ನವದೆಹಲಿ: (New Delhi) ಕಾಶ್ಮೀರದ ಅನಂತನಾಗ್‌ನಲ್ಲಿ ಭಯೋತ್ಪಾದಕರ ಮೇಲಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೇನಾ ಶ್ವಾನ ‘ಜೂಮ್’ (Zoom) ಗುರುವಾರ ಸಾವನ್ನಪ್ಪಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
54 ಎಎಫ್‌ವಿಹೆಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೂಮ್ ಹೆಸರಿನ ಸೇನಾ ಶ್ವಾನ ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಮೃತಪಟ್ಟಿದೆ. ಇದನ್ನೂ ಓದಿ: ಕಾಕ್‍ಪಿಟ್, ಕ್ಯಾಬಿನ್‍ನಲ್ಲಿ ಹೊಗೆ – ಹೈದರಾಬಾದ್‍ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಸ್ಪೈಸ್‍ಜೆಟ್ ವಿಮಾನ
Advertisement
Advertisement
ಅನಂತನಾಗ್‌ನ ಕೋಕರ್‌ನಾಗ್‌ನಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ ‘ಜೂಮ್’ ಭಯೋತ್ಪಾದಕರ ಮೇಲೆ ದಾಳಿ ಮಾಡಿತ್ತು. ಈ ವೇಳೆ ಎರಡು ಗುಂಡು ತಗುಲಿ ಗಂಭೀರ ಗಾಯಗೊಂಡಿತ್ತು. ತಕ್ಷಣ ಶ್ವಾನವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
Advertisement
ಗುಂಡೇಟು ಬಿದ್ದರೂ ಜೂಮ್ ಶ್ವಾನ ಉಗ್ರರ ಮೇಲೆ ದಾಳಿ ಮುಂದುವರಿಸಿತ್ತು. ಭಯೋತ್ಪಾದಕರನ್ನು ನಿಗ್ರಹಿಸುವಲ್ಲಿಯೂ ಯಶಸ್ವಿಯಾಗಿತ್ತು. ಇದನ್ನೂ ಓದಿ: ಹಿಜಬ್ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?
Advertisement
ನಂತರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ‘ಜೂಮ್’ ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದರು.