min Read
KOLAR SP

ಕೋಲಾರ: ಹೋಟೆಲ್ ಮಾಲೀಕನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ಕೆಂಪೇಗೌಡ ನಗರದ ಮನೋಜ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಲಾರ (Kolar) ನಗರದ ಹೋಟೆಲ್ ಒಂದರ ಮಾಲೀಕ ನವೀನ್ ಶೆಟ್ಟಿ ಎಂಬವರ ಮೇಲೆ ಕಳೆದ ತಿಂಗಳು 17ರ ರಾತ್ರಿ ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಬಳಿಕ ಅವರ ಬಳಿ ಇದ್ದ 1 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಈ ವೇಳೆ ಮಧು ಎಂಬ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇನ್ನಿಬ್ಬರು ಪರಾರಿಯಾಗಿದ್ದರು. ಇದನ್ನೂ ಓದಿ: 10 ಸಾವಿರ ಕೊಟ್ಟು ಪತಿಯನ್ನು ಮಂಗಳೂರು ಬೀಚ್ ನೋಡಲು ಲವ್ವರ್ ಜೊತೆ ಕಳುಹಿಸಿ ಕೊಲೆಗೈದ್ಳು!

ಮಾಲೀಕ ನವೀನ್ ಅವರು ಹೋಟೆಲ್ ಬಂದ್ ಮಾಡಿ ಹೋಗುವುದನ್ನು ಹಲವಾರು ದಿನಗಳಿಂದ ಮಧು ಗಮನಿಸಿದ್ದ. ಈ ಬಗ್ಗೆ ಕೆಲವು ದಿನಗಳಿಂದ ಕಣ್ಣಿಟ್ಟಿದ್ದ ಮಧು ತನ್ನ ಸ್ನೇಹಿತರ ಜೊತೆ ಸೇರಿ ದರೋಡೆ ಮಾಡುವ ಹೊಂಚು ಹಾಕಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇದರಂತೆ ಆರೋಪಿಗಳು ಸೆ.17ರಂದು ನವೀನ್ ಅವರನ್ನು ಹಿಂಬಾಲಿಸಿದ್ದರು. ಬೈಕ್ ನಿಲ್ಲಿಸಿ ಗೇಟ್ ತೆರೆಯುತ್ತಿದ್ದಂತೆ ಹಣದ ಬ್ಯಾಗ್‍ಗೆ ಕೈ ಹಾಕಿದ್ದರು. ಈ ವೇಳೆ ನವೀನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲೇ ಇದನ್ನು ನೋಡಿ ನವೀನ್ ಅವರ ಮಗ ಕಿರುಚಾಡಿದ್ದಾನೆ. ಕೋಡಲೇ ಅಕ್ಕಪಕ್ಕದವರು ಓರ್ವನನ್ನು ಹಿಡಿದಿದ್ದರು. ಹಲ್ಲೆಗೊಳಗಾದ ಹೋಟೆಲ್ ಮಾಲೀಕ ಕಣ್ಣನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾರ್ಬಲ್ ತುಂಬಿದ್ದ ಲಾರಿ ಪಲ್ಟಿ- ನಾಲ್ವರು ಕಾರ್ಮಿಕರು ಗಂಭೀರ

Web Stories

Share This Article