ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಯಾವತ್ತೂ ವಾಸ್ತವಾಂಶ ಒಪ್ಪಿಕೊಳ್ಳುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಹಾವ – ಭಾವ ಸರಿ ಮಾಡಿಕೊಳ್ಳದೇ ಇದ್ದರೇ, ಕಾಂಗ್ರೆಸ್ (Congress) ಅಧಿಕಾರಕ್ಕೆ ಬರೋದು ಕಷ್ಟ ಎಂಬುದು ಕಾಂಗ್ರೆಸ್ ಆಂತರಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ಸಿದ್ದರಾಮಯ್ಯ ಯಾವತ್ತೂ ಸತ್ಯ ಒಪ್ಪುವುದಿಲ್ಲ. ಮತ್ತೆ ಮತ್ತೆ ತಾನೇ ಮೇಲು ಅಂತಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪಕ್ಕದಲ್ಲಿ ಇರಿಸಿಕೊಂಡು ಅವರ ಮುಂದೆ ತಾನೇ ಮೇಲು ಅನ್ನುವಂತ ಸ್ವಭಾವ ಸಿದ್ದರಾಮಯ್ಯನವರದ್ದು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಟ್ಟಿಟ್ಟರ್‌ನಿಂದ 150 ಕೋಟಿ ಅಕೌಂಟ್‌ಗಳು ಡಿಲೀಟ್ – ಎಲೋನ್ ಮಸ್ಕ್
ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆ ಕುರಿತಂತೆ ಮಾತನಾಡಿದ ಅವರು, ಗುಜರಾತ್ ಚುನಾವಣೆಗಿಂತ (Gujarat Election) ಹೆಚ್ಚಿನ ತಂತ್ರಗಾರಿಕೆ ಬಳಸಿ ಇನ್ನೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆದರೆ ಗುಜರಾತಿನಲ್ಲಿ ನಡೆದಂತೆ ಇಲ್ಲೂ ಕೆಲವರಿಗೆ ಟಿಕೆಟ್ ಕೈ ತಪ್ಪಬಹುದು ಎಂದರು. ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷರ ಎದುರೇ ಕಾರ್ಯಕರ್ತರ ಕಿತ್ತಾಟ