ಜನರಲ್ ರಾವತ್ ಮರಣ ಸಂಭ್ರಮಿಸಿದ ದೇಶ ವಿರೋಧಿಗಳಿಗೆ ಶಿಕ್ಷೆಯಾಗಬೇಕು: ಆರಗ ಜ್ಞಾನೇಂದ್ರ

Advertisements

ಬೆಂಗಳೂರು: ಭಾರತೀಯ ಸೇನಾ ಪಡೆಯ ವೀರ ಸೇನಾನಿ ಮತ್ತು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಅಕಾಲಿಕ ಸಾವಿನ ಕುರಿತು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರನ್ನು ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರರವರು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

Advertisements

ದೇಶದ ಹೆಮ್ಮೆಯ ಸೇನಾನಿಯ ಸಾವಿನ ಬಗ್ಗೆ ಸಂಭ್ರವಿಸುವಂಥಹ ಭಾವನೆಗಳನ್ನು ಜಾಲತಾಣದಲ್ಲಿ ಹರಿಬಿಡುವ ದುಷ್ಕರ್ಮಿಗಳು ದೇಶ ವಿರೋಧಿಗಳಾಗಿದ್ದು, ಅವರ ವಿಳಾಸವನ್ನು ಪತ್ತೆ ಹಚ್ಚಿ ವಿಕೃತ ಮನಸ್ಸುಗಳಿಗೆ ತಕ್ಕ ಶಿಕ್ಷೆ ಆಗಬೇಕು. ಆರೋಪಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸೈನಿಕರ ತವರು ಜಿಲ್ಲೆ ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದರು ಬಿಪಿನ್ ರಾವತ್

Advertisements

ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ಸಾವು, ದೇಶಕ್ಕೆ ಭರಿಸಲಾಗದ ಅತೀ ದೊಡ್ಡ ನಷ್ಟ. ರಾವತ್ ಅವರು ದೇಶಕ್ಕೆ ಸಲ್ಲಿಸಿರುವ ಸೇವೆ ಅಸಾಧಾರಣ ಮತ್ತು ದಿವಂಗತರ ಬಗ್ಗೆ ವಿಕೃತ ಪೋಸ್ಟ್ ಮಾಡುವವರನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನರಲ್ ರಾವತ್‍ರ ಮರಣವನ್ನು ಸಂಭ್ರಮಿಸಿದ ಕಿಡಿಗೇಡಿ ಅರೆಸ್ಟ್

Advertisements
Advertisements
Exit mobile version