ಬೆಂಗಳೂರು: 2021-22ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
2021-22ನೇ ಸಾಲಿನ ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಗೆ ನಡೆದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಇಂದು ಕೆಇಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿದರು. ಸಿಇಟಿ ಪರೀಕ್ಷೆಗೆ ಸುಮಾರು 2.16 ಲಕ್ಷ ವಿದ್ಯಾರ್ಥಿಗಳು ನೋಂದಣಿ ಆಗಿದ್ದರು. ಈ ಪೈಕಿ 2.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
Advertisement
Advertisement
ಎಂಜಿನಿಯರ್ ಗೆ – 1,71,656 ರ‍್ಯಾಂಕ್, ಕೃಷಿ ಕೋರ್ಸ್ ಗೆ 1,39,968 ರ‍್ಯಾಂಕ್, ಪಶುಸಂಗೋಪನೆ ಕೋರ್ಸ್ ಗೆ 1,42,820 ರ‍್ಯಾಂಕ್, ಯೋಗ ಮತ್ತು ನ್ಯಾಚುರೋಪತಿಗೆ 1,42,750 ರ‍್ಯಾಂಕ್ ಮತ್ತು ಬಿ ಫಾರ್ಮ್ ಗೆ 1,74,568 ರ‍್ಯಾಂಕ್ ನೀಡಲಾಗಿದೆ. ವಿಶೇಷ ಅಂದ್ರೆ 5 ಕೋರ್ಸ್‌ನ ಟಾಪ್ 9 ರ‍್ಯಾಂಕ್‌ಗಳನ್ನು ಬಹುತೇಕ ಬೆಂಗಳೂರಿನ ವಿದ್ಯಾರ್ಥಿಗಳು ಪಡೆದಿದ್ದಾರೆ.
Advertisement
Advertisement
ಈ ಬಾರಿ 7 ಅಂಕ ಗ್ರೇಸ್ ನೀಡಲಾಗಿದೆ. ಗಣಿತಕ್ಕೆ 5, ಭೌತಶಾಸ್ತ್ರ, ಮತ್ತು ರಸಾಯನಶಾಸ್ತ್ರಕ್ಕೆ ತಲಾ 1 ಅಂಕ ಗ್ರೇಸ್ ನೀಡಲಾಗಿದೆ. ಆಗಸ್ಟ್ 5 ರಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಸಂಪೂರ್ಣ ಆನ್ ಲೈನ್ ಮೂಲಕ ಪ್ರಕ್ರಿಯೆ ನಡೆಯಲಿದೆ. ಈ ವರ್ಷ ಸುಮಾರು 1.08 ಲಕ್ಷ ಸೀಟುಗಳು ಎಂಜಿನಿಯರಿಂಗ್ ನಲ್ಲಿ ಲಭ್ಯವಿದ್ದು, 57 ಸಾವಿರಕ್ಕೂ ಹೆಚ್ಚು ಸೀಟು ಸರ್ಕಾರದ ಕೋಟಾಗೆ ಸಿಗಲಿವೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.
ಎಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಅಪೂರ್ವ ಟಂಡನ್ ಮೊದಲ ರ‍್ಯಾಂಕ್ ಪಡೆದಿದ್ದು, ಎರಡನೇ ಹಾಗೂ ಮೂರನೇ ಸ್ಥಾನವನ್ನು ಮಾರತ್‍ಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‍ನ ವಿದ್ಯಾರ್ಥಿಗಳಾದ ಸಿದ್ದಾರ್ಥ ಸಿಂಗ್ ಹಾಗೂ ಆತ್ಮಕುರಿ ವೆಂಕಟ ಮಾದ್ ಕ್ರಮವಾಗಿ ಪಡೆದಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯಗೆ ಹೂ ಕೊಡಲು ಬಂದ ಕೈ ಕಾರ್ಯಕರ್ತೆ ವಶಕ್ಕೆ
ಬಿಎಸ್ಟಿ ಅಗ್ರಿಕಲ್ಚರ್ ವಿಭಾಗದಲ್ಲಿ ಎಚ್‍ಎಎಲ್ ಪಬ್ಲಿಕ್ ಸ್ಕೂಲ್‍ನ ಅರ್ಜುನ್ ರವಿಶಂಕರ್‌ಗೆ ಮೊದಲ ಸ್ಥಾನ, ಬೆಂಗಳೂರಿನ ಚೈತನ್ಯ ಇ ಟೆಕ್ನೋ ಕಾಲೇಜಿನ ಸುಮೀಸ್ ಎಸ್ ಪಾಟೀಲ್ ದ್ವಿತೀಯ ಸ್ಥಾನ ಹಾಗೂ ತುಮಕೂರಿನ ವಿದ್ಯಾನಿಕೇತನ ಪಿಯು ಕಾಲೇಜಿನ ಸುದೀಪ್ ವೈ.ಎಂಗೆ ತೃತೀಯ ಸ್ಥಾನ ದೊರಕಿದೆ.
ಯೋಗ ಮತ್ತು ನ್ಯಾಚುರೋಪತಿಯಲ್ಲಿ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸಿಯ ಹೃಷಿಕೇಶ್ ಪ್ರಥಮ ಸ್ಥಾನ ಗಳಿಸಿದ್ದು, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಕ್ರಮವಾಗಿ ಉಡುಪಿಯ ಮಾಧವ ಕೃಪ ಇಂಗ್ಲೀಷ್ ಸ್ಕೂಲ್‍ನ ವಿ. ರಾಜೇಶ್ ಹಾಗೂ ಬೆಂಗಳೂರಿನ ಚೈತನ್ಯ ಟೆಕ್ನೋದ ಕೃಷ್ಣ ಎಸ್. ಆರ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್
ಬಿ.ವಿ.ಎಸ್‍ಸಿ (ಪಶುಸಂಗೋಪನೆ)ಯಲ್ಲಿ ಬೆಂಗಳೂರಿನ ನ್ಯಾಷಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನ ಹೃಷಿಕೇಶ್ ಮೊದಲ ರ‍್ಯಾಂಕ್ ಪಡೆದಿದ್ದು, ಚೈತನ್ಯ ಇ ಟೆಕ್ನೋ ವಿದ್ಯಾರ್ಥಿಗಳಾದ ಮನಿಶ್ ಹಾಗೂ ಶುಭ ಕೌಶಿಕ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬಿ. ಫಾರ್ಮ್‍ನಲ್ಲಿ ನಾರಾಯಣ್ ಇ ಟೆಕ್ನೋ ಕಾಲೇಜಿನ ಶಿಶಿರ್ ಆರ್‍ಕೆ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸಿಯ ಹೃಷಿಕೇಶ್ ದ್ವಿತೀಯ ಸ್ಥಾನ ಪಡೆದಿದ್ದು, ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಅಪೂರ್ವ ಟಂಡನ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.