ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲಿ ಕೂಡ ಫ್ರೀ ಕಾಶ್ಮೀರ ಕೂಗು ಎದ್ದಿದೆ.
ಹೌದು. ನಗರದ ಚರ್ಚ್ ಸ್ಟ್ರೀಟ್ ರಸ್ತೆಯ ಗೋಡೆಗಳು ಮತ್ತು ಅಂಗಡಿ ಶೆಟರ್ ಗಳಲ್ಲಿ ಫ್ರೀ ಕಾಶ್ಮೀರ ಬರಹಗಳನ್ನು ಬರೆಯಲಾಗಿದೆ. ಅಲ್ಲದೆ ನೋ ಸಿಎಎ, ನೋ ಎನ್‍ಆರ್‍ಸಿ, ನೊ ಎನ್‍ಪಿಎ, ಬಿಜೆಪಿ ಈಸ್ ಕ್ಯಾನ್ಸರ್, ಮೋದಿ ಫ್ಯಾಸಿಸ್ಟ್ ಹೀಗೆ ಸಾಲು ಸಾಲು ಬರಹಗಳನ್ನು ಬರೆಯಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
Advertisement
ಮೋದಿ ಹಾಗೂ ಆರ್ ಎಸ್‍ಎಸ್ ಖಂಡಿಸಿ ಸಹ ಸಾಕಷ್ಟು ಬರಹಗಳನ್ನ ಬರೆಯಲಾಗಿತ್ತು. ಇಡೀ ರಸ್ತೆ ಹಾಗೂ ಶೆಟರ್‍ಗಳು ಮೋದಿ ವಿರೋಧಿ ಬರಹಗಳಿಂದ ಕೂಡಿ ಹೋಗಿತ್ತು. ಇದರ ಜೊತೆಗೆ ಫ್ರೀ ಕಾಶ್ಮೀರ ಅಂತ ಸಹ ಬರೆಯಲಾಗಿದ್ದು, ಮತ್ತಷ್ಟು ವಿವಾದ ಪಡೆದುಕೊಳ್ಳುವಂತೆ ಮಾಡಲಾಗಿತ್ತು.
Advertisement
ಸಿಸಿಟಿವಿಯಲ್ಲಿ ಸೆರೆ:
ಬೆಳಗ್ಗಿನ ಜಾವ 3.8ರ ಸುಮಾರಿಗೆ ಬಂದ ಇಬ್ಬರು ಸ್ಕೂಟರ್ ನಿಲ್ಲಿಸಿ ಸ್ಪ್ರೇ ಬಳಸಿ, ಬರಹಗಳನ್ನ ಬರೆದಿದ್ದಾರೆ. ಇವರು ಬರೆಯೋ ಬರಹಗಳು ಎದುರುಗಿದ್ದ ಬಿಲ್ಡಿಂಗ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷಗಳಲ್ಲಿ ಬರಹಗಳನ್ನ ಬರೆದು ಹೋಗಿದ್ದಾರೆ. ಯಾವಾಗ ಈ ವಿಚಾರ ವರದಿಯಾಯಿತೋ, ತಕ್ಷಣವೇ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಲ್ಲದೆ ಒಂದಷ್ಟು ಸಿಸಿಟಿವಿ ವಿಡಿಯೋಗಳನ್ನ ಸಂಗ್ರಹಿಸಿ ದೂರು ದಾಖಲಿಸಿಕೊಂಡು, ಆರೋಪಿಗಳಿಗಾಗಿ ಹುಡುಕಾಟ ನಡೆಸಲು ಆರಂಭಿಸಿದರು. ಇದನ್ನೂ ಓದಿ: ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು
Advertisement
ಈ ಮಧ್ಯೆ ಕಬ್ಬನ್ ಪಾರ್ಕ್ ಪೊಲೀಸರು ಮೋದಿ ವಿರೋಧಿ ಬರಹಗಳಿಗೆ ಪೈಂಟ್ ಹಾಕಿಸಿದರು. ಇದೇ ವೇಳೆ ಚರ್ಚ್‍ಸ್ಟ್ರೀಟ್‍ಗೆ ಬಂದ ಕೆಲ ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಘೋಷಣೆ ಕೂಗಿದರು. ಮೋದಿ ಪರ ಹಾಗೂ ಭಾರತ್ ಮಾತೆಗೆ ಜೈಕಾರ ಕೂಗಿ, ಸಿಎಎ ವಿರೋಧಿ ಬರಹಗಳಿಗೆ ಇವರು ಸಹ ಪೈಂಟ್ ಬಳಿಯೋ ಕೆಲಸ ಮಾಡಿದರು. ಸಿಎಎ ವಿರೊಧಿ ಬರಹ ಬರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ನಂತರ ವಿ ಸಪೋರ್ಟ್ ಸಿಎಎ ಅಂತ ಹಿಂದೂ ಸಂಘಟನೆ ಕಾರ್ಯಕರ್ತರು ಬರೆದರು. ಕೊನೆಗೆ ಇದ್ಯಾವುದು ಬೇಡ ಅಂತ ಕಬ್ಬನ್‍ಪಾರ್ಕ್ ಪೊಲೀಸರು, ಸಿಎಎ ಪರ ಹಾಗೂ ವಿರೋಧದ ಬರಹಗಳಿಗೆ ಕೂಡ ಪೈಂಟ್ ಬಳಿಯೋ ಕೆಲಸ ಮಾಡಿದರು. ಇದನ್ನೂ ಓದಿ: ವಿವಾದಿತ ಪೋಸ್ಟರ್ ಹಿಡಿದಿದ್ದ ಮೈಸೂರು ಯುವತಿ ನಾಪತ್ತೆ
ಸದ್ಯ ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಫ್ರೀ ಕಾಶ್ಮೀರ ಪೋಸ್ಟರ್ – ವಿಡಿಯೋ ಮೂಲಕ ಕ್ಷಮೆಯಾಚಿಸಿ ಸ್ಪಷ್ಟನೆ ನೀಡಿದ ಯುವತಿ