ಬೆಂಗಳೂರು: ಬಿಗ್‍ಬಾಸ್ ಸೀಸನ್-5ರ ಟ್ರೋಫಿ ಮುಡಿಗೇರಿಸಿಕೊಂಡಿರೋ ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ ಸೋಮವಾರ ರಾತ್ರಿ ಬಿಡದಿಯ ಫಿಲ್ಮ್ ಸಿಟಿಯಿಂದ ನಿರ್ಗಮಿಸಿದ್ದರು.
105ದಿನ ಬಿಗ್‍ಬಾಸ್ ಮನೆಯಲ್ಲಿ ಭರ್ಜರಿ ಮನರಂಜನೆ ನೀಡಿ ಜನರ ಮನ ಗೆದ್ದಿದ್ದ ಚಂದನ್ ಶೆಟ್ಟಿಯನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಸಾವಿರಾರು ಜನರೊಂದಿಗೆ ಆಗಮಿಸಿದ್ದರು. ಆಂಜನೇಯ ದೇವಸ್ಥಾನಕ್ಕೆ ತೆರಳಿ ಚಂದನ್ ಶೆಟ್ಟಿ ಪೂಜೆ ಸಲ್ಲಿಸಿ ಪಬ್ಲಿಕ್ ಟಿವಿಗೆ ಆಗಮಿಸಿದ್ದರು.
Advertisement
Advertisement
ಪಬ್ಲಿಕ್ ಟಿವಿಗೆ ಬಂದಿದ್ದ ಚಂದನ್ ಶೆಟ್ಟಿಗೆ ಅರ್ಜುನ್ ಜನ್ಯ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಚಂದು ನನಗೆ ತುಂಬಾನೇ ಖುಷಿಯಾಗಿದೆ. ನಾನು ನಿನ್ನನ್ನು ಮೊದಲಿನಿಂದ ನೋಡಿದ್ದೇನೆ. ನೀನು ಕಷ್ಟ ಪಟ್ಟಿದ್ದನ್ನು ಹಾಗೂ ಕನಸು ಕಂಡಿದ್ದರ ಬಗ್ಗೆ ನನಗೆ ತಿಳಿದಿದೆ. ಯಾರಾದರೂ ಕನಸು ಕಂಡು ಅದನ್ನು ಸಾಧಿಸಿದಾಗ ಆಗುವ ಖುಷಿ ನನಗೂ ತಿಳಿದಿದೆ. ನೀನು ಈ ಚಿಕ್ಕ ವಯಸ್ಸಿನಲ್ಲೇ ಒಬ್ಬನೇ ಕಷ್ಟಪಟ್ಟು ಒಬ್ಬನೇ ರ‍್ಯಾಪ್ ಮಾಡಿ ಅದನ್ನು ಹಾಡಿ ನಂತರ ಒಬ್ಬನೇ ವಿಡಿಯೋ ಮಾಡಿ ನಿನ್ನದೇ ಒಂದು ದಾರಿಯನ್ನು ಕಂಡುಕೊಂಡಿದ್ದೀಯ. ಅದು ನನಗೆ ಖುಷಿಯಾಗುತ್ತಿದೆ. ದೇವರು ನಿನಗೆ ಒಳ್ಳೆದು ಮಾಡಲಿ ಹಾಗೂ ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅರ್ಜುನ್ ಮಾತಿಗೆ ಪ್ರತಿಕ್ರಿಯಿಸಿದ ಶೆಟ್ಟಿ, ಸರ್. ನಿಮ್ಮ ಆರ್ಶೀವಾದ ನನ್ನ ಮೇಲೆ ಯಾವಾಗಲೂ ಇದೆ. ನಿಮ್ಮ ಸ್ಟೂಡೆಂಟ್ ಎಂದು ಹೇಳಿಕೊಳ್ಳಲು ನನಗೆ ಬಹಳ ಹೆಮ್ಮೆಯಿದೆ. ನೀವು ಪ್ರತಿ ಸಲ ನನಗೆ ಸಿಕ್ಕಿದಾಗ ಎರಡು ಮಾತನ್ನು ಆಡುತ್ತಿದ್ದೀರಿ. ಆದರೆ ಆ ಮಾತಲ್ಲಿ ದೊಡ್ಡ ಅರ್ಥವಿರುತ್ತಿತ್ತು. ನಾನು ಆ ಮಾತಗಳನ್ನು ಪಾಲಿಸುತ್ತಿದ್ದೇನೆ. ನೀವು ಹೇಳಿದ ಪ್ರತಿಯೊಂದು ಮಾತನ್ನೂ ನಾನು ಈವರೆಗೂ ಪಾಲಿಸುತ್ತಾ ಬಂದಿದ್ದೀನಿ. ನಾನು ಒಬ್ಬ ಚಂದನ್ ಶೆಟ್ಟಿ ಆಗಿರುವುದೇ ನಿಮ್ಮಿಂದ. ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷಮಿಸಿ ಸರ್ ಎಂದು ಹೇಳಿದ್ರು.
ನಿನ್ನ ಪರಿಶ್ರಮದಿಂದ ನೀನು ಚಂದನ್ ಶೆಟ್ಟಿ ಆಗಿದ್ದೀಯಾ? ನನಗೆ ನಿನ್ನ ಸ್ವಾಭಾವಿತ ನಡವಳಿಕೆ ನನಗೆ ಬಹಳ ಇಷ್ಟವಾಯಿತ್ತು. ಮನುಷ್ಯ ಎಷ್ಟೇ ಯಶಸ್ಸು ಕಂಡರೂ ಅವನಿಗೆ ಸ್ವಾಭಾವಿತ ನಡವಳಿಕೆಯಿರಬೇಕು. ಅದು ನಿನ್ನಲ್ಲಿ ಇದೆ. ಅದು ಇರೋವರೆಗೂ ನಿನ್ನನ್ನು ಯಾರೂ ಏನು ಮಾಡಲು ಆಗುವುದಿಲ್ಲ. ನಿನಗೆ ಯಾವುದೇ ಅಡಚನೆ ಕೂಡ ಇರುವುದಿಲ್ಲ. ಆ ಸ್ವಭಾವನ್ನು ನಾನು ಬಿಗ್‍ಬಾಸ್ ಮನೆಯಲ್ಲಿ ಕಂಡಿದ್ದೇನೆ. ಚಂದನ್ ಮೆಚ್ಯೂರಿಟಿಯನ್ನು ಕಂಡಿದ್ದಾನೆ ಎಂದು ಅನಿಸಿತ್ತು ಅಂತ ಅರ್ಜುನ್ ಜನ್ಯ ಹೇಳಿದ್ರು.
ಚಂದನ್ ಶೆಟ್ಟಿ ಯಾಕೆ ಸ್ಪೆಷಲ್: ಚಂದನ್ ಶೆಟ್ಟಿ ಒಬ್ಬ ಕನಸುಗಾರ. ಕನಸು ಕಾಣದಲ್ಲದೇ ಅದನ್ನು ನನಸು ಮಾಡಲು ಪ್ರಯತ್ನಿಸುತ್ತಾನೆ. ಆ ಕನಸಿನ ಹಿಂದೆ ಹೋಗಿ ತನ್ನದೇ ಆದ ಒಂದು ದಾರಿಯನ್ನು ಮಾಡಿಕೊಳ್ಳುತ್ತಾನೆ. `ಮೂರೇ ಮೂರು ಪೆಗ್’ ಹಾಡು ವಿಶ್ವದಾದ್ಯಂತ ಜನಪ್ರಿಯವಾಗಿದೆ. ನಾನು ದುಬೈಗೆ ಹೋದರು ಅಲ್ಲಿನ ಜನರು ಆ ಹಾಡನ್ನು ಕೇಳುತ್ತಾರೆ. ಇದು ಕರ್ನಾಟಕದ ಹೆಮ್ಮಯ ವಿಷಯ. ಚಂದನ್ ಶೆಟ್ಟಿಗೆ ಯಾವ ಗಾಡ್ ಫಾದರ್ ಇಲ್ಲ. ಯಾವ ಮ್ಯೂಸಿಕ್ ಬ್ಯಾಗ್ರೌಂಡ್ ಕೂಡ ಇಲ್ಲದೆ ಈ ರೀತಿ ಹಾಡುಗಳನ್ನು ಮಾಡುತ್ತಾನೆಂದರೆ ಅದು ದೇವರ ಆರ್ಶಿವಾದ ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಅರ್ಜುನ್ ಜನ್ಯ ಅವರು ಚಂದನ್ ಶೆಟ್ಟಿಯಿಂದ ಒಂದು ಹಾಡನ್ನು ಕೂಡ ಹಾಡಿಸಿದ್ದಾರೆ. ಅರ್ಜುನ ಜನ್ಯಗೋಸ್ಕರ ಚಂದನ್ ನಿವೇದಿತಾ ಗೌಡಗೆ ಹಾಡಿದ ಗೊಂಬೆ.. ಗೊಂಬೆ.. ಹಾಡನ್ನು ಹಾಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ