ಮಕ್ಕಳದ್ದು ಯಾವಾಗಲೂ ಹುಡುಗಾಟಿಕೆಯ ಸ್ವಭಾವ. ಇದು ಪೋಷಕರು, ನೆರೆಹೊರೆಯವರಿಗೆ ಒಮ್ಮೊಮ್ಮೆ ಕಿರಿಕಿರಿ ಅನಿಸಬಹುದು. ಮಕ್ಕಳು ಪೋಷಕರಿಗೆ ಪ್ರೀತಿಪಾತ್ರರಾಗಿರುತ್ತಾರೆ. ಅಷ್ಟೇ ತಲೆನೋವಾಗಿಯೂ ಪರಿಣಮಿಸುತ್ತಾರೆ. ಆಗ ಮಕ್ಕಳಿಗೆ ಹೊಡೆಯುವುದು, ಗದರಿಸುವುದು ಇದ್ದೇ ಇರುತ್ತದೆ. ಆದರೆ ಮಕ್ಕಳೊಂದಿಗೆ ಜಗಳವಾಡುವ ಮುನ್ನ ಹೆತ್ತವರು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1) ಮಕ್ಕಳ ವ್ಯಕ್ತಿತ್ವವನ್ನು ದೂಷಿಸಬೇಡಿ
ಪೋಷಕರಾಗಿ ನೀವು ತಿಳಿದಿರಬೇಕಾದ ಪ್ರಮುಖ ವಿಷಯವೆಂದರೆ, ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವುದು. ನಿಮ್ಮ ಮಕ್ಕಳು ಬೆಳೆದು ಪ್ರಬುದ್ಧರಾದಾಗ ಅವರ ಪರಿಣಾಮಕಾರಿ ಮಾರ್ಗದರ್ಶಿ ಮತ್ತು ಪೋಷಕರಾಗಲು ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಅವರಲ್ಲಿ ವಿಶಿಷ್ಟ ವ್ಯಕ್ತಿತ್ವದ ಲಕ್ಷಣವಿದೆ ಎಂಬುದನ್ನು ನೆನಪಿನಲ್ಲಿಡಿ. ಆ ವ್ಯಕ್ತಿತ್ವ ಮಕ್ಕಳ ಜೀವನದುದ್ದಕ್ಕೂ ಇರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?
Advertisement
Advertisement
2) ಮಕ್ಕಳ ಭಾವನೆ ಅರಿಯಿರಿ
ಕೆಲವೊಮ್ಮೆ ಭಾವನೆಗಳನ್ನು ಗುರುತಿಸಲು ಕಷ್ಟವಾಗಬಹುದು. ನಿಮ್ಮ ಮಕ್ಕಳ ಆಂಗಿಕ ಭಾಷೆಯನ್ನು ನೋಡಿ. ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಿ. ಅವರು ಹೇಗೆ ಭಾವಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರ ನಡವಳಿಕೆಯನ್ನು ಗಮನಿಸಿ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಅವರ ಭಾವನೆಗಳನ್ನು ಒಪ್ಪಿಕೊಳ್ಳಿ.
Advertisement
3) ಮಕ್ಕಳೊಂದಿಗೆ ವಾದಕ್ಕಿಳಿಯುವುದು ಸರಿಯಲ್ಲ
ಮಕ್ಕಳು ಕೆಲವೊಮ್ಮೆ ತಿಳಿಯದೇ ತಪ್ಪು ಮಾಡುವುದು ಸಹಜ. ಇದನ್ನು ಹೆತ್ತವರು ಅರಿಯಬೇಕು. ಮಕ್ಕಳೊಂದಿಗೆ ಎಲ್ಲಾ ಸಂದರ್ಭದಲ್ಲೂ ವಾದಕ್ಕಿಳಿಯುವುದು ಸರಿಯಲ್ಲ. ವಾದ, ಪ್ರತಿವಾದ ಮನಸ್ಸುಗಳ ಮೇಲೆ ದುಷ್ಪರಿಣಾಮ ಬೀರಬಹುದು.
Advertisement
4) ಮಕ್ಕಳನ್ನು ಸಹಿಸಿಕೊಳ್ಳುವ ಗುಣ ಬೇಕು
ಕೆಲವೊಂದು ಸಂದರ್ಭದಲ್ಲಿ ಮಕ್ಕಳನ್ನೂ ಸಹಿಸಿಕೊಳ್ಳುವ ಗುಣವನ್ನು ಹೆತ್ತವರು ಪ್ರದರ್ಶಿಸಬೇಕು. ಸಣ್ಣ ಪುಟ್ಟ ತಪ್ಪುಗಳಿಗೆ ತಾಳ್ಮೆ ಕಳೆಕೊಳ್ಳದೇ ಮಕ್ಕಳನ್ನು ಮನ್ನಿಸಬೇಕು. ತಾಳ್ಮೆ, ಸಹನೆಯಿಂದ ಅವರಿಗೆ ಬುದ್ದಿಮಾತು ಹೇಳಿದರೆ ಖಂಡಿತಾ ದಾರಿಗೆ ಬರುತ್ತಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೈಲ್ವಾನ್‌ಗಳು: ಎನು ಇದು ಹೊಸ ಟ್ವಿಸ್ಟ್
5) ಮಕ್ಕಳ ಬಾಯಿ ಮುಚ್ಚಿಸಲು ಪ್ರಯತ್ನಿಸಬೇಡಿ
ಮಕ್ಕಳು ವಾದ ಮಾಡುವುದು ಸರಿಯಲ್ಲ. ಅವರಿಂದ ನಾವು ಕಲಿಯುವುದೇನೂ ಇಲ್ಲ ಎಂದು ಪೋಷಕರು ಭಾವಿಸಬಾರದು. ಮಕ್ಕಳು ನಿರಂತರವಾಗಿ ಕಲಿಯುತ್ತಾ, ವಿಕಾಸಗೊಳ್ಳುತ್ತಿರುತ್ತಾರೆ. ನಿಮ್ಮ ಮಕ್ಕಳಲ್ಲಿ ಬದಲಾವಣೆ ಬಯಸುವ ಮೊದಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ಸಂವಹನ ಮಾಡಲು ಉತ್ತಮ ಮಾರ್ಗವನ್ನು ಕಂಡುಹಿಡಿಯಲು, ನಿಮ್ಮ ದೃಷ್ಟಿಕೋನ ಬದಲಾಯಿಸಲು ನೀವು ಸಿದ್ಧರಾಗಿರಬೇಕು. ಅದನ್ನು ಸಾಧಿಸುವ ಪ್ರಯತ್ನಿಸದ ಹೊರತು ಏನೂ ಆಗುವುದಿಲ್ಲ.