ಆಂಸ್ಟರ್ಡ್ಯಾಮ್: ನೆದರ್ಲೆಂಡ್ನ ಸ್ಟೋನ್ಹೆಂಜ್ (Netherland Stonehenge) ಎಂದು ಕರೆಯಲ್ಪಟುವ 4,000 ವರ್ಷಗಳಷ್ಟು ಪುರಾತನವಾದ ರುದ್ರಭೂಮಿಯೊಂದನ್ನು ಡಚ್ ಪುರಾತತ್ವಶಾಸ್ತ್ರಜ್ಞರು (Archaeologists) ಪತ್ತೆ ಹಚ್ಚಿದ್ದಾರೆ.
ಸಮಾಧಿಯ ದಿಬ್ಬಗಳನ್ನು (Burial Ground) ಒಳಗೊಂಡಿರುವ ಈ ಸ್ಥಳವು 65 ಅಡಿ ವಿಸ್ತೀರ್ಣವಿದೆ. 60 ಪುರುಷರು ಹಾಗೂ ಮಹಿಳೆಯರು ಮತ್ತು ಮಕ್ಕಳ ಅವಶೇಷಗಳನ್ನ ಒಳಗೊಂಡಿದೆ ಎಂದು ಡಚ್ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ
- Advertisement 2
- Advertisement 3
ಈ ಸಮಾಧಿಯ ಸ್ಥಳದಲ್ಲಿ ಪ್ರಾಣಿಗಳ ಅಸ್ಥಿಪಂಜರಗಳು, ಮಾನವನ ತಲೆಬುರುಡೆಗಳು, ಕಂಚಿನ ಈಟಿಯಂತಹ ಬೆಲೆಬಾಳುವ ವಸ್ತುಗಳನ್ನು ಕಂಡುಹಿಡಿದಿದ್ದಾರೆ. ಟೈಲ್ ನಗರಪಾಲಿಕೆಗೆ 70 ಕಿಮೀ ದೂರದಲ್ಲಿರುವ ರೂಟರ್ಡ್ಯಾಮ್ನ ಪೂರ್ವದಲ್ಲಿ ಈ ಸ್ಥಳವನ್ನ ಉತ್ಖನನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
- Advertisement 4
ಇಂಗ್ಲೆಂಡ್ನ ಸ್ಟೋನ್ಹೆಂಜ್ನ (England Stonehenge) ಪ್ರಸಿದ್ಧ ಕಲ್ಲುಗಳಂತೆಯೇ ಅತಿದೊಡ್ಡ ದಿಬ್ಬವು ಸೂರ್ಯನ ಕ್ಯಾಲೆಂಡರ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಈ ಅಭಯಾರಣ್ಯದಲ್ಲಿ ಜನರು ವರ್ಷದ ವಿಶೇಷ ದಿನಗಳನ್ನ ಆಚರಿಸುತ್ತಾರೆ, ಧಾರ್ಮಿಕ ಕ್ರಿಯೆಗಳನ್ನ ನೆರವೇರಿಸುತ್ತಾರೆ. ಜೊತೆಗೆ ಅಂತ್ಯಸಂಸ್ಕಾರ ನೆರವೇರಿಸುವ ಮಹತ್ವದ ಸ್ಥಳವಾಗಿರಬೇಕು ಎಂದು ಹೇಳಲಾಗಿದೆ. ಏಕೆಂದರೆ ಮೆರವಣಿಗೆಗಾಗಿ ಬಳಸುವ ಮಾರ್ಗಗಳ ಉದ್ದಕ್ಕೂ ಸಾಲುಗಂಬಗಳಿರುವುದು ಕಂಡುಬಂದಿದೆ.
2017ರಲ್ಲಿ ಡಚ್ ಸಂಶೋಧಕರು ಉತ್ಖನನ ಮಾಡುವಾಗ ಅನೇಕ ಸಮಾಧಿಗಳನ್ನೂ ಸಹ ಕಂಡುಹಿಡಿದಿದ್ದಾರೆ. ಅದರಲ್ಲಿ ಇಂದಿನ ಇರಾಕ್ನ ಮೆಸಪಟೋಮಿಯಾದ ಮಹಿಳೆಯದ್ದಾಗಿತ್ತು. ಇದೀಗ ಮತ್ತೆ ನೆದರ್ಲ್ಯಾಂಡ್ನಲ್ಲಿ 4 ಸಾವಿರ ವರ್ಷಗಳ ಹಿಂದಿನ ಸಮಾಧಿಯನ್ನ ಪತ್ತೆಹಚ್ಚಿದ್ದು, ಇಲ್ಲಿನ ಪ್ರದೇಶದ ಜನರು ಸುಮಾರು 5,000 ಕಿಮೀ ವರೆಗಿನ ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅಂದಾಜಿಸಿದ್ದಾರೆ.
ಈ ಸಮಾಧಿಯನ್ನ ಪತ್ತೆಹಚ್ಚಿದ ಸಂಶೋಧಕರು, ಕಳೆದ 6 ವರ್ಷಗಳಲ್ಲಿ ಶಿಲಾಯುಗ, ಕಂಚಿನ ಯುಗ, ಕಬ್ಬಿಣಯುಗ, ರೋಮನ್ ಸಾಮ್ರಾಜ್ಯ ಮತ್ತು ಮಧ್ಯಯುಗಗಳಿಂದ ಉತ್ಖನನಗೊಂಡ ಮಿಲಿಯನ್ಗಿಂತಲೂ ಹೆಚ್ಚು ವಸ್ತುಗಳನ್ನ ಸಂಶೋಧಿಸಿದ್ದಾರೆ ಎಂದು ವರದಿಯಾಗಿದೆ.