ತಿರುವನಂತಪುರಂ: ಎನ್‌ಸಿಸಿಯ 80 ಕ್ಕೂ ಹೆಚ್ಚು ಕೆಡೆಟ್‌ಗಳು ಕೇರಳದ ತರಬೇತಿ ಶಿಬಿರದಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಿರಿಯ ಸೇನಾಧಿಕಾರಿ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ವೈರಲ್ ಆಗಿದೆ.
ಅಸ್ವಸ್ಥಗೊಂಡಿದ್ದ ಕೆಡೆಟ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವಿಚಾರವಾಗಿ ಸ್ಥಳೀಯ ಕೌನ್ಸಿಲರ್ ಮತ್ತು ಎಡಪಕ್ಷದ ನಾಯಕ ಸೇರಿಕೊಂಡು ಸೇನಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಕಳ್ಳರ ಗ್ಯಾಂಗ್‌ಗೆ ತಿಂಗಳ ಸಂಬಳ, ಪ್ರಯಾಣ ಭತ್ಯೆ – ಗ್ಯಾಂಗ್ ಬಗ್ಗೆ ತಿಳಿದು ಪೊಲೀಸರೇ ಶಾಕ್!
ಎನ್‌ಸಿಸಿಯ 80 ಕ್ಕೂ ಹೆಚ್ಚು ಕೆಡೆಟ್‌ಗಳು ತೃಕ್ಕಾಕರದ ಕೆಎಂಎಂ ಕಾಲೇಜಿನಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದರು. ಘಟನೆ ಬೆನ್ನಲ್ಲೇ, ಇಬ್ಬರು ವ್ಯಕ್ತಿಗಳು ಇತರರೊಂದಿಗೆ ಆವರಣಕ್ಕೆ ನುಗ್ಗಿ ಎನ್‌ಸಿಸಿ ಬೆಟಾಲಿಯನ್‌ನ ಲೆಫ್ಟಿನೆಂಟ್ ಕರ್ನಲ್ ಕರ್ನೈಲ್ ಸಿಂಗ್ ಮೇಲೆ ಹಲ್ಲೆ ನಡೆಸಿದರು.
ಲೆಫ್ಟಿನೆಂಟ್ ಕರ್ನಲ್ ಅವರನ್ನು ಗೋಡೆಗೆ ತಳ್ಳುತ್ತಿರುವುದು ಮತ್ತು ಕುತ್ತಿಗೆ ಹಿಡಿದು ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿದೆ. ನೀಲಿ ಟೀ-ಶರ್ಟ್‌ನ ವ್ಯಕ್ತಿಯೊಬ್ಬ ಆಯುಧವನ್ನು ಹೊರತೆಗೆದು, ಅದು ಚಾಕು ಎಂದು ಬೆದರಿಕೆ ಕೂಡ ಹಾಕಿದ್ದಾನೆ. ಇದನ್ನೂ ಓದಿ: Haveri| ನ್ಯೂ ಇಯರ್ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ
ಲೆಫ್ಟಿನೆಂಟ್ ಕರ್ನಲ್ ಸಿಂಗ್ ಮೇಲೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಗಳನ್ನು ಸ್ಥಳದಲ್ಲೇ ಇದ್ದ ಪೊಲೀಸರು ನಿಯಂತ್ರಿಸಲು ಪ್ರಯತ್ನಿಸಿದರು. ಘಟನೆಯಲ್ಲಿ ಅಧಿಕಾರಿಯ ಕುತ್ತಿಗೆ ಮತ್ತು ಬೆನ್ನಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.