ಬಾಲಿವುಡ್ (Bollywood) ಖ್ಯಾತ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಉರ್ಫಿ ಜಾವೇದ್ (Urfi Javed) ಕಾಣಿಸಿಕೊಂಡ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅರ್ಜುನ್ ಕಪೂರ್ ಜೊತೆ ಉರ್ಫಿ ಫೋಟೋವೊಂದನ್ನು ತಗೆಸಿಕೊಳ್ಳಲು ಏನೆಲ್ಲ ಸಾಹಸ ಮಾಡಿದಳು ಎನ್ನುವ ಸಂಗತಿ ಆ ವಿಡಿಯೋದಲ್ಲಿದೆ. ಉರ್ಫಿ ಜೊತೆಗಿನ ಫೋಟೋ ಅಂದರೆ ಸಾಮಾನ್ಯವಾಗಿ ಎಲ್ಲರೂ ಭಯ ಬೀಳುತ್ತಾರೆ. ಆದರೆ, ಅರ್ಜುನ್ ಆ ರೀತಿ ಮಾಡಿಲ್ಲ ಎನ್ನುವುದೇ ಸಮಾಧಾನದ ಸಂಗತಿ.
Advertisement
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಉರ್ಫಿ ಜಾವೇದ್ ಮತ್ತು ಅರ್ಜುನ್ ಕಪೂರ್ ಜೊತೆಯಾಗಿ ಬಂದಿದ್ದರು. ಆ ವೇಳೆಯಲ್ಲಿ ಮಾಧ್ಯಮದ ಕ್ಯಾಮೆರಾಗಳು ಅವರಿಬ್ಬರನ್ನೂ ಒಟ್ಟಿಗೆ ಸೆರೆ ಹಿಡಿಯಲು ಬಯಸಿದ್ದವು. ಹಾಗಾಗಿ ಒಟ್ಟಿಗೆ ಇಬ್ಬರೂ ಪೋಸ್ ಕೊಡಲು ಸಾಧ್ಯವಾ? ಎಂದು ಅರ್ಜುನ್ ನನ್ನು ಕೇಳಲಾಯಿತು. ಅಲ್ಲದೇ, ಉರ್ಫಿ ಕೂಡ ಒಂದು ಫೋಟೋಗಾಗಿ ಅರ್ಜುನ್ ಕಪೂರ್ ಗೆ ವಿನಂತಿಸಿದರು. ಕೂಡಲೇ ಅರ್ಜುನ್ ಒಪ್ಪಿಕೊಂಡರು. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ
Advertisement
Advertisement
ಬಿಳಿಬಣ್ಣದ ಉಡುಗೆ ತೊಟ್ಟಿದ್ದ ಉರ್ಫಿ ತುಸು ಆತಂಕದಿಂದಲೇ ಅರ್ಜುನ್ ಬಳಿ ಬಂದರು. ಅರ್ಜುನ್ ಖುಷಿಯಲ್ಲೇ ಉರ್ಫಿ ಜೊತೆಗಿನ ಫೋಟೋಗೆ ನಿಂತರು. ಅರ್ಜುನ್ ಅವರ ನಡೆಗೆ ಉರ್ಫಿ ಸಂಭ್ರಮಿಸಿದರು. ಫೋಟೋ ನೀಡಿ ಹಗ್ ಕೂಡ ಮಾಡಿದರು. ನಂತರ ಉರ್ಫಿ ಖುಷಿಯಿಂದಲೇ ಅರ್ಜುನ್ ಬಗ್ಗೆ ಹೊಗಳಿದ್ದಾರೆ. ಇದೊಂದು ಮರೆಯಲಾರದ ಗಳಿಗೆ ಎಂದು ಮಾತನಾಡಿದ್ದಾರೆ.
Advertisement
ಸಾಮಾನ್ಯವಾಗಿ ಉರ್ಫಿ ಜೊತೆಗೆ ಕಾಣಿಸಿಕೊಳ್ಳಲು ಯಾರೂ ಬಯಸುವುದಿಲ್ಲ. ಅವರ ಕಾಸ್ಟ್ಯೂಮ್ ವಿಚಾರವಾಗಿ ದೂರುಗಳು ದಾಖಲಾಗಿವೆ. ಅಲ್ಲದೇ, ಉರ್ಫಿ ಜಗಳಗಂಟಿ. ಈ ಎಲ್ಲ ಕಾರಣದಿಂದಾಗಿ ದೂರ ಇರಲು ಬಯಸುತ್ತಾರೆ. ಆದರೆ, ಇದೆಲ್ಲವೂ ಗೊತ್ತಿರುವ ಅರ್ಜುನ್ ಮಾತ್ರ, ಉರ್ಫಿಯ ಆಸೆಯನ್ನು ಪೂರೈಸುವ ಮೂಲಕ ಭಿನ್ನವಾಗಿ ನಿಂತಿದ್ದಾರೆ.