ಬೆಂಗಳೂರು: ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಭರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಯಡವಟ್ಟು ಮಾಡಿಕೊಂಡಿದ್ದಾರೆ. ಹೇಳಿಕೆ ನೀಡಿದ ಅರ್ಧ ಗಂಟೆಯಲ್ಲೇ ಯೂಟರ್ನ್ ಹೊಡೆದಿದ್ದಾರೆ. ಅಲ್ಲದೇ ತಪ್ಪಾಯಿತು ಎಂದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿರುವ ಪ್ರಸಂಗ ನಡೆದಿದೆ.
ಏ.4ರಂದು ಮಧ್ಯರಾತ್ರಿ ಚಂದ್ರು ಕೊಲೆ ನಡೆದಿತ್ತು. ಉರ್ದು ಮಾತನಾಡಲು ಬರಲ್ಲ ಎಂದಿದ್ದಕ್ಕೆ ಚಂದ್ರು ಕೊಲೆ ಮಾಡಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು. ಆ ಮೂಲಕ ಕೋಮು ಗಲಭೆಗೆ ಮತ್ತಷ್ಟು ಪುಷ್ಠಿ ಕೊಡುವಂತೆ ಮಾತನಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ತಮ್ಮ ಹೇಳಿಕೆಗೆ ಯೂಟರ್ನ್ ಹೊಡೆದಿದ್ದಾರೆ. ಕೊಲೆ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರು ವಿಲನ್ ರೋಲ್ ಮಾಡ್ತಿದ್ದಾರೋ, ಕಾಮಿಡಿ ರೋಲ್ ಮಾಡ್ತಿದ್ದಾರೋ ಗೊತ್ತಿಲ್ಲ: ಹೆಚ್‌ಡಿಕೆ
Advertisement
Advertisement
ಆ ದಿನ ಚಂದ್ರು ಮತ್ತು ಸೈಮನ್ ಊಟಕ್ಕೆ ಹೋಗಿದ್ದರು. ಊಟ ಮಾಡಿಕೊಂಡು ಹೋಗುವಾಗ ಆರೋಪಿಗಳು ಮತ್ತು ಚಂದ್ರು ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಕೊಲೆಯಾಗಿದೆ ಎಂದು ಕಮಲ್ ಪಂತ್ ಅವರು ಸ್ಪಷ್ಟಪಡಿಸಿದ್ದಾರೆ. ನಂತರ ಗೃಹ ಸಚಿವರು ತಮ್ಮ ಹೇಳಿಕೆಯಿಂದ ತಪ್ಪಾಗಿದೆ ಎಂದು ಕ್ಷಮೆಯಾಚಿಸಿದ್ದಾರೆ.
Advertisement
ಉರ್ದು ಮಾತಾಡಲು ಚಂದ್ರುವಿಗೆ ಹೇಳಿದ್ದಾರೆ. ಉರ್ದು ಮಾತಾಡಲು ಬರಲಿಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂತ ಹೇಳಿದ್ದಕ್ಕೆ ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಚಂದ್ರು ಒಬ್ಬ ದಲಿತ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಬಂಧನ ಆಗಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಆರಗ ಜ್ಞಾನೇಂದ್ರ ಯಡವಟ್ಟಿನ ಹೇಳಿಕೆ ನೀಡಿದ್ದರು. ಇದನ್ನೂಓದಿ: ಉರ್ದು ಮಾತನಾಡಲು ಬರದಕ್ಕೆ ಚಂದ್ರು ಕೊಲೆ: ಆರಗ
Advertisement
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಗೃಹ ಸಚಿವ ವಿವಾದಾತ್ಮಕ ಹೇಳಿಕೆ ನೀಡುವುದು, ಯೂಟರ್ನ್ ಹೊಡೆಯುವುದು ಆರಗ ಜ್ಞಾನೇಂದ್ರ ಅವರಿಗೆ ಹೊಸದೆನಲ್ಲ. ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ವಿರೋಧ ಪಕ್ಷಗಳು ನನ್ನ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ಟೀಕೆಗೆ ಒಳಗಾಗಿದ್ದರು.
ಹಿಜಾಬ್, ಹಲಾಲ್, ಧ್ವನಿವರ್ಧಕ ತೆರವು ಬೆಳವಣಿಗೆಗಳೆಲ್ಲವೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಾಗಿವೆ. ಆದರೆ ಪ್ರತಿ ಬೆಳವಣಿಗೆಯಲ್ಲೂ ನನಗೆ ವಿಷಯ ಗೊತ್ತಿಲ್ಲ, ತಿಳಿದು ಹೇಳುತ್ತೇನೆ, ಮಾಹಿತಿ ಪಡೆಯುತ್ತೇನೆ ಎಂದು ಬೇಜವಾಬ್ದಾರಿ ಹೇಳಿಕೆಗಳನ್ನೇ ನೀಡುತ್ತಾ ಬಂದಿದ್ದಾರೆ. ಇದನ್ನೂ ಓದಿ: ಚಿಕನ್ ಖರೀದಿ ಮಾಡುವಾಗ ಗಲಾಟೆ – ಯುವಕ ಬರ್ಬರ ಹತ್ಯೆ
ರಾಜ್ಯದಲ್ಲಿ ಸಾಕಷ್ಟು ಗೊಂದಲದ ರಾಜಕೀಯ ವಾತವರಣ ಇರುವಾಗಲೇ ಮತ್ತೊಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರಿಂದಲೇ ಬೇಜವಾಬ್ದಾರಿ ಹೇಳಿಕೆ ಹೊರಬಂದಿದೆ ಪ್ರತಿಪಕ್ಷಗಳಿಗೆ ದೊಡ್ಡ ಆಹಾರ ಸಿಕ್ಕಿದೆ.
ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಕ್ಕೊಂದು ಹೇಳಿಕೆ ನೀಡುತ್ತಿರುವ ಅರಗ ಜ್ಞಾನೇಂದ್ರ ಅವರು ಕಾಮಿಡಿ ರೋಲ್ ಮಾಡಲು ಗೃಹ ಸಚಿವರಾಗಿದ್ದಾರಾ? ಅಥವಾ ವಿಲನ್ ರೋಲ್ ಮಾಡುತ್ತೀದ್ದಿರಾ ಎನ್ನುವುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.