InternationalLatestMain Post

ತಾಪಮಾನ ಹೆಚ್ಚಳದಿಂದ ಆಪಲ್ ವಾಚ್ ಸ್ಫೋಟ

ವಾಷಿಂಗ್ಟನ್: ಆಪಲ್ ಬ್ರ್ಯಾಂಡ್ ನೋಡಿಕೊಂಡು ಗ್ಯಾಜೇಟ್ ಖರೀದಿಸುತ್ತಾರೆ. ಆದರೆ ಆಪಲ್ ವಾಚ್‍ನ ಬ್ಯಾಟರಿಯ ತಾಪಮಾನ ಹೆಚ್ಚಿದ್ದರಿಂದ ಸ್ಫೋಟಗೊಂಡಗೊಂಡ ಘಟನೆ ಅಮೆರಿಕದ ಅಮೆರಿಕದಲ್ಲಿ (US)  ನಡೆದಿದೆ.

ಆಪಲ್ ವಾಚ್‍ನಲ್ಲಿ (Apple Watch) ತಾಪಮಾನ ಹೆಚ್ಚಿದ ಪರಿಣಾಮ ವಾಚ್‍ನ ಹಿಂಬದಿ ಬಿರುಕು ಬಿಟ್ಟಿದೆ. ಇದನ್ನು ಗಮನಿಸಿದ ತಕ್ಷಣ ಬಳಕೆದಾರ ಆಪಲ್ ಬೆಂಬಲಕ್ಕೆ ಕರೆ ಮಾಡಿದ್ದಾನೆ. ಇದಾದ ಬಳಿಕ ಮುಂದಿನ ಆದೇಶವನ್ನು ತಿಳಿಸುವವರೆಗೆ ಆ ವಾಚ್‍ನ್ನು ಮುಟ್ಟಬೇಡಿ ಎಂದು ಆತನಿಗೆ ಕಂಪನಿ ತಿಳಿಸಿದೆ. ಇದನ್ನೂ ಓದಿ: ಯುವತಿಯ ಪ್ರೀತಿಯ ಜಾಲದಲ್ಲಿ ಬೀಳಿಸಲಾಗುತ್ತೆ, ಬನಶಂಕರಿ ಮಸೀದಿ ಕೆಳಗಡೆ ಮತಾಂತರ – ಮುತಾಲಿಕ್

ಈ ಹಿನ್ನೆಲೆಯಲ್ಲಿ ವಾಚ್‍ನ್ನು ಸ್ವಲ್ಪ ದೂರದಲ್ಲಿ ಇಟ್ಟು ಮಲಗಿದ್ದಾನೆ. ನಂತರ ಬೆಳಗ್ಗೆ ತಾಪಮಾನ ಇನ್ನೂ ಹೆಚ್ಚಾಗಿ ವಾಚ್‍ನ ಮುಂದಿನ ಭಾಗವೂ ಬಿರುಕು ಬಿಟ್ಟಿದೆ. ಇದನ್ನು ಗಮನಿಸಿದ ಆತ ವಾಚ್‍ನ್ನು ತೆಗೆದು ಕಿಟಕಿಯಿಂದ ಆಚೆ ಎಸೆದಿದ್ದಾನೆ. ಆ ವೇಳೆ ಆಪಲ್ ವಾಚ್ ಸರಣಿ 7ರ ಬ್ಯಾಟರಿ ಸ್ಫೋಟಗೊಂಡಿದೆ. ಘಟನೆಗೆ ಸಂಬಂಧಿಸಿ ಆಪಲ್ ಕಂಪನಿ ಸ್ಪಷ್ಟನೆ ನೀಡಿದ್ದು, ಬಳಕೆದಾರನ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ರೈತರ ಸಂಕಷ್ಟ, ಆತ್ಮಹತ್ಯೆ ಡಬಲ್‌ ಆಗಿದೆ – ಕಾಂಗ್ರೆಸ್‌ ವಾಗ್ದಾಳಿ

Live Tv

Leave a Reply

Your email address will not be published. Required fields are marked *

Back to top button