ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಈ ನಡುವೆ ಭಾರತೀಯ ಸೇನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ನಟ ವಿಜಯ್ ದೇವರಕೊಂಡ (Vijay Devarakonda) ಭಾರತೀಯ ಸೇನೆಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ:ನಮ್ಮ ದೇಶದ ತಾಕತ್ ಏನಂತ ಪ್ರಪಂಚಕ್ಕೆ ಗೊತ್ತಾಗಿದೆ: ಸಂಜಯ್ ದತ್
ಹೌದು. ತಮ್ಮದೇ ‘ರೌಡಿ’ ಫ್ಯಾಷನ್ ಬ್ರ್ಯಾಂಡ್ ಸಿನಿಮಾದಿಂದ ಬರುವ ಲಾಭದಲ್ಲಿ ಒಂದು ಭಾಗವನ್ನ ಭಾರತೀಯ ಸೇನೆಗೆ ದೇಣಿಗೆ ಕೊಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ:ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ
ವಿಜಯ್ ನೇತೃತ್ವದ ‘ರೌಡಿ’ (Rowdy Brand) ಫ್ಯಾಷನ್ ಬ್ರ್ಯಾಂಡ್‌ಗೆ ಭರ್ಜರಿ ರೆಸ್ಪಾನ್ಸ್ ಬರ್ತಿದ್ದು, ಕಲೆಕ್ಷನ್ ಸಹ ಮಾಡುತ್ತಿದೆ. ಈ ಬ್ರ್ಯಾಂಡ್‌ಗೆ ಒಂದೊಳ್ಳೆಯ ರೆಸ್ಪಾನ್ಸ್ ಇದೆ. ಹೀಗಾಗಿ ಇದರ ಲಾಭದಲ್ಲಿ ಒಂದು ಭಾಗವನ್ನ ಭಾರತೀಯ ಯೋಧರ ನಿಧಿಗೆ ಅರ್ಪಿಸಲು ನಟ ನಿರ್ಧರಿಸಿದ್ದಾರೆ. ನಟನ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ, ವಿಜಯ್ ನಟನೆಯ ‘ಕಿಂಗ್‌ಡಮ್’ (Kingdom) ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್‌ಗೆ ಸಜ್ಜಾಗಿದೆ. ಮೇ 30ರಂದು ತೆರೆಗೆ ಬರಲಿದೆ. ನಟಿ ಭಾಗ್ಯಶ್ರೀ ಜೊತೆ ವಿಜಯ್ ರೊಮ್ಯಾನ್ಸ್ ಮಾಡಿದ್ದಾರೆ. ಮತ್ತೆ ಅದೇ ಅರ್ಜುನ್ ರೆಡ್ಡಿ ಗೆಟಪ್‌ನಲ್ಲಿ ಅವರು ಮಿಂಚಿದ್ದಾರೆ. ಸಿನಿಮಾ ರಿಲೀಸ್ ಬಳಿಕ ಪ್ರೇಕ್ಷಕರ ಕುತೂಹಲಕ್ಕೆ ಉತ್ತರ ಸಿಗಲಿದೆ.