ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲು ಗೃಹ ಇಲಾಖೆ ಮುಂದಾಗಿದೆ. ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ಇಲಾಖೆ ನಿರ್ಧಾರ ಮಾಡಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪರಪ್ಪನ ಅಗ್ರಹಾರ ಜೈಲಿಗೆ ಸಂಪೂರ್ಣವಾಗಿ ಜಾಮರ್ ಅಳವಡಿಕೆ ಮಾಡುತ್ತೇವೆ ಎಂದು ತಿಳಿಸಿದರು.
Advertisement
Advertisement
ಹರ್ಷ ಕೊಲೆ ಆರೋಪಿಗಳು ಜೈಲಿನಲ್ಲಿ ಮಾಡಿದ ವೀಡಿಯೋ ನೋಡಿ ನನಗೆ ತುಂಬಾ ನೋವಾಯ್ತು. ಕೂಡಲೇ ಕ್ರಮ ತೆಗೆದುಕೊಂಡು ಜೈಲಿನ 15 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 30 ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಈಗ ಜೈಲಿನಲ್ಲಿ ಹೊಸ ಸಿಬ್ಬಂದಿಗಳೇ ಇದ್ದಾರೆ ಎಂದು ಮಾಗಿತಿ ನೀಡಿದರು. ಇದನ್ನೂ ಓದಿ: ಎಷ್ಟೇ ಸಿದ್ದರಾಮೋತ್ಸವ ಮಾಡಿದ್ರೂ 2023ರಲ್ಲಿ ಅಧಿಕಾರಕ್ಕೆ ಬರೋದೇ ಬಿಜೆಪಿ – ಆರಗ ಜ್ಞಾನೇಂದ್ರ ಭವಿಷ್ಯ
Advertisement
Advertisement
ಜೈಲಿನ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಮಾಡ್ತಿದ್ದೇವೆ. ಪರಪ್ಪನ ಅಗ್ರಹಾರ ಜೈಲಿಗೆ ಸಂಪೂರ್ಣ ಜಾಮರ್ ಅಳವಡಿಕೆ ಮಾಡೇ ಮಾಡುತ್ತೇವೆ. 2-3 ತಿಂಗಳ ಒಳಗೆ ಜಾಮರ್ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಯಾರಿಗೂ ಕಾಲ್ ಮಾಡೊದಕ್ಕೂ ಆಗಬಾರದು. ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು. ಇದನ್ನೂ ಓದಿ: KRS ಜಲಾಶಯಕ್ಕೆ ಹೆಚ್ಚಿದ ಒಳಹರಿವು – ಕಾವೇರಿಕೊಳ್ಳದ ಜನರಿಗೆ ಪ್ರವಾಹ ಭೀತಿ