ಸ್ಯಾಂಡಲ್‌ವುಡ್ ನಟ ದರ್ಶನ್ ಫ್ಯಾನ್ಸ್ (Darshan Fans) ಮತ್ತು ಅರಣ್ಯಾಧಿಕಾರಿಗಳು ಇದೀಗ ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ (Elephant Arjuna) ಸಮಾಧಿ ಗಲಾಟೆ ಶುರುವಾಗಿದೆ. 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಮಾಧಿ ವಿಚಾರ ಹೊಸ ಚರ್ಚೆ ಹುಟ್ಟು ಹಾಕಿದೆ. ಇದನ್ನೂ ಓದಿ:ಥಿಯೇಟರ್ ಸಮಸ್ಯೆ ಬಗ್ಗೆ ಡೈರೆಕ್ಟರ್ ಪ್ರೇಮ್ ಓಪನ್ ಟಾಕ್
ಇತ್ತೀಚೆಗೆ ಅರ್ಜುನ ಆನೆ ಸಮಾಧಿ ನಿರ್ಮಾಣ ಮಾಡಲು ಸ್ವಂತ ಹಣ ಖರ್ಚು ಮಾಡಿ ಸ್ಲ್ಯಾಬ್ ಕಲ್ಲುಗಳನ್ನು ದರ್ಶನ್ ಕಳುಹಿಸಿ ಕೊಟ್ಟಿದ್ದರು. ಅರಣ್ಯಾಧಿಕಾರಿಗಳಿಂದ ಅನುಮತಿ ಕೊಟ್ಟ ಬಳಿಕವೇ ದರ್ಶನ್ (Actor Darshan) ಅಭಿಮಾನಿಗಳು ಕೆಲಸ ಪ್ರಾರಂಭಿಸಿದ್ದರು. ಆದರೆ ಅರ್ಜುನನ ಸ್ಮಾರಕ ನಿರ್ಮಿಸುವ ಕೆಲಸದ ವೇಳೆ, ಅರಣ್ಯಾಧಿಕಾರಿಗಳು ತಡೆದರು. ಬಳಿಕ ತಾವೇ ಅರ್ಜುನನ ಸ್ಮಾರಕ ನಿರ್ಮಾಣ ಮಾಡೋದಾಗಿ ಹೇಳಿ ಅಲ್ಲಿಂದ ದರ್ಶನ್ ಅಭಿಮಾನಿಗಳನ್ನು ಕಳುಹಿಸಿದ್ದರು. ಹಣವನ್ನು ಹಿಂದಿರುಗಿಸೋದಾಗಿ ಕೂಡ ಹೇಳಿದ್ದರು ಎಂದು ವಿಡಿಯೋ ಮೂಲಕ ದರ್ಶನ್ ಆಪ್ತ ನಾಗರಾಜ್ ಮಾಹಿತಿ ನೀಡಿದ್ದಾರೆ.
ಇದುವರೆಗೂ ನಮ್ಮ ಖಾತೆಗೆ ಹಣ ಬಂದಿಲ್ಲ. ನಮಗೆ ನಿಮ್ಮ ಹಣ ಬೇಕಿಲ್ಲ. ಮೊದಲು ಅನುಮತಿ ಕೊಟ್ಟು ಬಳಿಕ ನಾವೇ ಮಾಡ್ತೀವಿ ಅಂತೀರಿ ಎಂದು ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.