ನವದೆಹಲಿ: ಆಪರೇಷನ್ ಸಿಂಧೂರ್‌ನಿಂದ (Operation Sindoor) ಉಂಟಾದ ಪಾಕಿಸ್ತಾನದೊಂದಿಗಿನ ಸಂಘರ್ಷವು ಮೇ 10 ರ ಕದನ ವಿರಾಮದೊಂದಿಗೆ ಕೊನೆಗೊಂಡಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Upendra Dwivedi) ಹೇಳಿದ್ದಾರೆ.
ನವದೆಹಲಿಯಲ್ಲಿ ಆಪರೇಷನ್ ಸಿಂದೂರ್: ಬಿಫೋರ್ ಆ್ಯಂಡ್ ಬಿಯಾಂಡ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕದನ ವಿರಾಮ ನಂತರವೂ ಹಲವಾರು ಪ್ರಮುಖ ನಿರ್ಧಾರಗಳು ಮತ್ತು ಕ್ರಮಗಳು ಮುಂದುವರಿದಿವೆ ಎಂದು ತಿಳಿಸಿದರು. ಇದನ್ನೂ ಓದಿ: Viral Video | ಕೆಂಪು ಕೋಟೆಯಲ್ಲಿ 1.5 ಕೋಟಿ ಮೌಲ್ಯದ ವಜ್ರ, ರತ್ನ ಖಚಿತ ಕಲಶ ಕಳವು
ಮೇ 10 ರಂದು ಯುದ್ಧ ಕೊನೆಗೊಂಡಿತು ಎಂದು ನೀವು ಭಾವಿಸುತ್ತಿರಬಹುದು. ಇಲ್ಲ, ಅದು ದೀರ್ಘಕಾಲದ ವರೆಗೆ ಮುಂದುವರೆಯಿತು. ಕಾರಣ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅದನ್ನು ಮೀರಿ ಸಹಜವಾಗಿ ಇಲ್ಲಿ ಮಾಹಿತಿ ಹಂಚಿಕೊಳ್ಳಲು ನನಗೆ ಕಷ್ಟವಾಗುತ್ತದೆ ಎಂದು ಜನರಲ್ ದ್ವಿವೇದಿ ಹೇಳಿದರು.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ ಇನ್ನೂ ಕೊನೆಗೊಂಡಿಲ್ಲ. ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಮುಂದುವರಿದಿವೆ. ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಕೊನೆಗೊಂಡಿದೆಯೇ? ನಾನು ಹಾಗೆ ಭಾವಿಸುವುದಿಲ್ಲ. ಏಕೆಂದರೆ, ಎಲ್‌ಒಸಿಯಲ್ಲಿ ಒಳನುಸುಳುವಿಕೆ ಪ್ರಯತ್ನಗಳು ಇನ್ನೂ ನಡೆಯುತ್ತಿವೆ. ಎಷ್ಟು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಅವರಲ್ಲಿ ಎಷ್ಟು ಮಂದಿ ತಪ್ಪಿಸಿಕೊಂಡಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದರು. ಇದನ್ನೂ ಓದಿ: ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಟ್ರಂಪ್ ಸಕಾರಾತ್ಮಕ ನಡೆ ಶ್ಲಾಘನೀಯ: ಮೋದಿ
ಸಶಸ್ತ್ರ ಪಡೆಗಳ ಸಮನ್ವಯವನ್ನು ಶ್ಲಾಘಿಸಿದ ಜನರಲ್ ದ್ವಿವೇದಿ, ಕಾರ್ಯಾಚರಣೆಯ ಸಮಯದಲ್ಲಿ ಸೈನ್ಯವು ಲಯಬದ್ಧ ಅಲೆಯಂತೆ ಚಲಿಸಿತು ಎಂದು ಹೇಳಿದರು. ಈ 88 ಗಂಟೆಗಳಲ್ಲಿ, ನಿಮಗೆ ಯೋಜನೆ ರೂಪಿಸಲು ಮತ್ತು ಆದೇಶಗಳನ್ನು ನೀಡಲು ಸಮಯವಿರಲಿಲ್ಲ. ಎಲ್ಲರೂ ಅದಾಗಲೇ ಸಮನ್ವಯಗೊಂಡಿದ್ದರು. ಏನು ಮಾಡಬೇಕೆಂದು ತಿಳಿದಿದ್ದರು ಎಂದು ಶ್ಲಾಘಿಸಿದರು.