ಶಿವಮೊಗ್ಗ: ನನ್ನ ನಿವಾಸದ ಎದುರು ಪ್ರತಿಭಟನೆ ನಡೆಸಿದವರು ಎಬಿವಿಪಿ ಕಾರ್ಯಕರ್ತರು ಹೌದೋ ಅಲ್ವಾ ಅಂತಾ ಅನುಮಾನ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಖಂಡಿಸಿ ನನ್ನ ಮನೆಗೆ ನುಗ್ಗಿದವರು ಎಬಿವಿಪಿ ಕಾರ್ಯಕರ್ತರೇ ಹೌದಾಗಿದ್ದರೇ ಶಾಂತಿಯಿಂದ ಇರಬೇಕು ಎಂದು ಮಾಡುತ್ತೇನೆ. ಈವರೆಗೂ ಎಬಿವಿಪಿ ಕಾರ್ಯರ್ತರನ್ನು ಬಂಧಿಸಿಲ್ಲ. ಕೆಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
Advertisement
Advertisement
ಪ್ರವೀಣ್ ಹತ್ಯೆಗೆ ಸಂಬಂಧಿಸಿ ಸಂಪೂರ್ಣ ತನಿಖೆ ನಂತರ ಎಲ್ಲಾ ಬಹಿರಂಗ ಆಗುತ್ತದೆ. ಮಂಗಳೂರು ಸದ್ಯಕ್ಕೆ ಶಾಂತಿಯುತವಾಗಿದೆ. ಘಟನೆ ನಡೆದಾಗ ಎನ್‍ಕೌಂಟರ್ ಮಾಡಬೇಕು ಅನಿಸುವುದು ಸಹಜವಾದ್ದು, ಆದರೆ ಸಾವಿಗೆ ಮತ್ತೊಂದು ಸಾವು ಪರಿಹಾರವಲ್ಲ. ಯುಪಿಯೇ ಬೇರೆ, ಕರ್ನಾಟಕವೇ ಬೇರೆ. ಅನೇಕ ಕಾರ್ಯಕರ್ತರು ತಮ್ಮ ನೋವಿನಿಂದ ಈ ರೀತಿಯ ಮಾತು ಆಡುತ್ತಿದ್ದಾರೆ ಎಂದ ಅವರು ವಿಶೇಷವಾಗಿ ಕೇಸ್ ತೆಗೆದುಕೊಂಡು ಹೋಗುತ್ತೇವೆ. ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗೆ ಮನವಿ ಮಾಡ್ತಿದ್ದೇವೆ. ಬಿಸಿ ಇದ್ದಾಗಲೇ ಜಡ್ಜ್‍ಮೆಂಟ್ ಬಂದರೆ ಒಳ್ಳೆಯದಾಗುತ್ತದೆ. ಪ್ರವೀಣ್ ಪ್ರಕರಣವನ್ನು ಎನ್‍ಐಎಗೆ ವಹಿಸಿದ್ದೇವೆ ಎಂದರು.
Advertisement
Advertisement
ಶಿವಮೊಗ್ಗದಲ್ಲಿ ಘಟನೆ ಆದಾಗ 48 ಗಂಟೆಯಲ್ಲಿ ಬಂಧಿಸಿ, ಎಎನ್‍ಐಗೆ ಕೊಟ್ಟಿದ್ದೇವೆ. ಈ ಹಿಂದಿನ ಸರ್ಕಾರದಲ್ಲಿ ಎಫ್‍ಐಆರ್ ಕೂಡಾ ಆಗುತ್ತಿರಲಿಲ್ಲ. ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರ ಬಯಲಾದಾಗ 15 ಜನರ ಅಮಾನತು ಮಾಡಿದ್ದೇವೆ. 30ಕ್ಕೂ ಹೆಚ್ಚು ಜನರ ವರ್ಗಾವಣೆ ಮಾಡಿದ್ದೇವೆ. ಒಂದೇ ದಿನದಲ್ಲಿ ಸುಧಾರಣೆ ಆಗುವುದಿಲ್ಲ. ಇವರು 65 ವರ್ಷ ರಾಜಕೀಯ ಮಾಡಿ ಹೀಗೆ ಮಾಡಿದ್ದಾರೆ. ಇದು ಒಂದು ದಿನ, ಒಂದು ತಿಂಗಳು, ಒಂದು ವರ್ಷದಲ್ಲಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಿಇಟಿ ಫಲಿತಾಂಶ ಪ್ರಕಟ- ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳೇ ಟಾಪರ್ಸ್
ಸಿದ್ದರಾಮಯ್ಯ ರಾಜೀನಾಮೆ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಕೇಳಲು ಸಿದ್ದರಾಮಯ್ಯ ಅವರಿಗೆ ಏನು ನೈತಿಕತೆ ಇದೆ. ನಿಮ್ಮ ಅವಧಿಯಲ್ಲಿ ಏನೇನು ನಡೆದಿದೆ ಎಂಬುದು ನಮಗೂ ಅರಿವಿದೆ. ಮತೀಯ ಸಂಘಟನೆ ಕೇಸ್ ವಾಪಸ್ ಪಡೆದಿದ್ದಾರೆ. ನಿಮ್ಮ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ಟಿಪ್ಪು ಜಯಂತಿ ಮಾಡಿ ರಕ್ತಪಾತ ಹರಿಸಿದರು. ವೋಟ್ ಬ್ಯಾಂಕ್ ನಿರ್ಮಾಣಕ್ಕಾಗಿ ಯಾರು ಯಾರನ್ನೋ ಬೆಳೆಸಿಟ್ಟರು ಎಂದು ವಾಗ್ದಾಳಿ ನಡೆಸಿದರು.
ನೀವು ಮಾಡಿದ ಪಾಪದ ಕೂಸನ್ನು ನಾವು ಸರಿ ಮಾಡ್ತಿದ್ದೇವೆ. ರಮೇಶ್ ಕುಮಾರ್ ಹಲ್ಲೆ ಮಾಡಿರುವುದು ಮಾಧ್ಯಮದ ಮೂಲಕ ನಮಗೆ ಗೊತ್ತಾಗಿದೆ. ಹಲ್ಲೆಗೊಳಗಾದ ಪತ್ರಕರ್ತ ದೂರು ಕೊಟ್ಟಿದ್ದರೆ ಕ್ರಮ ವಹಿಸುತ್ತೇವೆ. ಸಿದ್ದರಾಮಯ್ಯ ಅಸಮರ್ಥ ಆಗಿದ್ದಕ್ಕೆ ಅವರ ಕ್ಷೇತ್ರದಲ್ಲಿ ಅವರನ್ನು ಜನ ಸೋಲಿಸಿದರು. ಅವರ ಹಿರಿತನಕ್ಕೆ ಗೌರವ ಕೊಡ್ತೇನೆ. ಆದರೆ ಅಸಮರ್ಥ ಅನ್ನುವ ಪದ ಬೇಡ. ನಿಮ್ಮ ಅವಧಿಯಲ್ಲಿ ಗೃಹ ಇಲಾಖೆಯ ಜುಟ್ಟು ಜನಿವಾರ ಒಬ್ಬ ಅಧಿಕಾರಿಯ ಕೈಯಲ್ಲಿತ್ತು. ಇವರು ನನಗೆ ಸರ್ಟಿಫಿಕೇಟ್ ಕೊಡೋದು ಬೇಡ ಎಂದು ಕಿಡಿಕಾರಿದರು. ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಹೂ ಕೊಡಲು ಬಂದ ಕೈ ಕಾರ್ಯಕರ್ತೆ ವಶಕ್ಕೆ