ವಾಷಿಂಗ್ಟನ್: ಸೆಮಿಕಂಡಕ್ಟರ್ ಉಪಕರಣ ತಯಾರಕ (Semiconductor Equipment Maker) ಕಂಪನಿ Applied Materials ಬೆಂಗಳೂರಿನಲ್ಲಿ (Bengaluru) ಮುಂದಿನ 4 ವರ್ಷದಲ್ಲಿ 400 ದಶಲಕ್ಷ ಡಾಲರ್ (ಅಂದಾಜು 3,200 ಕೋಟಿ ರೂ) ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಚಿಪ್ ಕಂಪನಿ ಮೈಕ್ರಾನ್ ಗುಜರಾತಿನಲ್ಲಿ 2.75 ಶತಕೋಟಿ ಡಾಲರ್ ಹೂಡಿಕೆ ಪ್ರಕಟವಾದ ಬೆನ್ನಲ್ಲೇ ಅಪ್ಲೈಯ್ಡ್ ಮೆಟಿರಿಯಲ್ಸ್ ಹೂಡಿಕೆ ಘೋಷಣೆಯಾಗಿದೆ. ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ
Advertisement
Advertisement
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅಪ್ಲೈಯ್ಡ್ ಮೆಟಿರಿಯಲ್ಸ್ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಡಿಕರ್ಸನ್ (Gary E. Dickerson), ಇದು ಭಾರತವು ಬೆಳಗುವ ಸಮಯ ಎಂದು ನಾನು ಭಾವಿಸಿದ್ದೇನೆ. ನಾವು ಶೀಘ್ರದಲ್ಲೇ ಭಾರತದಲ್ಲಿ ನಾವೀನ್ಯತೆ ಕೇಂದ್ರವನ್ನು ಘೋಷಿಸಲಿದ್ದೇವೆ. ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವುದರಿಂದ ನಾವು ಅದ್ಭುತ ಯಶಸ್ಸನ್ನು ಗಳಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಫೈಟರ್ ಜೆಟ್ ಎಂಜಿನ್ ತಯಾರಿಕೆ – HAL ಜೊತೆಗೆ USನ GE ಏರೋಸ್ಪೇಸ್ ಒಪ್ಪಂದ
Advertisement
Advertisement
ಭಾರತವು ವಿಶ್ವಾಸಾರ್ಹ ಪಾಲುದಾರ ಮತ್ತು ಪ್ರಚಂಡ ಪ್ರತಿಭೆಯನ್ನು ಹೊಂದಿದೆ. ಪ್ರಧಾನಿ ಮೋದಿ ಮತ್ತು ಭಾರತದ ಜನರ ಜೊತೆ ಅದ್ಭುತ ಯಶಸ್ಸನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದೆ ಎಂದು ಹೇಳಿದರು.
ಈ ಹೂಡಿಕೆಯಿಂದ 500 ಹೊಸ ಸುಧಾರಿತ ಎಂಜಿನಿಯರಿಂಗ್ ಉದ್ಯೋಗಗಳು ಜೊತೆಗೆ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಸಂಭಾವ್ಯವಾಗಿ 2,500 ಉದ್ಯೋಗಗಳು ಸೃಷ್ಟಿಯಾಗಲಿದೆ.