DavanagereDistrictsKarnatakaLatestMain Post

ವೈಯಕ್ತಿಕ ದ್ವೇಷಕ್ಕೆ ಎರಡೂವರೆ ಎಕರೆ ಅಡಿಕೆ, ಪಪ್ಪಾಯಿ ಗಿಡ ಕಡಿದು ಹಾಕಿದ ಕಿಡಿಗೇಡಿಗಳು

ದಾವಣಗೆರೆ: ಮನುಷ್ಯ ತನ್ನ ಎದುರಾಳಿಯ ಬೆಳವಣಿಗೆ ನೋಡಿ ಆತನನ್ನು ನಾಶ ಮಾಡಲು ವೈಯಕ್ತಿಕ ದ್ವೇಷದಿಂದ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾನೆ ಎನ್ನುವುದಕ್ಕೆ ದಾವಣಗೆರೆ ಜಿಲ್ಲೆಯ ಬೋರಗೊಂಡನಹಳ್ಳಿಯಲ್ಲಿ ನಡೆದ ಎರಡೂವರೆ ಎಕರೆ ಅಡಿಕೆ, ಪಪ್ಪಾಯಿ ಗಿಡ ನೆಲಸಮ ಘಟನೆ ಸಾಕ್ಷಿಯಾಗಿದೆ.

ವೈಯಕ್ತಿಕ ದ್ವೇಷದ ಹಿನ್ನಲೆ ದುಷ್ಕರ್ಮಿಗಳು ಬೆಳೆದುನಿಂತ 1,200 ಅಡಿಕೆ ಗಿಡಗಳು ಹಾಗೂ 1,200 ಪಪ್ಪಾಯಿ ಗಿಡಗಳನ್ನು ರಾತ್ರೋರಾತ್ರಿ ಮಾರಣಹೋಮ ನಡೆಸಿದ್ದಾರೆ. ಬೋರಗೊಂಡನಹಳ್ಳಿ ಗ್ರಾಮದ ತಿಪ್ಪೇಸ್ವಾಮಿಗೆ ಸೇರಿದ ಎರಡೂವರೆ ಎಕರೆಯಲ್ಲಿ ಮೂರು ವರ್ಷದ ಅಡಿಕೆ ಗಿಡಗಳನ್ನು ಹಾಗೂ ಫಸಲಿಗೆ ಬಂದಿರುವ ಪಪ್ಪಾಯಿ ಗಿಡಗಳನ್ನು ದುಷ್ಕರ್ಮಿಗಳು ಒಂದು ಗಿಡ ಬಿಡದೆ ಕಡಿದು ಹಾಕಿದ್ದಾರೆ. ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದ ಮಗು- 10 ಗಂಟೆಗಳ ಕಾರ್ಯಾಚರಣೆ ನಂತ್ರ ರಕ್ಷಣೆ

ಕಳೆದ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದು ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತೋಟದಲ್ಲಿ ಕೆಲಸ ಮಾಡುವವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೆತ್ತ ಮಕ್ಕಳ ರೀತಿಯಲ್ಲಿ ಗಿಡಗಳನ್ನು ಸಾಕಿದ್ದು, ಈಗ ನೆಲಸಮವಾಗಿರುವುದನ್ನು ನೋಡಿ ಸಂಕಟ ಅನುಭಸುತ್ತಿದ್ದಾರೆ. ಅಲ್ಲದೆ ಈ ದುಷ್ಕರ್ಮಿಗಳು ಮಾಡಿದ ಕೆಲಸಕ್ಕೆ ಇಡೀ ಗ್ರಾಮಸ್ಥರೇ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂಟಿಯಾಗಿದ್ದ ಅಮ್ಮನಿಗೆ ಮದುವೆ ಮಾಡಿಸಿದ ಮಗಳು

Leave a Reply

Your email address will not be published.

Back to top button