ಬೆಂಗಳೂರು: ದಿನದ 24 ಗಂಟೆಯೂ ಟೌನ್‍ಶಿಪ್ ಭಾಗಗಳಲ್ಲಿ ಹೋಟೆಲ್ ತೆರೆಯಲು ಅನುಮತಿ ಕೊಡಲು ಕಷ್ಟ ಆಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಈ ಮೂಲಕ 24 ಗಂಟೆ ಹೊಟೇಲ್ ತೆರೆಯಲು ಅನುಮತಿ ನೀಡೋದಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ರಾಜ್ಯ ಮತ್ತು ಬೆಂಗಳೂರಿನಲ್ಲಿ ದಿನ 24 ಗಂಟೆ ಹೋಟೆಲ್ ಪ್ರಾರಂಭ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ಸ್ಟಾಂಡ್‍ಗಳಲ್ಲಿ ರಾತ್ರಿ ಪ್ರಯಾಣಿಕರು ಬರುತ್ತಾರೆ. ಇಂತಹ ಜನರಿಗೆ ಉಪಹಾರ ಸಿಗುವ ನಿಟ್ಟಿನಲ್ಲಿ ಆ ಭಾಗದಲ್ಲಿ ಹೋಟೆಲ್ ತೆರೆಯುವುದು ಸರಿಯಾಗಿದೆ. ಆದರೆ ಇಡೀ ಟೌನ್ ನಲ್ಲಿ ಹೋಟೆಲ್ ಓಪನ್ ಮಾಡಬೇಕು ಎನ್ನುವುದು ಕಷ್ಟ ಆಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಇಂಡಸ್ಟ್ರಿ ಡಿಪಾರ್ಟ್‍ಮೆಂಟ್ ಮತ್ತು ಕಾರ್ಮಿಕ ಇಲಾಖೆಗಳು ಚರ್ಚೆ ಮಾಡಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ನಮ್ಮ ಇಲಾಖೆ ಜೊತೆ ಚರ್ಚೆ ಮಾಡಿದಾಗ ಏನು ಸಮಸ್ಯೆ ಆಗುತ್ತೆ ಎಂದು ಹೇಳಿದ್ದೇವೆ. ಹೆಣ್ಣು ಮಕ್ಕಳು, ಸೇರಿದಂತೆ ಎಲ್ಲರಿಗೂ ರಾತ್ರಿ ಹೊತ್ತು ರಕ್ಷಣೆ ಕೊಡುವುದು ಸವಾಲಿನ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅನುಮತಿ ಕೊಡಬೇಕಾ ಎಂದು ಆಲೋಚನೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಈ ವರ್ಷ 2 ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಆರಗ ಜ್ಞಾನೇಂದ್ರ
ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ಸ್ಟ್ಯಾಂಡ್, ಇಂಡಸ್ಟ್ರಿ ಇರುವ ಕಡೆ ಮಾತ್ರ ಹೋಟೆಲ್ ಪ್ರಾರಂಭಕ್ಕೆ ಅನುಮತಿ ಕೊಡಬಹುದು. ಆದರೆ ಇಡೀ ಟೌನ್‍ನಲ್ಲಿ ಹೊಟೇಲ್ ಓಪನ್ ಮಾಡುವ ಬಗ್ಗೆ ಚರ್ಚೆ ಆಗಬೇಕು. ಈ ನಿಟ್ಟಿನಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ ರಾಜಸ್ಥಾನ ಸರ್ಕಾರಕ್ಕೆ ಸ್ವಲ್ಪ ಬುದ್ಧಿ ಹೇಳುತ್ತೀರಾ?: ಪ್ರತಾಪ್ ಸಿಂಹ