ನವದೆಹಲಿ: ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆಗೆ ಶಾಹೀದ್ ಭಗತ್ ಸಿಂಗ್ ಅವರ ಹೆಸರನ್ನು ಇಡಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೆಹಲಿಯ ಸೈನಿಕ ಶಾಲೆಗೆ ಶಹೀದ್ ಭಗತ್ ಸಿಂಗ್ ಹೆಸರಿಡಲಾಗುವುದು. ಸಶಸ್ತ್ರ ಪಡೆಗಳ ಪೂರ್ವ ಸಿದ್ಧತಾ ಶಾಲೆಯು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಜರೋಡಾ ಕಲಾನ್‍ನಲ್ಲಿ 14 ಎಕರೆ ಕ್ಯಾಪಸ್‍ನ್ನು ಹೊಂದಿದೆ ಎಂದರು.
Advertisement
दिल्ली के सैनिक स्कूल का नाम शहीद भगत सिंह के नाम पर रखा जाएगा। Press Conference | LIVE https://t.co/2VuaR7tgXT
— Arvind Kejriwal (@ArvindKejriwal) March 22, 2022
2021ರ ಡಿಸೆಂಬರ್ 20ರಂದು ದೆಹಲಿಯಲ್ಲಿ ವಿದ್ಯಾರ್ಥಿಗಳನ್ನು ಸಶಸ್ತ್ರ ಪಡೆಗಳಿಗೆ ಸಿದ್ಧಪಡಿಸುವ ಶಾಲೆ ಬಗ್ಗೆ ಘೋಷಿಸಲಾಗಿತ್ತು. ಈ ಶಾಲೆಗೆ ಭಗತ್ ಸಿಂಗ್ ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆ ಎಂದು ಹೆಸರಿಸಲಾಗುವುದು. ಇದು ವಸತಿ ಶಾಲೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ: ಕಾಂಗ್ರೆಸ್ ಆಗ್ರಹ
Advertisement
Advertisement
9ನೇ ತರಗತಿಗೆ ಪ್ರವೇಶ ಪಡೆಯಲು ಮಾರ್ಚ್ 27ರಂದು ಅರ್ಹತಾ ಪರೀಕ್ಷೆ ನಡೆಯಲಿದ್ದು, ಮರುದಿನ 11ನೇ ತರಗತಿಗೆ ದಾಖಲಾತಿ ಪರೀಕ್ಷೆ ನಡೆಯಲಿದೆ. ಎರಡನೇ ಹಂತದಲ್ಲಿ ಸಂದರ್ಶನ ನಡೆಸಲಾಗುವುದು. ಇಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳು, ನೌಕಾಪಡೆ ಅಧಿಕಾರಿಗಳು ಮತ್ತು ವಾಯುಪಡೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ವಾಟಾಳ್ ನಾಗರಾಜ್ ವಿರುದ್ಧ ಎಫ್‍ಐಆರ್