ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಎದುರು ಇರುವ ಅವರ ಭಾವಚಿತ್ರದ ಮುಂದೆ ಪುಟಾಣಿಗಳು ಇಂದು ನೃತ್ಯ ನಮನ ಸಲ್ಲಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅದ್ಭುತ ನಟ ಮಾತ್ರ ಅಲ್ಲ, ಅದ್ಭುತ ಡ್ಯಾನ್ಸರ್ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಅವರಿಗೆ ನಟನೆ ಎಷ್ಟು ಅಚ್ಚುಮೆಚ್ಚೋ ಅಷ್ಟೇ ಡ್ಯಾನ್ಸ್ ಕೂಡ ಇಷ್ಟ. ಅಪ್ಪು ಅವರನ್ನು ಹಲವು ಜನ ನೃತ್ಯದಿಂದಲೇ ಇಷ್ಟ ಪಡುತ್ತಾರೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್
ಅಪ್ಪುಗೆ ಡ್ಯಾನ್ಸ್ ಮಾಡುವುದು ಮತ್ತು ಡ್ಯಾನ್ಸ್ ಮಾಡುವವರನ್ನು ಪ್ರೋತ್ಸಾಹಿಸುವುದು ಇಷ್ಟ. ಅದರಂತೆ ಅಪ್ಪು ಕೆಂಗೇರಿಯ ನಾಟ್ಯಲೋಕ ಡಾನ್ಸ್ ಗ್ರೂಪಿನ ಡ್ಯಾನ್ಸ್ ನೋಡಿ ಭೇಷ್ ಎಂದಿದ್ದರು.
ಪ್ರಸ್ತುತ ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಈ ಹಿನ್ನೆಲೆ ಕೊರಿಯೋಗ್ರಾಫರ್ ಆನಂದ್ ಅವರ ವಿದ್ಯಾರ್ಥಿಗಳಾದ ಗಾನಿಕ, ಸಂಸ್ಕøತಿ, ವಂಶಿ, ತೇಜಸ್ವಿನಿ ಅಪ್ಪು ಹಾಡುಗಳಿಗೆ ಡಾನ್ಸ್ ಮಾಡುವುದರ ಮೂಲಕ ಅವರಿಗೆ ವಿಶೇಷ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು: ಬೊಮ್ಮಾಯಿ
ಕಾರ್ಯಕ್ರಮವೊಂದರಲ್ಲಿ ಅಪ್ಪು ಎದುರು ಈ ಪುಟಾಣಿಗಳು ಡ್ಯಾನ್ಸ್ ಮಾಡಿದ್ದು, ಅವರ ಕೈಯಿಂದ ಬಹುಮಾನ ಪಡೆದುಕೊಂಡಿದ್ದರು. ಅಪ್ಪು ಅವರನ್ನು ನೋಡುತ್ತಾ ಡ್ಯಾನ್ಸ್ ಆಸಕ್ತಿ ಬೆಳೆಸಿಕೊಂಡಿದ್ದರು. ಈಗ ಈ ಪುಟಾಣಿ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಡಾನ್ಸ್ ಮಾಡುವುದರ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.