ಅಪ್ಪು ಸಮಾಧಿ ನೋಡಲು ಓಡುತ್ತಾ ಹೊರಟ ಮೂರು ಮಕ್ಕಳ ತಾಯಿ

Public TV
2 Min Read
PUNEETH FAN DHRWADA 1

ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ ಒಂದು ತಿಂಗಳು ಕಳೆದಿದೆ. ಅಪಾರ ಅಭಿಮಾನಿ ಸಮೂಹ ಹೊಂದಿದ್ದ ಪುನೀತ್‍ಗೆ ಎಲ್ಲ ಬಗೆಯ ಅಭಿಮಾನಿಗಳಿದ್ದರು. ಅಂಥ ನಟನನ್ನು ಕಳೆದುಕೊಂಡ ನೋವಿನಲ್ಲಿಯೂ ಅನೇಕ ಅಭಿಮಾನಿಗಳು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆ ಪೈಕಿ ಧಾರವಾಡದ ಈ ಮಹಿಳೆ ವಿಭಿನ್ನ ಜಾಗೃತಿಯೊಂದರ ಮೂಲಕ ಅವರ ಸಮಾಧಿ ಸ್ಥಳಕ್ಕೆ ಹೋಗುತ್ತಿದ್ದಾರೆ.

PUNEETH FAN DHRWADA

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ 30 ವರ್ಷದ ದ್ರಾಕ್ಷಾಯಿಣಿ ಪಾಟೀಲ್ ಅವರಿಗೆ ಮೊದಲಿನಿಂದಲೂ ಪುನೀತ್ ಅಂದರೆ ಪಂಚಪ್ರಾಣ. ಮೂರು ಮಕ್ಕಳ ತಾಯಿಯಾಗಿರುವ ದ್ರಾಕ್ಷಾಯಿಣಿ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಒಳ್ಳೆಯ ಓಟಗಾರ್ತಿ. ಮದುವೆಯಾದ ಬಳಿಕ ಸಂಸಾರದ ಜಂಜಾಟದಲ್ಲಿ ಸಿಲುಕಿ, ಸಾಧನೆ ಅಲ್ಲಿಗೆ ನಿಂತು ಬಿಟ್ಟಿತು. ಆದರೆ ಮೂರು ಮಕ್ಕಳ ತಾಯಿಯಾಗಿರುವ ಈಕೆ ಮನಗುಂಡಿ ಗ್ರಾಮದಿಂದ ಬೆಂಗಳೂರಿನಲ್ಲಿರುವ ಪುನೀತ್ ಸಮಾಧಿವರೆಗೆ ಓಡುತ್ತಲೇ ಹೋಗಲಿದ್ದಾರೆ. ಇಂದು ಓಟವನ್ನು ಆರಂಭಿಸಿರೋ ದ್ರಾಕ್ಷಾಯಿಣಿ 13 ದಿನಗಳಲ್ಲಿ ಬೆಂಗಳೂರು ತಲುಪಲಿದ್ದಾರೆ.

ದ್ರಾಕ್ಷಾಯಣಿ ಅವರು ಅಪ್ಪು ಅವರನ್ನು ಒಂದು ಬಾರಿಯಾದರೂ ನೋಡಲು ಆಗಿರಲಿಲ್ಲವಂತೆ. ಆದರೆ ಇದೀಗ ಅವರೇ ಇಲ್ಲ. ಹೀಗಾಗಿ ಅವರ ಸಮಾಧಿ ದರ್ಶನಕ್ಕೆ ಸುಮ್ಮನೆ ಹೋಗುವ ಬದಲಿಗೆ ಅವರ ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಸಾಗಿದರೆ ಒಳ್ಳೆಯದು ಎನ್ನುವ ಕಾರಣಕ್ಕೆ ಇಂಥದ್ದೊಂದು ಅಭಿಯಾನ ಆರಂಭಿಸಿದ್ದಾರೆ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

PUNEETH FAN DHRWADA 2

ನಿತ್ಯ ಸುಮಾರು 40 ಕಿ.ಮೀ. ಓಡುವ ಗುರಿ ಹೊಂದಿರೋ ದ್ರಾಕ್ಷಾಯಣಿ ಅವರು ದಾರಿ ಮಧ್ಯೆ ನೇತ್ರದಾನ, ರಕ್ತದಾನ, ದೇಹದಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಿದ್ದಾರೆ. ಇನ್ನು ಇವರ ಸಾಹಸಕ್ಕೆ ಪತಿ ಉಮೇಶ್ ಪಾಟೀಲ್ ಸಾಥ್ ನೀಡಿದ್ದು, ಅವರ ಜೊತೆ ವಾಹನದೊಂದಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ. ವಾಹನದಲ್ಲಿ ಮೂರು ಮಕ್ಕಳು ಹಾಗೂ ಅವರ ತಾಯಿ ಸಹ ಇದ್ದಾರೆ.

ಈಗಾಗಲೇ ಕ್ರೀಡಾ ಚಟುವಟಿಕೆ ಮೂಲಕ ತನ್ನ ಪ್ರತಿಭೆ ಪ್ರದರ್ಶಿಸಿ, ಊರಿಗೆ ಕೀರ್ತಿ ತಂದಿರೋ ಈ ಮಹಿಳೆ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಅಭಿಯಾನಕ್ಕೆ ಬೇಕಾಗುವ ಎಲ್ಲ ರೀತಿಯ ಸಹಾಯವನ್ನು ಮಾಡಿದ್ದಾರೆ. ಇದನ್ನೂ ಓದಿ: ಬುರ್ಖಾ ಧರಿಸದೇ ಫೋಟೋಶೂಟ್ – ಮಾಡೆಲ್ ನೋಡಿ ನೆಟ್ಟಿಗರು ಗರಂ

Share This Article
Leave a Comment

Leave a Reply

Your email address will not be published. Required fields are marked *