ತುಮಕೂರು: 150 ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಎಲ್ಲಿಯೂ ಇಂತಹ ಮೀಟೂ ಆರೋಪಗಳು ಕೇಳಿಬಂದಿಲ್ಲ ಎಂದು ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ಶೃತಿ ಹರಿಹರನ್ ವಿರುದ್ಧ ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ನನ್ನ ಮಗನ ಮೇಲೆ ಆರೋಪ ಮಾಡಲಿಕ್ಕೆ ಚಾನ್ಸೇ ಇಲ್ಲ. ನಾನು ಹೆತ್ತು ಹಾಲು ಕುಡಿಸಿ ಸಾಕಿರುವವಳು. ನಮ್ಮ ವಂಶದಲ್ಲಿ ಯಾರೂ ಈ ರೀತಿಯಿಲ್ಲ. ನನ್ನ ಮಗ ತಪ್ಪು ಮಾಡಲು ಸಾಧ್ಯವಿಲ್ಲ. ಏಕೆಂದರೆ ಎಲ್ಲ ಹೆಣ್ಣು ಮಕ್ಕಳನ್ನು ಯಾವ ಯಾವ ರೀತಿ ನೋಡಿಕೊಳ್ಳಬೇಕು, ಯಾವ ರೀತಿ ಮಾತನಾಡಬೇಕು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿದೆ. ಇವತ್ತಿನವರೆಗೂ ಕೇರಳ, ತಮಿಳುನಾಡು, ಹೈದರಾಬಾದ್, ಕರ್ನಾಟಕ ಇಲ್ಲಿ ಯಾವುದಾದರೂ ಕೆಟ್ಟು ಹೆಸರು ಬಂದರೆ ಹೇಳಿ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿಯಲ್ಲಿ ಶೃತಿ V/S ಅರ್ಜುನ್: ಇಬ್ಬರ ಮಾತುಕತೆಯ ಪೂರ್ಣ ಸಂಭಾಷಣೆ ಓದಿ
ಮಗ 150ಕ್ಕೂ ಹೆಚ್ಚು ಸಿನಿಮಾವನ್ನು ಮಾಡಿದ್ದಾನೆ. 150 ಜನ ಹಿರೋಯಿನ್‍ಗಳಿದ್ದಾರೆ. ಇವರನ್ನು ಕೇಳಿ. ಈ ವೇಳೆ ಆಕೆಯದೇ ತಪ್ಪು ಎಂದಾದಲ್ಲಿ ಆಕೆಗೆ ಶಿಕ್ಷೆ ಆಗಲೇಬೇಕು. ನನ್ನ ಮಗ ಬಿಟ್ಟರೂ ನಾನು ಆಕೆಯನ್ನು ಬಿಡುವುದಿಲ್ಲ. ಈ ವೇಳೆ ಶೃತಿ ಹರಿಹರನ್ ಯಾವ ನಿಟ್ಟಿನಲ್ಲಿ ಆರೋಪ ಮಾಡಿರಬಹುದು. ನಾಲ್ಕು ಗೋಡೆ ಅವಳನ್ನ ಹಿಡಿದು ಎಳೆದಿಲ್ಲ. ಹತ್ತಾರು ಜನ ಇರುವ ಶೂಟಿಂಗ್ ಸ್ಪಾಟ್ ನಲ್ಲಿ ಡೈರಕ್ಟರ್ ಎಲ್ಲರೂ ಇರುತ್ತಾರೆ. ಈ ರೀತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅರ್ಜುನ್ ಸರ್ಜಾ ಕಾಫಿಗೆ ಕರೆದಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ ಇವಳು ಯಾರೆಂದು ಕರೆಯಬೇಕು. ಅಲ್ಲಿ ಕೆಲಸ ಮುಗಿಯುತ್ತಿದ್ದಂತೆ ನನ್ನ ಮಗ ನಮ್ಮ ಮನೆಗೆ ಬರುತ್ತಾನೆ. ಕೆಲಸ ಮುಗಿದ ಮೇಲೆ ಮದ್ರಾಸ್‍ಗೆ ಹೋಗುತ್ತಾನೆ. ಈ ರೀತಿ ಆರೋಪ ಮಾಡುತ್ತಿರುವುದಕ್ಕೆ ಬೇರೆ ಉದ್ದೇಶ ಇರುಬಹುದು. ಬ್ಲಾಕ್‍ಮೇಲ್ ಮಾಡುವುದಕ್ಕೆ ಅವಳು ಈ ರೀತಿ ಮಾಡಿದ್ದಾಳೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು: ಫಿಲ್ಮಂ ಚೇಂಬರ್ ಅಧ್ಯಕ್ಷ ಚೆನ್ನೇಗೌಡ
ಪ್ರಕಾಶ್ ರೈ ಅವರು ಶೃತಿ ಪರ ನಿಂತಿದ್ದ ವಿಚಾರಕ್ಕೆ ಮಾತನಾಡಿ ದೇವರು ಇದ್ದಾನೆ. ಡೈರೆಕ್ಟರ್, ಫಿಲ್ಮಂ ಚೇಂಬರ್ ನವರು ಇದ್ದಾರೆ. ಎಲ್ಲದಕ್ಕೂ ಹೋಗಿ ಹೇಳಬೇಕಿತ್ತು. ಯಾಕೆ ಅವಳು ಹೇಳಲಿಲ್ಲ. ಸಮಯಕ್ಕಾಗಿ ಕಾದು ಕುಳಿತ್ತಿದ್ದಳು. ಮಾನನಷ್ಟ ಮೊಕದ್ದಮೆಯನ್ನು ಆಕೆಯ ಮೇಲೆ ಹಾಕುತ್ತೇವೆ. ಆಕೆಯನ್ನು ಬಿಡುವುದಿಲ್ಲ. ಅವಳಿಗೆ ಅಷ್ಟೊಂದು ಕೊಬ್ಬು ಇರಬೇಕಾದರೆ ನಾವು ನಿರಾಪರಾಧಿಗಳು ನಮಗೆ ಎಷ್ಟು ಇರಬೇಕು ಹೇಳಿ ಎಂದರು.
ಹೆಣ್ಣು ಮಕ್ಕಳು ಕಲೆಗಾಗಿ ಅವರ ಜೀವನವನ್ನು ಮುಡುಪಾಗಿಟ್ಟುಕೊಂಡು ಆ ಫೀಲ್ಡ್ ಅನ್ನು ಮುಂದಕ್ಕೆ ತರಬೇಕು ಎಂದು ಅಂದುಕೊಂಡಿರುತ್ತಾರೆ. ಕಲಾವಿದರೂ ಅಂದ ಮೇಲೆ ಸಣ್ಣ ತಪ್ಪುಗಳು ಆಗಬಹುದು. ಆದರೆ ಆ ರೀತಿಯ ಯಾವುದೇ ತಪ್ಪನ್ನು ನನ್ನ ಮಗ ಮಾಡಿಲ್ಲ ಎಂದು ಹೇಳಿದರು.
ಮೀಟೂ ತಮಗಾದ ದೌರ್ಜನ್ಯವನ್ನು ಹೇಳಿಕೊಳ್ಳಲು ಒಳ್ಳೆಯ ವೇದಿಕೆ ಎಂದು ಹೇಳಿದ್ದಕ್ಕೆ ಲಕ್ಷ್ಮಿ ಅವರು, ಹಾಗಾದರೆ ಫಿಲ್ಮ್ ಚೇಂಬರ್ ಇನ್ನಿತರ ಸಂಘ ಸಂಸ್ಥೆಗಳು ಯಾಕೆ ಬೇಕು. ನನ್ನ ಮಗ ತಪ್ಪು ಮಾಡಿದರೆ ದೊಡ್ಡ ದೊಡ್ಡ ನಟರ ಬಳಿ ಗಣ್ಯರ ಬಳಿ ಹೇಳಬೇಕಾಗಿತ್ತು ಅಥವಾ ಸಿನಿಮಾವನ್ನೇ ಬಿಡಬೇಕಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು #MeToo- ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv