ಶ್ರೀನಗರ: ಸೇನಾ ಟ್ರಕ್‌ಗೆ (Truck) ಬೆಂಕಿ ತಗುಲಿದ ಪರಿಣಾಮ ನಾಲ್ವರು ಯೋಧರು (Soldiers) ಸಜೀವದಹನವಾಗಿರುವ ಭೀಕರ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಪ್ರದೇಶದಲ್ಲಿ ನಡೆದಿದೆ.
ಘಟನೆ ಗುರುವಾರ ಭಟ ಧುರಿಯನ್ ಪ್ರದೇಶದ ಬಳಿ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಸಿಡಿಲು ಬಡಿದ ಪರಿಣಾಮ ಯೋಧರನ್ನು ಸಾಗಿಸಲಾಗುತ್ತಿದ್ದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದರ್ಗಾದಲ್ಲಿ ಗಳಗಳನೆ ಅತ್ತ ರಮೇಶ್ ಕುಮಾರ್
ಸ್ಥಳಕ್ಕೆ ಸೇನೆ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಲಂಡನ್‍ಗೆ ತೆರಳುತ್ತಿದ್ದ ಅಮೃತ್‌ಪಾಲ್ ಪತ್ನಿ ಪೊಲೀಸರ ವಶಕ್ಕೆ