ದಾವಣಗೆರೆ: ಕರ್ತವ್ಯ ನಿರತರಾಗಿದ್ದ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಮೇಲೆ ಸೇನಾ ಪೊಲೀಸ್ ಪೇದೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಘವೇಂದ್ರ ಮಠದ ಬಳಿ ನಡೆದಿದೆ.
ನಗರದ ಸಿಪಿಐ ಗುರುನಾಥ್ ಮೇಲೆ ಸಿಎಂಪಿಯ ನಾಯಕ್ ಆಗಿ ಕೆಲಸ ಮಾಡುತ್ತಿರುವ ಪ್ರಭು ಹಲ್ಲೆ ನಡೆಸಿದ್ದಾರೆ. ಸೋಮವಾರ ರಾತ್ರಿ ನಗರದ ರಾಘವೇಂದ್ರ ಮಠದ ಬಳಿ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು.
ಈ ವೇಳೆ ಕುಡಿದು ವಾಹನ ಚಾಲಾಯಿಸಿದ ಪ್ರಭು ಮೇಲೆ ಸಿಪಿಐ ಕೇಸ್ ಹಾಕುತ್ತೇನೆ ಎಂದು ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ.
ಆಗ ನಾನು ಯೋಧ ನನ್ನನ್ನು ಬಿಡಿ ಎಂದು ಪ್ರಭು ಜಗಳ ಮಾಡಿದಾಗ ಮಾತಿಗೆ ಮಾತು ಬೆಳೆದು, ಕೊಪಗೊಂಡ ಪ್ರಭು ಸಿಪಿಐ ಗುರುನಾಥ್, ಎಎಸ್‍ಐ ಹಾಗೂ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆ ನಡೆಸಿದ ಸೇನಾ ಪೊಲೀಸ್ ಪೇದೆಯನ್ನು ಹರಿಹರ ಪೊಲೀಸರು ಬಂಧಿಸಿದ್ದಾರೆ. ಕರ್ತವ್ಯದ್ದಲ್ಲಿದ್ದಾಗ ಹಲ್ಲೆ ಅಡಿ ಪ್ರಭು ವಿರುದ್ಧ ಪ್ರಕರಣ ದಾಖಲಾಗಿದೆ.