CinemaLatestMain PostSouth cinema

ಹಾಟ್‌ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ `ಅರ್ಜುನ್ ರೆಡ್ಡಿ’ ಚೆಲುವೆ

ಟಾಲಿವುಡ್‌ನ `ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಪರಿಚಿತರಾದ ನಟಿ ಶಾಲಿನಿ ಪಾಂಡೆ, ಬಾಲಿವುಡ್‌ಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇತ್ತೀಚೆಗೆ ರಣ್‌ವೀರ್ ಸಿಂಗ್ ಜೊತೆ ನಟಿಸಿದ ಸಿನಿಮಾ ನೆಲಕಚ್ಚಿದ ಬೆನ್ನಲ್ಲೇ ಮತ್ತೆ ಬೋಲ್ಡ್ ಲುಕ್ಕಿನಲ್ಲಿ ಶಾಲಿನಿ ಪಾಂಡೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದೆ.

ವಿಜಯ್ ದೇವರಕೊಂಡಗೆ ನಾಯಕಿಯಾಗುವ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ ಶಾಲಿನಿ ಪಾಂಡೆ, ತಮ್ಮ ಮೊದಲ ಚಿತ್ರದಲ್ಲೇ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡು, ಎಲ್ಲರೂ ಹುಬ್ಬೇರುವಂತೆ ಮಾಡಿದ್ರು. ನಂತರ ಸಾಕಷ್ಟು ತೆಲುಗು. ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಗಮನ ಸೆಳೆದ್ದರು. ಇತ್ತೀಚೆಗೆಷ್ಟೇ ರಣ್‌ವೀರ್ ಸಿಂಗ್‌ಗೆ ನಾಯಕಿಯಾಗಿ ನಟಿಸಿದ್ದ `ಜಯೇಶ್ ಭಾಯ್ ಜೋರ್ದಾರ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು. ಆದರೆ ಸೋಲಿಗೆ ಬೇಸರಿಸದೆ ಬೋಲ್ಡ್ ಫೋಟೋಶೂಟ್ ಮೂಲಕ ಬ್ಯೂಟಿ ಕ್ವೀನ್ ಶಾಲಿನಿ ಪಾಂಡೆ ಕಮ್ ಬ್ಯಾಕ್ ಆಗಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗ- ನಟಿಯರ ಬಗ್ಗೆ ತುಚ್ಚವಾಗಿ ಮಾತನಾಡಿದ ತೆಲುಗು ನಿರ್ದೇಶಕ

ಬಾಲಿವುಡ್‌ನ `ಜಯೇಶ್ ಭಾಯ್ ಜೋರ್ದಾರ್’ ಚಿತ್ರದ ಸೋಲಿನ ನಂತರ `ಮಹಾರಾಜ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಹಾಟ್ ಹಾಟ್ ಲುಕ್ಕಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟು ಸೋಷಿಯಲ್ ಮೀಡಿಯಲ್ಲಿ ವೈರಲ್ ಆಗಿದ್ದಾರೆ.

Leave a Reply

Your email address will not be published.

Back to top button