ಚಿಕ್ಕಮಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಗಂಧದಗುಡಿ (Gandhad Gudi) ಚಿತ್ರ ಪ್ರದರ್ಶನದ ವೇಳೆ ಅಭಿಮಾನಿಗಳು ಥಿಯೇಟರ್ (Theater) ಒಳಗಡೆ ಪಟಾಕಿ (Fireworks) ಸಿಡಿಸಿದ ಪರಿಣಾಮ ಚಿತ್ರ ಪ್ರದರ್ಶನ ಕೆಲ ಕಾಲ ಸ್ಥಗಿತಗೊಂಡಿದ್ದ ಘಟನೆ ಇಂದು ಚಿಕ್ಕಮಗಳೂರಿನ (ನಾಗಲಕ್ಷ್ಮೀ ಥಿಯೇಟರ್‌ನಲ್ಲಿ ನಡೆದಿದೆ.
ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆಯೇ ಚಿತ್ರ ತೆರೆಕಂಡರೂ ಜಿಲ್ಲೆಯಲ್ಲಿ ಪ್ರದರ್ಶನವಾಗಿದ್ದು ಮಾತ್ರ ಮಧ್ಯಾಹ್ನ 12 ಗಂಟೆ ವೇಳೆಗೆ. ಬೆಳಗ್ಗೆಯಿಂದಲೂ ಥಿಯೇಟರ್ ಮುಂದೆ ಅಪ್ಪುನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದರು. ಸಿನಿಮಾ ಆರಂಭವಾಗುತ್ತಿದ್ದಂತೆಯೇ ತೆರೆ ಮೇಲೆ ಅಜಾತಶತ್ರು ಅಪ್ಪುನನ್ನು ನೋಡಿ, ಕೂಗಾಡಿ, ಶಿಳ್ಳೆ ಹೊಡೆದು, ಥಿಯೇಟರ್ ಒಳಗಡೆಯೇ ಪಟಾಕಿಯನ್ನೂ ಸಿಡಿಸಿದ್ದಾರೆ.
Advertisement
Advertisement
ಈ ವೇಳೆ ಕೆಲ ಅಭಿಮಾನಿಗಳು ಹೂವಿನ ಕುಂಡ, ಪಟಾಕಿಯನ್ನು ಹಚ್ಚಿದ್ದಾರೆ. ಇದರಿಂದ ಥಿಯೇಟರ್ ಒಳಗಡೆ ದಟ್ಟ ಹೊಗೆ ತುಂಬಿಕೊಂಡಿತ್ತು. ಪರಿಣಾಮ ಥಿಯೇಟರ್ ಮಾಲೀಕರು ಕೆಲ ಕಾಲ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರು. ಪಟಾಕಿಯ ಹೊಗೆ ಕಡಿಮೆಯಾದ ಬಳಿಕ ಪುನಃ ಚಿತ್ರವನ್ನು ಆರಂಭಿಸಿದ್ದಾರೆ. ಸಿನಿಮಾ ನಿಲ್ಲಿಸಿ ಬಂದ ಥಿಯೇಟರ್ ಮಾಲೀಕರು ಯಾರು ಕೂಡಾ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ
Advertisement
Advertisement
ಇದಕ್ಕೂ ಮುನ್ನ ಪುನೀತ್‌ನನ್ನು ಕಣ್ತುಂಬಿಕೊಳ್ಳಲು ಬೆಳಗ್ಗೆಯೇ ಥಿಯೇಟರ್ ಬಳಿ ಬಂದಿದ್ದ ಅಭಿಮಾನಿಗಳು ಥಿಯೇಟರ್‌ಗೆ ಹೂವಿನ ಹಾರ ಹಾಕಿದ್ದರು. ಅಪ್ಪು ಕಟೌಟ್‌ಗೂ ವಿವಿಧ ರೀತಿಯ ಬಣ್ಣ-ಬಣ್ಣದ ಹೂವುಗಳನ್ನು ಹಾಕಿ ಅಲಂಕರಿಸಿ, ಹಾಲಿನ ಅಭಿಷೇಕವನ್ನೂ ಮಾಡಿದ್ದರು. ಫಸ್ಟ್ ಶೋ ನೋಡಿದ ಅಭಿಮಾನಿಗಳಲ್ಲಿ ಹೆಚ್ಚಿನವರು ಕಾಲೇಜು ಹುಡುಗರೇ ಇದ್ದರು. ಇದನ್ನೂ ಓದಿ: ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಸಿ.ಟಿ ರವಿ ಮಸ್ತ್ ಸ್ಟೆಪ್