ನವದೆಹಲಿ: ವಕ್ಫ್ (Waqf) ಆಸ್ತಿಯನ್ನು ಕಾಂಗ್ರೆಸ್ ನಾಯಕರು (Congress Leaders) ಲೂಟಿ ಮಾಡಿದ್ದಾರೆ. ಅವರನ್ನು ರಕ್ಷಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಯಾಕೆ ಪ್ರಯತ್ನಿಸುತ್ತಾರೆ? ಕಾಂಗ್ರೆಸ್ ನಾಯಕರು ವಿಜಯೇಂದ್ರ ಅವರ ಸಹೋದರರೇ? ಸಂಬಂಧಿಗಳೇ? ವಿಷಯಾಂತರಕ್ಕೆ ಸಿಬಿಐ ತನಿಖೆ ಬಗ್ಗೆ ಸರ್ಕಾರ ಮಾತನಾಡುತ್ತಿದೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಭಾಗ್ಯಗಳಿಗೆ ಬಳಸಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕಿದೆ. ವಾಲ್ಮೀಕಿ ನಿಗಮದಲ್ಲಿ 78 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಖುದ್ದು ಸಿಎಂ ಹೇಳಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ವೈದ್ಯರ ವಿರುದ್ಧ ಕುಟುಂಬಸ್ಥರಿಂದ ಲೋಕಾಯುಕ್ತಕ್ಕೆ ದೂರು
Advertisement
Advertisement
ಮುಡಾದ 14 ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದಾರೆ. ವಕ್ಫ್ ಆಸ್ತಿಯನ್ನು ಕಾಂಗ್ರೆಸ್‌ನವರು ಲೂಟಿ ಹೊಡೆದಿದ್ದಾರೆ. ಈಗ ಅದನ್ನು ವಿಷಯಾಂತರ ಮಾಡಲು ಅನ್ವರ್ ಮಾಣಿಪ್ಪಾಡಿ ವಿಚಾರ ಎತ್ತುತ್ತಿದ್ದಾರೆ. ಹಣದ ವ್ಯವಹಾರ ವಿಚಾರ ಸಿಬಿಐಗೆ ವಹಿಸಲು ಮುಂದಾಗಿದ್ದಾರೆ. ಇದನ್ನು ಸಿಬಿಐಗೆ ನೀಡುವುದಾದರೆ ಅದೇ ರೀತಿ ವಾಲ್ಮೀಕಿ, ಮುಡಾ, ವಕ್ಫ್ ಹಗರಣಗಳನ್ನು ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಸ್ ಬಾರದಕ್ಕೆ ಸಾರಿಗೆ ಅಧಿಕಾರಿಗೆ ವಿದ್ಯಾರ್ಥಿಗಳ ತರಾಟೆ
Advertisement
ವಿಜಯೇಂದ್ರ ವಿರುದ್ಧ 150 ಕೋಟಿ ವ್ಯವಹಾರದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿದೆ. ಕಾಂಗ್ರೆಸ್ ನಾಯಕರು ವಿಜಯೇಂದ್ರ ಬ್ರದರ್ಸ್, ಹಗರಣದಲ್ಲಿ ಅವರ ಕುಟುಂಬದವರು ಇದ್ದಾರಾ, ಸಂಬಂಧಿಕರು ಇದ್ದಾರಾ? ಈ ಪ್ರಕರಣದಲ್ಲಿ ಬಿಜೆಪಿಯವರ ಯಾರ ಕೈವಾಡವೂ ಇಲ್ಲ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ ಬಗ್ಗೆ ಜನರಿಗೆ ಗೊತ್ತಿದೆ. ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಿಎಂ ಮಗನ ಕೈವಾಡ ಇರಬಹುದು ಎಂದು ಪರೋಕ್ಷವಾಗಿ ಧರ್ಮಸಿಂಗ್ ಪುತ್ರನನ್ನು ಟಾರ್ಗೆಟ್ ಮಾಡಿದರು. ಇದನ್ನೂ ಓದಿ: Kalaburagi | ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ – ಕವಲಗಾ ಪಿಡಿಒ ಅಮಾನತು
Advertisement
ದೆಹಲಿ ಭೇಟಿ ಬಗ್ಗೆ ಮಾತನಾಡಿದ ಅವರು, ಜನ್ಮದಿನದ ಹಿನ್ನೆಲೆ ಹೆಚ್‌ಡಿ ಕುಮಾರಸ್ವಾಮಿ ಭೇಟಿಯಾಗಿದ್ದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ವೈಯುಕ್ತಿಕ ವಿಷಯದಲ್ಲಿ ಭೇಟಿಯಾಗಿದ್ದೇನೆ. ಶಿವಮೊಗ್ಗ ಕಾಲೇಜು ವಿಚಾರದಲ್ಲಿ ಮಾತುಕತೆ ನಡೆಸಿದ್ದೇನೆ. ಸೌಜನ್ಯಕ್ಕಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದರು. ದಾವಣಗೆರೆಯಲ್ಲಿ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಚರಿಸುವ ಬಗ್ಗೆ ಚರ್ಚೆ ಮಾಡಲಾಗುವುದು. ಇದಕ್ಕೆ ಯಾರ ಅನುಮತಿ ಬೇಕಿಲ್ಲ. ಇದರ ಬಗ್ಗೆ ಇಲ್ಲಿ ಮಾತನಾಡಲ್ಲ ಎಂದರು. ಇದನ್ನೂ ಓದಿ: ಕೋಲಾರ ನಗರದ 7ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸರಣಿ ಕಳ್ಳತನ – ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ