ನವದೆಹಲಿ: ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಬಂದಿದೆ. ಅಮೆರಿಕದಿಂದ ಮತ್ತೆ ಮೂರು ಅಪಾಚೆ AH-64R ಸೀಹಾಕ್ ಹೆಲಿಕಾಪ್ಟರ್‌ಗಳು (Apache Helicopters) ಸೇರ್ಪಡೆಗೊಳ್ಳಲಿವೆ.
ಡಿಸೆಂಬರ್ 17ರಂದು ಗೋವಾದ ಐಎನ್‌ಎಸ್ (INS) ಹನ್ಸ್‌ನಲ್ಲಿ ಸೇನೆಗೆ ನಿಯೋಜನೆಗೊಳಿಸಲಾಗುತ್ತೆ. ಈ ಹೆಲಿಕಾಪ್ಟರ್‌ಗಳು ಸುಧಾರಿತ ಆಯುಧಗಳು, ಸೆನ್ಸಾರ್‌ಗಳು ಹಾಗೂ ಸಂಯೋಜಿತ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳನ್ನ ಒಳಗೊಂಡಿದೆ. ಅಲ್ಲದೇ ನೌಕಾಪಡೆಯ ಪ್ರಮುಖ ಆಸ್ತಿ ಅಂತಲೂ ಕರೆಯಲಾಗುತ್ತಿದೆ. ಮೂಲಗಳ ಪ್ರಕಾರ ಭಾರತ-ಪಾಕ್ ಗಡಿಯಲ್ಲಿ (India Pakistan Border) ಗಸ್ತಿಗೆ ನಿಯೋಜಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇದು ಸಾಂಪ್ರದಾಯಿಕ ಮತ್ತು ಅನಿರೀಕ್ಷಿತ ದಾಳಿಗಳನ್ನು ಎದುರಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಹೆಲಿಕಾಪ್ಟರ್‌ಗಳು ಮುಂದುವರಿದ ತಂತ್ರಜ್ಞಾನವನ್ನು ಒಳಗೊಂಡಿದ್ದು, ಸುಧಾರಿತ ಡಿಜಿಟಲ್ ಸಂಪರ್ಕ, ಜಂಟಿ ಯುದ್ಧತಂತ್ರದ ಮಾಹಿತಿ ವಿತರಣಾ ವ್ಯವಸ್ಥೆ ಹೊಂದಿದೆ. ಅಲ್ಲದೇ ಜಾಗತಿಕವಾಗಿ 400ಕ್ಕೂ ಹೆಚ್ಚು ಅಪಾಚೆ ಹೆಲಿಕಾಪ್ಟರ್‌ಗಳನ್ನ ವಿತರಿಸಲಾಗಿದ್ದು, ಅಮೆರಿಕ ನೌಕಾಪಡೆಯು 4.5 ಮಿಲಿಯನ್‌ಗಿಂತಲೂ ಹೆಚ್ಚು ಗಂಟೆಗಳ ಹಾರಾಟವನ್ನು ನಡೆಸಿದೆ.
ಯಾವಾ ಒಪ್ಪಂದ ಆಗಿತ್ತು?
2015ರಲ್ಲಿ ಭಾರತ 22 ಅಪಾಚೆ ಹೆಲಿಕಾಪ್ಟರ್ ಖರೀದಿಸಲಾಗಿತ್ತು. ಜುಲೈ 2020ರಲ್ಲಿ ಮತ್ತೆ 600 ದಶಲಕ್ಷ ಡಾಲರ್ ವೆಚ್ಚದ 6 ಹೆಲಿಕಾಪ್ಟರ್‌ಗಳಿಗಾಗಿ ಸಹಿ ಆಗಿತ್ತು. ಇದಾಗಿ ಒಂದು ವರ್ಷದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಮತ್ತೆ ಆರು ಹೊಸ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು 600 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದದ ಕರಾರಿನಂತೆ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ನ್ನು 2024ರ ಮೇ ಮತ್ತು ಜೂನ್ ನಡುವೆ ಭಾರತಕ್ಕೆ ತಲುಪಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಮುಂದೂಡಲಾಯಿತು. 15 ತಿಂಗಳು ತಡವಾಗಿ 3 ಹೆಲಿಕಾಪ್ಟರ್ ಭಾರತಕ್ಕೆ ಬಂದವು. ಗಾಳಿಯಲ್ಲಿರುವ ಯುದ್ಧ ಟ್ಯಾಂಕರ್ ಎಂದು ಕರೆಯಲ್ಪಡುವ ಸುಧಾರಿತ ಎಎಚ್-64ಇ ಹೆಲಿಕಾಫ್ಟರ್‌ಗಳು ಸೇನೆಯ ಆಕ್ರಮಣಾಕಾರಿ ಹಾಗೂ ವಿಚಕ್ಷಣಾ ಕಾರ್ಯಾಚರಣೆಗೆ ನೆರವಾಗಲಿವೆ.



