ಟಾಲಿವುಡ್ (Tollywood) ನಟ ವಿಜಯ್ ದೇವರಕೊಂಡಗೆ (Vijay Devarakonda) ಫೀಮೇಲ್ ಫಾಲೋವರ್ಸ್ ಜಾಸ್ತಿ. ಸಮಯ ಸಿಕ್ಕಾಗಲೆಲ್ಲಾ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಮಾತುಕತೆ ನಡೆಸುತ್ತಾರೆ. ಇದೀಗ ವಿಜಯ್‌ಗೆ ವಿದ್ಯಾರ್ಥಿನಿಯರು (Fans) ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಅಭಿಮಾನಿಯ ಬೇಡಿಕೆಗೆ ‘ಅರ್ಜುನ್ ರೆಡ್ಡಿ’ (Arjun Reddy) ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ನಂಬಿಸಿ ಹುಡುಗಿಗೆ ಮೋಸ ಮಾಡಿದ ನಟ
ಇತ್ತೀಚೆಗೆ ಇಬ್ಬರು ವಿದ್ಯಾರ್ಥಿನಿಯರ ತೆಲುಗು ನಟ ವಿಜಯ್ ಗಮನ ಸೆಳೆಯಲು ಅಚ್ಚರಿ ಮೂಡಿಸುವ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿನಿಯರು ರೀಲ್ಸ್ ಪೋಸ್ಟ್ ಮಾಡಿ, ಈ ಪೋಸ್ಟ್‌ಗೆ ವಿಜಯ್ ಕಾಮೆಂಟ್ ಮಾಡಿದರೆ ಮಾತ್ರ ನಾವು ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ರೀತಿ ವಿದ್ಯಾರ್ಥಿನಿಯರು ಬೇಡಿಕೆ ಇಡುತ್ತಿದ್ದಂತೆ ನೆಟ್ಟಿಗರು ಕೂಡ ಖಂಡಿತ ನಟ ಪ್ರತಿಕ್ರಿಯೆ ನೀಡಲ್ಲ ಎಂದು ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ:ಹೊಸ ಫೋಟೋ ಶೂಟ್ ನಲ್ಲಿ ಸಂಗೀತಾ ಭಟ್ ಸಖತ್ ಹಾಟ್ ಹಾಟ್
View this post on Instagram
ನಿಮ್ಮ ವಿಡಿಯೋ ನೋಡಿ ನಿಜಕ್ಕೂ ವಿಜಯ್ ಕಾಮೆಂಟ್ ಮಾಡ್ತಾರಾ? ಅಷ್ಟೆಲ್ಲಾ ಸೀನ್ ಇದ್ಯಾ? ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಆದರೆ ಕೊನೆಗೆ ಆಗಿದ್ದೇ ಬೇರೆ. ಪರೀಕ್ಷೆಯಲ್ಲಿ 90% ಅಂಕ ಗಳಿಸಿದರೆ ನಿಮ್ಮನ್ನು ಖಂಡಿತ ಭೇಟಿ ಮಾಡುತ್ತೇನೆ ಎಂದು ವಿಜಯ್ ವಿದ್ಯಾರ್ಥಿನಿಯರ ಪೋಸ್ಟ್‌ಗೆ ಉತ್ತರ ನೀಡಿದ್ದಾರೆ. ನಟನ ಪ್ರತಿಕ್ರಿಯೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯ್ ದೇವರಕೊಂಡ (Vijay Devarakonda) ಅಪಾರ ಅಭಿಮಾನಿಗಳ ಬಳಗವಿದೆ. ಮಹಿಳಾ ಅಭಿಮಾನಿಗಳು ತಮ್ಮ ಪ್ರೀತಿ ವ್ಯಕ್ತಪಡಿಸಿರೋದು ಇದು ಮೊದಲೇನಲ್ಲ. ಈ ಹಿಂದೆಯೂ ಕೂಡ ಹುಡುಗಿಯೊಬ್ಬರು ವಿಜಯ್‌ಗೆ ರಿಂಗ್ ಹಾಕಿ ಪ್ರಪೋಸ್ ಮಾಡಿರುವ ಘಟನೆ ಕೂಡ ನಡೆದಿದೆ. ಈ ಸನ್ನಿವೇಶ ‘ಲೈಗರ್’ ರಿಲೀಸ್ ವೇಳೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
ವಿಜಯ್ ಸಿನಿಮಾಗಾಗಿಯೇ ಕಾದು ಕೂರುವ ಹುಚ್ಚು ಅಭಿಮಾನಿಗಳಿದ್ದಾರೆ. ಸದ್ಯ ಮೃಣಾಲ್ (Mrunal Thakur) ಜೊತೆಗಿನ ವಿಜಯ್ ಕಾಂಬಿನೇಷನ್ ಚಿತ್ರ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.