ಬೆಂಗಳೂರು: ರಾಷ್ಟ್ರೀಯ ಪಕ್ಷವೊಂದರ ಜಗತ್ತಿನ ಅತ್ಯಂತ ಶ್ರೀಮಂತ ಮಹಿಳಾ ಅಧ್ಯಕ್ಷೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಪಡೆಯಲು ಇಂದೇ ಅರ್ಜಿಸಲ್ಲಿಸಿ ಎಂದು ಬಿಜೆಪಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಕಳೆದ ಮೂರು ದಿನಗಳಿಂದ ರಾಜಧಾನಿ ಬೆಂಗಳೂರನ್ನು ಕಾಂಗ್ರೆಸ್ಸಿಗರು ಹೈರಾಣಾಗಿಸಿದ್ದಾರೆ.
ನಕಲಿ ಗಾಂಧಿಗಳು ನಡೆಸಿದ ಲೂಟಿಯನ್ನು ಸಮರ್ಥಿಸಿ ಬೀದಿಗಿಳಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ.
ಕಾಂಗ್ರೆಸ್ಸಿಗರೇ, ಜನ ಸಾಮಾನ್ಯರ ಹಿತಾಸಕ್ತಿಗಿಂತ ನಕಲಿ ಗಾಂಧಿ ಕುಟುಂಬದ ಗುಲಾಮಿತನವೇ ಶ್ರೇಷ್ಠವಾಯಿತೇ?#ಕಾಂಗ್ರೆಸ್‌ತುರ್ತುಪರಿಸ್ಥಿತಿ
— BJP Karnataka (@BJP4Karnataka) June 16, 2022
Advertisement
ರಾಹುಲ್ ಗಾಂಧಿ ಇಡಿ ವಿಚಾರಣೆ ಹಾಗೂ ಸೋನಿಯಾ ಗಾಂಧಿಗೆ ಸಮನ್ಸ್ ನೀಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, `ಸೋನಿಯಾ ಗಾಂಧಿ ಕುಟುಂಬಕ್ಕೆ ಸ್ವಂತ ಮನೆನೂ ಇಲ್ರಿ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ #CorruptCONgress ಹ್ಯಾಶ್ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿರುವ ಬಿಜೆಪಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಇಂದೇ ಮನೆ ಪಡೆಯಲು ಅರ್ಜಿ ಸಲ್ಲಿಸಿ ಎಂದಿದೆ. ಜೊತೆಗೆ ಭ್ರಷ್ಟಾಧ್ಯಕ್ಷರೇ, ನಿಮಗೂ ಸ್ವಂತ ಮನೆಯ ಇದೆಯೋ ಇಲ್ಲವೋ ಎಂಬುದನ್ನು ಜನತೆಗೆ ತಿಳಿಸುವಿರಾ? ಎಂದು ಕುಟುಕಿದೆ.
Advertisement
ರಾಹುಲ್ ಗಾಂಧಿ #ED ವಿಚಾರಣೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುತ್ತಿದೆ.
ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನ ಹಾಗೂ ದಂಡ ಸಂಹಿತೆಗೆ ಅತೀತರನ್ನಾಗಿಸಲು ಕಾಂಗ್ರೆಸ್ ಹೊರಟಿದೆ.
ಇದು ಈ ದೇಶದ ಸಂವಿಧಾನ & ಕಾನೂನಿಗೆ ಮಾಡುತ್ತಿರುವ ಅವಮಾನವಲ್ಲವೇ?#ಕಾಂಗ್ರೆಸ್‌ತುರ್ತುಪರಿಸ್ಥಿತಿ
— BJP Karnataka (@BJP4Karnataka) June 16, 2022
Advertisement
ಟ್ವೀಟ್‌ನಲ್ಲಿ ಏನಿದೆ?
ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರುತ್ತಿದೆ. ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನ ಹಾಗೂ ದಂಡ ಸಂಹಿತೆಗೆ ಅತೀತರನ್ನಾಗಿಸಲು ಕಾಂಗ್ರೆಸ್ ಹೊರಟಿದೆ. ಇದು ಈ ದೇಶದ ಸಂವಿಧಾನ ಹಾಗೂ ಕಾನೂನಿಗೆ ಮಾಡುತ್ತಿರುವ ಅವಮಾನವಲ್ಲವೇ? ಇದನ್ನೂ ಓದಿ: ಸಿದ್ದರಾಮಯ್ಯರ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ: ಬಿಜೆಪಿ ಟೀಕೆ
Advertisement
ಕಳೆದ ಮೂರು ದಿನಗಳಿಂದ ರಾಜಧಾನಿ ಬೆಂಗಳೂರನ್ನು ಕಾಂಗ್ರೆಸ್ಸಿಗರು ಹೈರಾಣಾಗಿಸಿದ್ದಾರೆ. ನಕಲಿ ಗಾಂಧಿಗಳು ನಡೆಸಿದ ಲೂಟಿಯನ್ನು ಸಮರ್ಥಿಸಿ ಬೀದಿಗಿಳಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಕಾಂಗ್ರೆಸ್ಸಿಗರೇ ಜನ ಸಾಮಾನ್ಯರ ಹಿತಾಸಕ್ತಿಗಿಂತ ನಕಲಿ ಗಾಂಧಿ ಕುಟುಂಬದ ಗುಲಾಮಿತನವೇ ಶ್ರೇಷ್ಠವಾಯಿತೇ? ಭ್ರಷ್ಟರು, ಭ್ರಷ್ಟರಿಂದ, ಭ್ರಷ್ಟರ ರಕ್ಷಣೆಗಾಗಿ… ಇದು ಕೆಪಿಸಿಸಿಯ ಹೊಸ ನೀತಿ ಎಂದು ಬಿಜೆಪಿ ಸರಣಿ ಟ್ವೀಟ್‌ನಲ್ಲಿ ಕಿಡಿಕಾರಿದೆ.