ರಾಮನಗರ: ಜಿಲ್ಲಾ ಪಂಚಾಯತ್ (Zilla Panchayat) ಎಫ್‌ಡಿಎ (FDA) ಸುಳ್ಳು ಆದೇಶ ಪತ್ರ ಸೃಷ್ಟಿಸಿ ಗುತ್ತಿಗೆ ಆಧಾರದ ಮೇಲೆ ನರೇಗಾ ಎಂಜಿನಿಯರ್ ನೇಮಕ ಮಾಡಿಕೊಂಡಿರುವ ಘಟನೆ ರಾಮನಗರ (Ramanagara) ಜಿಲ್ಲಾ ಪಂಚಾಯತ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ರಾಮನಗರ ಜಿ.ಪಂ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬಾತ ಮಧು ಎಂಬ ವ್ಯಕ್ತಿಯನ್ನು ಗುತ್ತಿಗೆ ಆಧಾರದಲ್ಲಿ ಎಂಜಿನಿಯರ್ ಕೆಲಸಕ್ಕೆ ನೇಮಕ ಮಾಡುಕೊಳ್ಳುವ ವಿಷಯವಾಗಿ ಜಿ.ಪಂ ಸಿಇಓ ದಿಗ್ವಿಜಯ್ ಬೋಡ್ಕೆರವರ ನಕಲಿ ಸಹಿ ಮಾಡಿ ನಕಲಿ ಆದೇಶ ಪತ್ರ ನೀಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
Advertisement
Advertisement
ಕಳೆದ ಮೂರು ತಿಂಗಳಿನಿಂದ ಮಧು ನರೇಗಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಕುರಿತು ಮಧು ನೇಮಕಾತಿ ಮೇಲೆ ಅನುಮಾನ ವ್ಯಕ್ತಪಡಿಸಿ, ಪರಿಶೀಲನೆ ನಡೆಸಿದ ವೇಳೆ ನಕಲಿ ಆದೇಶದ ಮೂಲಕ ನೇಮಕಾತಿ ಮಾಡಿಕೊಂಡಿರೋದು ಬಯಲಾಗಿದೆ. ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಡಿಎ ಅಭಿಷೇಕ್ ಹಾಗೂ ಮಧು ಮೇಲೆ ಎಫ್‌ಐಆರ್ ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಅಭಿಷೇಕ್ ತಲೆಮರೆಸಿಕೊಂಡಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ
Advertisement