DharwadDistrictsKarnatakaLatestMain Post

ಯುವತಿಯ ಪ್ರೀತಿಯ ಜಾಲದಲ್ಲಿ ಬೀಳಿಸಲಾಗುತ್ತೆ, ಬನಶಂಕರಿ ಮಸೀದಿ ಕೆಳಗಡೆ ಮತಾಂತರ – ಮುತಾಲಿಕ್

ಧಾರವಾಡ: ಶ್ರೀಧರ್ ಗಂಗಾಧರ್ ಎನ್ನುವ ಯುವಕನನ್ನು ಹುಬ್ಬಳ್ಳಿಗೆ (Hubballi) ತಂದು ಯುವತಿಯ ಪ್ರೀತಿಯ ಜಾಲದಲ್ಲಿ ಬೀಳಿಸಿ, ಅವನನ್ನು ಮತಾಂತರ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಮಂಡ್ಯ ಮೂಲದ ಶ್ರೀಧರ್ ಗಂಗಾಧರ್ ಎಂಬಾತನನ್ನು ಮತಾಂತರ (Conversion) ಮಾಡಲು ವ್ಯವಸ್ಥಿತವಾಗಿ ಎಲ್ಲಾ ರೀತಿಯ ಯೋಜನೆಯೂ ಇಸ್ಲಾಂ ಕಡೆಯಿಂದಲೇ ನಡೆದಿತ್ತು. ಅವರ ಪ್ಲ್ಯಾನ್ ಪ್ರಕಾರವಾಗಿಯೇ ಅವನಿಗೆ ಇಸ್ಲಾಂನ ಎಲ್ಲ ಪ್ರಕ್ರಿಯೆ ಮಾಡಲಾಗಿದೆ. ಗೋ ಮಾಂಸ ತಿನ್ನಿಸಿದ್ದಾರೆ. ಶಸ್ತ್ರಚಿಕಿತ್ಸೆ ಸಹ ಆಗಿದೆ. ಎಲ್ಲ ರೀತಿಯದ್ದು ಆಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಆತ ಶ್ರೀಧರ್ ಗಂಗಾಧರ್ ಇರುವವನು ಇಂದು ಸಲ್ಮಾನ್ ಆಗಿದ್ದಾನೆ ಎಂದು ಕಿಡಿಕಾರಿದರು.

POLICE JEEP

ಘಟನೆಗೆ ಸಂಬಂಧಿಸಿ ಶ್ರೀಧರ್ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾನೆ. ದೂರಿನಲ್ಲಿ ಅವನಿಗೆ ಒತ್ತಾಯ ಮಾಡಿ ಇದನ್ನೆಲ್ಲ ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ಬೆಂಗಳೂರಿನ ಬನಶಂಕರಿಯಲ್ಲಿರುವ ಮಸೀದಿಯ 11 ಜನರ ಮೇಲೆ ಕೇಸ್ ಆಗಿದೆ. ಈ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಲಾಗಿದೆ. ಅದರಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಕೂಡ ಭಾಗಿಯಾಗಿದ್ದಾನೆ ಎನ್ನುವುದು ಬಹಿರಂಗ ಆಗಿದೆ ಎಂದರು.

ಕಾಂಗ್ರೆಸ್ ಮತಾಂತರಕ್ಕೆ ಹೇಗೆ ವ್ಯವಸ್ಥಿತವಾಗಿ ಇದಕ್ಕೆ ಕುಮಕ್ಕು ಕೊಡುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಇದಕ್ಕೆಲ್ಲಾ ಅವರೇ ಜವಾಬ್ದಾರಿಯಾಗಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿ ಕ್ರಿಶ್ಚಿಯನರಿಗೆ ಹೇಗೆ ಇಡೀ ದೇಶದಲ್ಲಿ ಮತಾಂತರಕ್ಕೆ ಕುಮ್ಮಕ್ಕು ಕೊಡ್ತಿದ್ದಾರೋ, ಅದೇ ಮಾದರಿಯಲ್ಲಿ ಮುಸ್ಲಿಂ ತುಷ್ಠೀಕರಣ, ಮತಾಂತರಕ್ಕೆ ಕಾಂಗ್ರೆಸ್ ಕೂಡ ಜವಾಬ್ದಾರಿ ಹಾಗೂ ಹೊಣೆಯಾಗಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಬಂಧನ ಆಗಿದೆ. ಈ ಕೂಡಲೇ ಅವನನ್ನು ಕೂಡಲೇ ಕಾಂಗ್ರೆಸ್ ಅಮಾನತು ಮಾಡಬೇಕು. ಇಲ್ಲದಿದ್ರೆ ಇದರ ಹಿಂದೆ ನೀವು ಇದ್ದೀರಿ ಎನ್ನುವುದು ಖಚಿತವಾಗುತ್ತದೆ ಎಂದು ಹೇಳಿದರು.

Congress

ಬನಶಂಕರಿ ಮಸೀದಿಯ ಕೆಳಗೆ ಅಂಡರ್ ಗ್ರೌಂಡ್ ಇದೆ ಅನ್ನೋದು ಬಹಿರಂಗ ಆಗುತ್ತಿದೆ. ಇನ್ನು ಅದರಲ್ಲಿ 50 ರಿಂದ 60 ಜನ ಮತಾಂತರಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲಿ ಅನೇಕರು ಹಿಂದೂ ಯುವಕರೇ ಆಗಿದ್ದಾರೆ ಎನ್ನುವುದನ್ನು ಆತ ಬಹಿರಂಗ ಪಡಿಸಿದ್ದಾನೆ. ಸರ್ಕಾರ ಮತಾಂತರ ಕಾಯ್ದೆ ನಿಷೇಧ ಅಡಿಯಲ್ಲಿ ಬಂಧನ ಮಾಡಬೇಕು. ಅದೇ ಕಾಯ್ದೆಯಡಿ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು, ಶೀಘ್ರವಾಗಿ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ತಲೆ ರೈಲ್ವೇ ಹಳಿ ಇದ್ದಂತೆ: ಸಿ.ಸಿ ಪಾಟೀಲ್ ವ್ಯಂಗ್ಯ

ಈ ಹಿಂದಿರುವ ಶಕ್ತಿ ಮುಲ್ಲಾ, ಮೌಲ್ವಿಗಳು, ಮದರಸಾಗಳು ಮಸೀದಿಗಳು ಯಾವ್ಯಾವ ಇದಾವೆ ಎಲ್ಲವೂ ತನಿಖೆಯಾಗಬೇಕು. ನಾನು ಶೀಘ್ರದಲ್ಲೇ ಗೃಹಮಂತ್ರಿಗಳನ್ನು ಭೇಟಿಯಾಗಿ ನನ್ನ ಬಳಿ ಇರುವ ದಾಖಲೆ ಕೊಡುತ್ತೇನೆ ಎಂದ ಅವರು ಕೇರಳದಲ್ಲಿ 40% ಹಿಂದುಗಳು ಉಳಿದಿದ್ದಾರೆ, 60% ಹಿಂದುಗಳು ಹಾಗಾದ್ರೆ ಎಲ್ಲಿ ಹೋದ್ರು, ಅವರನ್ನ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಮುಖೇಶ್ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಬಂಧನ

Live Tv

Leave a Reply

Your email address will not be published. Required fields are marked *

Back to top button