Connect with us

Cinema

ಚೇತನ್ ವಿರುದ್ಧ ಐಶ್ವರ್ಯ ಸರ್ಜಾ ಮೀಟೂ ಬಾಂಬ್ – ಆಡಿಯೋ ಕೇಳಿ

Published

on

ಬೆಂಗಳೂರು: ನಟ ಚೇತನ್ ಅವರಿಗೆ ಲೈಂಗಿಕ ಕಿರುಕುಳ ಎಂದರೆ ಏನು ಗೊತ್ತಾ? ಊಟಕ್ಕೆ ಕರೆದದ್ದು ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ನನ್ನನ್ನೂ ಕೂಡ ಊಟಕ್ಕೆ ಕರೆದಿದ್ದಾರೆ ಎಂದು ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಸರ್ಜಾ ಗಂಭೀರ ಆರೋಪ ಮಾಡಿದ್ದಾರೆ.

ಶೃತಿ ಅವರ ದೂರಿನ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಐಶ್ವರ್ಯ ಅವರು, ಮೀಟೂ ಆರೋಪಕ್ಕೂ ಒಂದು ತಿಂಗಳ ಮುಂಚೆ ಆಷ್ಟೇ ನಟಿ ಶೃತಿ ನಮ್ಮ ತಂದೆ ಅವರನ್ನು ಟ್ವಿಟ್ಟರ್ ನಲ್ಲಿ ಅನ್‍ಫಾಲೋ ಮಾಡಿದ್ದರೆ. ಸಿನಿಮಾ ವೇಳೆ ಲೈಂಗಿಕ ಕಿರುಕುಳ ನೀಡಿದ್ದರೆ ಇಷ್ಟು ದಿನ ಆಕೆ ಅವರು ಸುಮ್ಮನಿದ್ದರು ಎಂದು ಉತ್ತರಿಸಬೇಕಿದೆ ಪ್ರಶ್ನೆ ಮಾಡಿದರು. ಇದೇ ವೇಳೆ ನಟ ಚೇತನ್ ವಿರುದ್ಧವೂ ಆರೋಪ ಮಾಡಿದ ಅವರು ನಟ ಚೇತನ್ ಅವರಿಗೆ ಲೈಂಗಿಕ ಕಿರುಕುಳ ಎಂದರೇ ಏನು ಎಂದು ಗೊತ್ತಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ

ಒಂದೊಮ್ಮೆ ಸಹ ನಟಿಯನ್ನು ಊಟಕ್ಕೆ ಕರೆಯುವುದು ಲೈಂಗಿಕ ಕಿರುಕುಳ ಎಂದಾದರೆ ನಟ ಚೇತನ್ ಕೂಡ ನನ್ನನ್ನು ಊಟಕ್ಕೆ ಕರೆದಿದ್ದಾರೆ. ಅಲ್ಲದೇ ಪ್ರೇಮ ಬರಹ ಸಿನಿಮಾ ವೇಳೆ ನಟ ಚೇತನ್ ರೊಂದಿಗೆ ಫೋಟೋ ಶೂಟ್, ವರ್ಕ್ ಶಾಪ್ ಮಾಡಲಾಗಿತ್ತು. ಈ ವೇಳೆ ಚೇತನ್ ನನ್ನ ಬೆನ್ನು ಮುಟ್ಟಿದ್ದರು, ಅಲ್ಲದೇ ಊಟಕ್ಕೂ ಕರೆದಿದ್ದರು. ಇದನ್ನು ಲೈಂಗಿಕ ಶೋಷಣೆ ಎಂದು ಕರೆಯಬಹುದುಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅವರ ಪ್ರಕಾರ ಇದು ಲೈಂಗಿಕ ಶೋಷಣೆ ಆದ್ರೆ ಇದು ಕೂಡ ಕಿರುಕುಳ ಅಗುತ್ತದೆ ಅಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಟಿ ಶೃತಿಗೆ ಅರ್ಜುನ್ ಮಗಳು ಐಶ್ವರ್ಯಾ ಸರ್ಜಾ ಸವಾಲ್!

ನಟಿ ಶೃತಿ ಹರಿಹರನ್ ಅವರು ಈ ಹಿಂದೆ ತನ್ನ ಮೇಲೆ ಕಾಸ್ಟಿಂಗ್ ಕೌಚ್ ನಡೆದಿತ್ತು ಎಂದು ಹೇಳಿದ್ದರು. ಆದರೆ ಅಂದು ಯಾವುದೇ ನಟರ ಹೆಸರು ಬಹಿರಂಗ ಪಡಿಸಿರಲಿಲ್ಲ. ಈಗ ನಮ್ಮ ತಂದೆಯ ಹೆಸರನ್ನು ಬಳಕೆ ಮಾಡಿಕೊಳ್ಳಲು ಇಂತಹ ಆರೋಪ ಮಾಡಿದ್ದಾರೆ ಎಂದು ಐಶ್ವರ್ಯ ಸರ್ಜಾ ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=p-XbtCRr48o

Click to comment

Leave a Reply

Your email address will not be published. Required fields are marked *