`ಕೋಮುವಾದ’ (Communal Remark) ಹೇಳಿಕೆ ವಿವಾದದ ಬೆನ್ನಲ್ಲೇ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ (AR Rahman) ಪುತ್ರಿಯರು ಅಪ್ಪನ ಬೆನ್ನಿಗೆ ನಿಂತಿದ್ದಾರೆ. ಖತೀಜಾ ಹಾಗೂ ರಹೀಮಾ ತಂದೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಲಯಾಳಂ ಸಂಗೀತ ನಿರ್ದೇಶಕ ಕೈಲಾಶ್ ಮೆನನ್ ಅವರ ಪೋಸ್ಟನ್ನು ಹಂಚಿಕೊಂಡಿರುವ ಈ ಇಬ್ಬರೂ ಪುತ್ರಿಯರು, ಅಪ್ಪನ ತೇಜೋವಧೆ ನಡೀತಿದೆ ಅಂತ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಪ್ಪನಿಗೆ ತಮ್ಮ ಅಭಿಪ್ರಾಯವನ್ನು ಹೇಳುವ ವಾಕ್ ಸ್ವಾತಂತ್ರ್ಯ ಇಲ್ಲವೇ ಅಂತ ಪ್ರಶ್ನೆ ಮಾಡಿದ್ದಾರೆ.
ಕೈಲಾಶ್ ಮೆನನ್ ಅವರು ತಮಗಾಗುತ್ತಿರುವ ವೈಯಕ್ತಿಕ ಅನುಭವದ ಬಗ್ಗೆ ಮಾತಾಡಿದ್ದಾರೆ. ಪ್ರತಿಯೊಬ್ಬರಿಗೂ ಈ ಹಕ್ಕು ಇದೆಯಲ್ಲವೇ? ನೀವು ಅವರ ಮಾತನ್ನು ಒಪ್ಪದೇ ಇರಬಹುದು. ಆದರೆ, ಅವರಿಗೆ ವಾಕ್‌ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ? ಟೀಕೆಗಳು ಇರಬೇಕು. ಆದರೆ, ಗಡಿಮೀರಬಾರದು. ತೇಜೋವಧೆ, ದ್ವೇಷದ ಮಾತುಗಳು ಸರಿಯಲ್ಲ ಅಂತ ಕೈಲಾಶ್ ಮೆನನ್ ಅವರು ರೆಹಮಾನ್ ಪರ ಮಾತಾಡಿದ್ದರು. ಅಂದಹಾಗೆ, ವಿವಾದ ಜೋರಾಗುತ್ತಿರುವುದನ್ನು ಗಮನಿಸಿದ್ದ ರೆಹಮಾನ್, ನನ್ನ ಹೇಳಿಕೆಯನ್ನು ಅಪಾರ್ಥವಾಗಿ ಭಾವಿಸಲಾಗ್ತಿದೆ. ಭಾರತ ನನ್ನ ಸ್ಫೂರ್ತಿ ಮತ್ತು ತವರು. ಭಾರತೀಯನಾಗಿ ಹುಟ್ಟಲು ನಾನು ಪುಣ್ಯ ಮಾಡಿದ್ದೇನೆ. ಕೆಲವೊಮ್ಮೆ ನಮ್ಮ ಹೇಳಿಕೆ ಹಿಂದಿರುವ ಉದ್ದೇಶಗಳು ಅಪಾರ್ಥಕ್ಕೆ ಕಾರಣವಾಗುತ್ತವೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಅಂತ ಹೇಳಿದ್ದರು.
ಅಂದಹಾಗೆ, ರೆಹಮಾನ್ ಕೋಮುರಾಗಕ್ಕೆ ನಟಿ ಕಂಗನಾ ರಾವತ್, ಶೋಭಾ ಡೆ, ಪರೇಶ್ ರಾವನ್, ಸಾಹಿತಿ ಜಾವೇದ್ ಅಖ್ತರ್ ಸೇರಿದಂತೆ ಅನೇಕ ಬಾಲಿವುಡ್ ದಿಗ್ಗಜರು ಆಕ್ಷೇಪ ವ್ಯಕ್ತಪಡಿಸಿದ್ದರು.

