Connect with us

ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆ ಹಾಗೂ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಕನ್ನಡ ನಾಡಿನಲ್ಲಿ `ಮೂರೇ ಮೂರು ಪೆಗ್ಗಿಗೆ’ ಹಾಡಿನ ಮೂಲಕ ಫೀನಿಕ್ಸ್‍ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದಿದ್ದ ಚಂದನ್ ಶೆಟ್ಟಿಗೆ, ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ. ಇದೀಗ ಬಿಗ್ ಬಾಸ್ ಗೆದ್ದ ಚಂದನ್ ಗೆ ಅವರ ತಾಯಿ ಮುದ್ದಾದ ಉಡುಗೊರೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದ ಶೃತಿ ಪ್ರಕಾಶ್‍ಗೆ ಕಾದಿತ್ತು ಸರ್ ಪ್ರೈಸ್

ಚಂದನ್ ಶೆಟ್ಟಿ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಬಹಳ ಪ್ರೀತಿ. ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕಿಕೊಳ್ಳೋಕೆ ಬಹಳ ಇಷ್ಟ ಪಡುತ್ತಾರೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಅವರು ಪ್ರಾಣಿಗಳನ್ನು ಸಾಕಲು ಸಾಧ್ಯವಾಗಲಿಲ್ಲ. ಇದೀಗ ಅವರ ತಾಯಿ ನಾಯಿಮರಿಯನ್ನು ಉಡುಗೊರೆ ನೀಡುವ ಮೂಲಕ ಚಂದನ್ ಅವರಿಗೆ ಗೆಲುವಿನ ಖುಷಿಯ ಮೇಲೆ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

ರ್ಶಿಜ್ಲಾ ಬ್ರೀಡ್ ಎಂಬ ಚೈನಾ ನಾಯಿಮರಿಯನ್ನು ಚಂದನ್ ಅವರ ತಾಯಿ ಉಡುಗೊರೆ ನೀಡಿದ್ದಾರೆ. ಈ ನಾಯಿಮರಿಗೆ `ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರ ಆಸೆಯಾಗಿತ್ತು. ಚಂದನ್ ಅವರ ಆಸೆಯ ಪ್ರಕಾರವೇ ಆ ನಾಯಿಮರಿಗೆ `ಆಪಲ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

ಮೂಲತಃ ಹಾಸನದ ಶಾಂತಿಗ್ರಾಮದ ಚಂದನ್ ಶೆಟ್ಟಿ ಅವರ ತಂದೆ ಪರಮೇಶ್ ಹಾಗೂ ತಾಯಿ ಪ್ರೇಮಾ. ಚಂದನ್ ಶೆಟ್ಟಿಗೆ ಓರ್ವ ತಮ್ಮನಿದ್ದಾನೆ. ಚಂದನ್ ಸಾಹಿತ್ಯ ಬರಹಗಾರನಾಗಿದ್ದು, ಅಲೆಮಾರಿ ಚಿತ್ರದಲ್ಲಿ ಸಹ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ವರದನಾಯಕ, ಚಕ್ರವ್ಯೂಹ ಹಾಗೂ ಭಜರಂಗಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಚಿತ್ರಕ್ಕೆ ಸಾಹಿತ್ಯ ಬರೆದು, ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟಕಿಲಾ ಹಾಡು ಯೂಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯವಾಗಿತ್ತು.

Advertisement
Advertisement