ನವದೆಹಲಿ: ಆಪಲ್ ಕಂಪೆನಿಯು ಮೊದಲ ಬಾರಿಗೆ ಡ್ಯುಯಲ್ ಸಿಮ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ ಈಗ ಇರುವ ಡ್ಯುಯಲ್ ಸಿಮ್ ನಂತೆ ಈ ಫೋನ್ ನಲ್ಲಿ ಎರಡು ಟ್ರೇಯಲ್ಲಿ ಸಿಮ್ ಹಾಕಲು ಸಾಧ್ಯವಿಲ್ಲ.
ಹೊಸ ಐಫೋನ್ ಎಕ್ಸ್ಎಸ್, ಎಕ್ಸ್ಎಸ್ ಮ್ಯಾಕ್ಸ್ ಹಾಗೂ ಎಕ್ಸ್ಆರ್ ಫೋನುಗಳಿಗೆ ಇ ಸಿಮ್ ಹಾಕಿ ಕರೆ ಮಾಡಬಹುದು. ಸಿಮ್ ಕಾರ್ಡ್ ಗಳನ್ನು ನಾವು ನೋಡಬಹುದು. ಆದರೆ ಇ-ಸಿಮ್ ಕಾರ್ಡ್ ಗಳನ್ನು ನೋಡಲು ಸಾಧ್ಯವಿಲ್ಲ. ಐಫೋನ್ ನ್ಯಾನೋ ಸಿಮ್ ಸ್ಲಾಟ್‍ನೊಂದಿಗೆ ಲಭ್ಯವಾದರೆ, ಇನ್ನೊಂದು ಡಿಜಿಟಲ್ ಮಾದರಿಯ ಸಿಮ್ ಆಗಿರುತ್ತದೆ.
Advertisement
ಈ ಫೋನ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಆಪಲ್ ಕಂಪೆನಿಯ ಮಾರುಕಟ್ಟೆ ಉಪಾಧ್ಯಕ್ಷ ಫಿಲಿಪ್ ಷಿಲ್ಲರ್, ಬಹಳಷ್ಟು ಜನ ವಿದೇಶಕ್ಕೆ ಪ್ರವಾಸ ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂವಹನಕ್ಕಾಗಿ ಆ ದೇಶದಲ್ಲಿರುವ ಸಿಮ್ ಕಾರ್ಡ್ ಬಳಸಲು ತಾನು ಬಳಸುತ್ತಿರುವ ಸಿಮ್ ತೆಗೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಇ ಸಿಮ್ ವಿಶೇಷತೆಯನ್ನು ಸೇರಿಸಲಾಗಿದೆ ಎಂದು ತಿಳಿಸಿದರು.
Advertisement
Advertisement
ಏನಿದು ಇ-ಸಿಮ್?
ಇ-ಸಿಮ್ ಎಂದರೆ ಎಂಬೆಡೆಡ್ ಸಬ್‍ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್. ಇದು ಮ್ಯಾನುವಲ್ ಸಿಮ್ ರೀತಿಯಂತೆ ಕಾರ್ಯನಿರ್ವಹಿಸಲಿದ್ದು, ಯಾವುದೇ ಸಿಮ್‍ಗಳ ಅವಶ್ಯಕತೆ ಇರುವುದಿಲ್ಲ. ಫೋನುಗಳಲ್ಲಿ ಒಂದು ಸಾಮಾನ್ಯ ಸಿಮ್ ಸ್ಲಾಟ್ ಇದ್ದೇ ಇರುತ್ತದೆ. ಇದರ ಜೊತೆ ಇ-ಸಿಮ್ ಮುಖಾಂತರ ಇನ್ನೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಇ-ಸಿಮ್‍ಗಳನ್ನು ಮುಂದಿನ ಪೀಳಿಗೆಯ ಪರಿಣಾಮಕಾರಿ ಸಂವಹನ ತಂತ್ರಜ್ಞಾನವೆಂದೇ ಪರಿಗಣಿಸಲಾಗಿದೆ.
Advertisement
ಭಾರತದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ?
ಇ-ಸಿಮ್ ತಂತ್ರಜ್ಞಾನಕ್ಕೆ ಭಾರತದ ಕಂಪೆನಿಗಳು ಕೈಜೋಡಿಸಿದ್ದು, ಈಗಾಗಲೇ ಜಿಯೋ ಹಾಗೂ ಏರ್‌ಟೆಲ್ ಕಂಪೆನಿಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಹೀಗಾಗಿ ಭಾರತದಲ್ಲಿನ ಇ-ಸಿಮ್ ಫೋನ್‍ಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೊಬೈಲ್ ಖರೀದಿಸಿದ ನಂತರ ಗ್ರಾಹಕರು ತಮ್ಮ ಮ್ಯಾನುವಲ್ ಸಿಮ್‍ನೊಂದಿಗೆ ಇನ್ನೊಂದು ಸಿಮ್‍ನ ಅವಶ್ಯಕತೆಯಿದ್ದರೆ ಇ-ಸಿಮ್ ಮುಖಾಂತರ ಮತ್ತೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಗೂಗಲ್ ಪಿಕ್ಸೆಲ್ 2 ಮೊದಲ ಬಾರಿಗೆ ಇ-ಸಿಮ್ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಪ್ರಸ್ತುತ ಇ-ಸಿಮ್ ವಿಶೇಷತೆ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು ಡ್ಯುಯಲ್ ಸಿಮ್ ಐಫೋನ್‍ಗಳು: ಭಾರತಕ್ಕೆ ಯಾವಾಗ ಬರುತ್ತೆ? ಬೆಲೆ ಎಷ್ಟು?
ಹೇಗೆ ಸಹಕಾರಿ?
ಮೆಸೇಂಜಿಗ್ ಅಪ್ಲಿಕೇಶನ್ ಗಳಿಗೆ ಫೋನ್ ನಂಬರ್ ಬೇಕೇಬೇಕು. ಆದರೆ ಒಂದು ಬಾರಿ ಅಪ್ಲಿಕೇಶನ್ ಇನ್ ಸ್ಟಾಲ್ ಆದ ನಂತರ ಸಿಮ್ ತೆಗೆಯಬಹುದು. ಆದರೆ ಈ ಅಪ್ಲಿಕೇಶನ್ ಕೆಲಸ ಮಾಡಲು ಇಂಟರ್ ನೆಟ್ ಸಂಪರ್ಕ ಬೇಕಾಗುತ್ತದೆ. ಉದಾಹರಣೆಗೆ ಭಾರತದ ವ್ಯಕ್ತಿಯೊಬ್ಬರು ಅಮೆರಿಕಕ್ಕೆ ಹೋದರೆ ಮೊಬೈಲ್ ಡೇಟಾ ಮೂಲಕವೇ ಇಂಟರ್ ನೆಟ್/ ಮೆಸೇಜಿಂಗ್ ಆಪಿಕ್ಲೇಶನ್ ಮೂಲಕ ಓಪನ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಭಾರತದ ಕಂಪೆನಿಗಳು ಅಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಡೇಟಾ ಬೇಕಾದರೆ ಅಮೆರಿಕದ ಟೆಲಿಕಾಂ ಕಂಪೆನಿಯ ಸಿಮ್ ಬಳಕೆ ಮಾಡಬೇಕಾಗುತ್ತದೆ. ಸಿಮ್ ತೆಗೆಯುವುದು, ಸಿಮ್ ಹಾಕುವ ಕೆಲಸ ತ್ರಾಸದಾಯಕ. ಈ ಸಮಸ್ಯೆಯನ್ನು ದೂರ ಮಾಡಲು ಇ ಸಿಮ್ ಸಹಕಾರಿಯಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv