ಶಿವಮೊಗ್ಗ: ಹರ್ಷ ಕೇಸ್‍ನಲ್ಲಿ ಪ್ರಮುಖ ಆರೋಪಿಗಳ ಅರೆಸ್ಟ್ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರ್ಷ ಕೇಸ್‍ನಲ್ಲಿ ಪ್ರಮುಖ ಆರೋಪಿಗಳ ಅರೆಸ್ಟ್ ಆಗಿದೆ. ಬಂಧಿತರ ವಿಚಾರಣೆ ನಡೆಯುತ್ತಿದೆ. ಶಿವಮೊಗ್ಗ ಶಾಂತವಾಗಿದೆ. ಶಾಲಾ ಕಾಲೇಜುಗಳು ಆರಂಭವಾಗಿವೆ. ಶಿವಮೊಗ್ಗ ಜನತೆ ತಾಳ್ಮೆ ಕಳೆದುಕೊಳ್ಳದೇ ಸಹಕರಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ: ಹಾಲಪ್ಪ ಆಚಾರ್
ಹರ್ಷ ಕೊಲೆ ವ್ಯರ್ಥ ಆಗಲಿಕ್ಕೆ ಬಿಡದೇ, ಯಾರು ಈ ರೀತಿಯ ಕೊಲೆ ಮಾಡುವ ಮಾನಸಿಕತೆ ಇರುವವರು ಇದ್ದಾರೆ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಎಸ್‍ಡಿಪಿಐ, ಸಿಎಫ್‍ಐ ನಿಷೇಧ ಕುರಿತ ವಿಷಯ ಚರ್ಚೆಯಲ್ಲಿದೆ. ಆ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವ, ಯಾವ ವರದಿ ನೀಡಬೇಕೋ ಅದಕ್ಕೆ ಎಲ್ಲಾ ತಯಾರಿ ನಡೆಯುತ್ತಿದೆ. ಹರ್ಷ ಕೊಲೆ ಪ್ರಕರಣದ ಬಗ್ಗೆ ಪೊಲೀಸರೆ ಒಳ್ಳೆಯ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಇದ್ದರೆ ಎನ್‍ಐಎ ತನಿಖೆಗೆ ಬರೆಯುತ್ತೇವೆ. ಸದ್ಯಕ್ಕೆ ಪೊಲೀಸ್ ತನಿಖೆ ಬಿಟ್ಟು ಬೇರೆ ಯಾವುದೇ ತನಿಖೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ
ಕಳೆದ ಮೂರು ದಿನದ ಹಿಂದೆ ಹೊಸನಗರದಲ್ಲಿ ಪಿಎಸ್‍ಐ ಹಾಗು ಕಾನ್ಸ್‌ಟೇಬಲ್, ಬುದ್ದಿ ಮ್ಯಾಂದನ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಈ ಘಟನೆಯ ವೀಡಿಯೋವನ್ನು ನೋಡಿದ್ದೇನೆ. ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡುತ್ತೇನೆ. ನಂತರ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು ತಿಳಿಸುತ್ತೇನೆ. ಈ ಘಟನೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಸ್ವಲ್ಪ ಇದೆ. ಇದಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕು. ಗಾಂಜಾ ಮಾರಾಟಗಾರರು, ವ್ಯವಸಿಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸರ್ಕಾರ ಮಾದಕ ವಸ್ತುಗಳ ವಿರುದ್ಧ ದೊಡ್ಡ ಆಂದೋಲನ ಮಾಡಿದೆ. ಶಿವಮೊಗ್ಗ ನಗರದ ಎರಡು ಠಾಣೆಗಳ ವಿರುದ್ಧ ತನಿಖೆ ನಡೆಸುತ್ತಿದ್ದೇವೆ. ಪ್ರಕರಣದ ಹಿಂದೆ ಪೊಲೀಸರು ಯಾರು ಶಾಮೀಲು ಆಗಿದ್ದಾರೆ ಎಂಬುದು ಪತ್ತೆಯಾದರೆ ಬಿಡುವುದಿಲ್ಲ. ಪೊಲೀಸರಿಗೆ ಒಂದು ಕಾಯ್ದೆ, ಸಾಮಾನ್ಯ ಜನರಿಗೊಂದು ಕಾಯ್ದೆ ಇಲ್ಲ ಎಂದು ಹೇಳಿದ್ದಾರೆ.