ಸೌತ್ ಸ್ಟಾರ್ ನಟಿ ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಶೋಭಿತಾ (Sobhita Dhulipala) ಜೊತೆ ಅಕ್ಕಿನೇನಿ ನಾಗಚೈತನ್ಯ (Nagachaitanya) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಈಗ ಮತ್ತೆ ಇಬ್ಬರೂ ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಮತ್ತೆ ನಟಿ ಜೊತೆ ನಾಗಚೈತನ್ಯ ತಗ್ಲಾಕೊಂಡಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಆರುಷಿ ಶರ್ಮಾ
ಇತ್ತೀಚೆಗೆ ನಾಗಪುರದ ತಿಪೇಶ್ವರ್ ವನ್ಯಜೀವಿಧಾಮಕ್ಕೆ ಶೋಭಿತಾ ಭೇಟಿ ನೀಡಿದ್ದರು. ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಮಾಡಿದ್ದರು. ಇದರಲ್ಲಿ ಅವರು ಕಾಡು ಸುತ್ತಾಡುತ್ತಿರುವ ಫೋಟೋ ಇದೆ. ಅದೇ ರೀತಿ ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್‌ಗ್ರೌಂಡ್ ಇದೆ. ಇದರಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎಂದು ರ‍್ಚೆಯಾಗುತ್ತಿದೆ. ಕಾಡು ಮೇಡು ಅಂತ ಇಬ್ಬರೂ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ.
View this post on Instagram
ಕೆಲ ತಿಂಗಳುಗಳ ಹಿಂದೆ ನಾಗಚೈತನ್ಯ- ನಟಿ ಶೋಭಿತಾ ಲಂಡನ್‌ಗೆ ತೆರಳಿದ್ದರು. ಅಲ್ಲಿ ಒಂದು ಹೋಟೆಲ್‌ನಲ್ಲಿ ಇವರು ಊಟಕ್ಕೆ ತೆರಳಿದ್ದರು. ಅಲ್ಲಿಯ ಶೆಫ್ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಹಿಂಭಾಗದಲ್ಲಿ ಶೋಭಿತಾ ಇದ್ದರು. ಇದರಿಂದ ಇವರ ಡೇಟಿಂಗ್ ವಿಷ್ಯ ಹೊರಬಿತ್ತು.
ಡೇಟಿಂಗ್ ವಿಚಾರಕ್ಕೆ ಅದಷ್ಟೇ ಸಾಕ್ಷಿ ಸಿಕ್ಕಿದ್ದರೂ ಕೂಡ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಗಾಸಿಪ್‌ಗೆ ತೆರೆ ಎಳೆಯುತ್ತಿದ್ದಾರೆ. ಸದ್ದಿಲ್ಲದೇ ಇಬ್ಬರೂ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಾರಾ? ಕಾಯಬೇಕಿದೆ.