ವಾಷಿಂಗ್ಟನ್: ನೀವು ಮಾಸ್ಕ್ ಧರಿಸಿರುವಾಗ ನಿಮ್ಮ ಫೋನ್ ಅನ್ನು ಫೇಸ್ ಐಡಿ ಮೂಲಕ ಅನ್‍ಲಾಕ್ ಮಾಡುವುದು ಇಲ್ಲಿಯವರೆಗೆ ಅಸಾಧ್ಯವಾಗಿತ್ತು. ಆದರೆ ಈಗ ಐಫೋನ್ ಹೊಸ ಫೀಚರ್ ಒಂದನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ನೀವು ನಿಮ್ಮ ಮಾಸ್ಕ್ ಧರಿಸಿರುವಾಗಲೂ ಫೇಸ್ ಐಡಿಯಲ್ಲಿ ಫೋನ್ ಅನ್‍ಲಾಕ್ ಮಾಡಬಹುದು.
ಈ ಹಿಂದೆ ಇದೇ ರೀತಿಯಾಗಿ ಐಫೋನ್ ಆಪಲ್ ವಾಚ್‍ನ ಮುಖಾಂತರ ಮಾಸ್ಕ್ ಧರಿಸಿಕೊಂಡೇ ಫೋನ್ ಅನ್‍ಲಾಕ್ ಮಾಡುವ ಫೀಚರ್ ತಂದಿತ್ತು. ಆದರೆ ಇದಕ್ಕೆ ಆಪಲ್ ವಾಚ್‍ನ ಅಗತ್ಯ ಬೀಳುತ್ತಿತ್ತು. ಕೇವಲ ಆಪಲ್ ವಾಚ್ ಹೊಂದಿದವರು ಮಾತ್ರವೇ ಈ ಫೀಚರ್ ಬಳಸಬಹುದಿತ್ತು. ಇದೀಗ ಆಪಲ್ ವಾಚ್‍ನ ಅಗತ್ಯ ಇಲ್ಲದೇ ಫೋನ್ ಅನ್ನು ಮಾಸ್ಕ್ ಧರಿಸಿಕೊಂಡೇ ಅನ್‍ಲಾಕ್ ಮಾಡಲು ಐಫೋನ್ ಸಾಧ್ಯವಾಗಿಸಲಿದೆ. ಇದನ್ನೂ ಓದಿ: ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್
Advertisement
Advertisement
ಐಒಎಸ್ 15.4ರ ಬೀಟಾದಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಬಹುದು. ಫೇಸ್ ಮಾಸ್ಕ್ ಧರಿಸಿಕೊಂಡೇ ನಿಮ್ಮ ಮುಖ ಪರಿಚಯವನ್ನು ಪತ್ತೆ ಹಚ್ಚುವಂತೆ ನಿಮ್ಮ ಐಫೋನ್ ಅನ್ನು ಹೊಂದಿಸಬಹುದು. ಇದಕ್ಕಾಗಿ ನೀವು ಫೋನ್‍ನ ಸೆಟ್ಟಿಂಗ್ಸ್‍ಗೆ ಹೋಗಿ ಫೇಸ್ ಐಡಿ ಹಾಗೂ ಪಾಸ್‍ಕೋಡ್ ಸೆಟ್ಟಿಂಗ್‍ನಲ್ಲಿ ಯೂಸ್ ಫೇಸ್ ಐಡಿ ವಿತ್ ಮಾಸ್ಕ್ ಆಯ್ಕೆಗೆ ಅನುಮತಿ ನೀಡಬೇಕು.
Advertisement
ಇದರಲ್ಲಿ ಕೆಲವು ಎಚ್ಚರಿಕೆಗಳು ಇವೆ. ಫಾರ್ ಫುಲ್ ಫೇಸ್ ರೆಕೊಗ್ನಿಶನ್ ಓನ್ಲಿ ಆಯ್ಕೆಯಲ್ಲಿ ಮಾತ್ರವೇ ಫೇಸ್ ಐಡಿ ನಿಖರವಾಗಿ ಕಾರ್ಯ ನಿರ್ವಹಿಸುತ್ತದೆ. ನೀವು ಮಾಸ್ಕ್ ಹಾಕಿಕೊಂಡು ನಿಮ್ಮ ಫೇಸ್ ಐಡಿ ಭದ್ರತೆಯಿಂದ ಕಾರ್ಯ ನಿರ್ವಹಿಸುತ್ತದೆ ಎನ್ನಲಾಗುವುದಿಲ್ಲ. ಐಡಿ ವಿತ್ ಮಾಸ್ಕ್‍ನಲ್ಲಿ ಫೋನ್ ನಿಮ್ಮ ಕಣ್ಣಿನ ಸುತ್ತಲಿನ ಭಾಗವನ್ನು ಚೆನ್ನಾಗಿ ಗುರುತಿಸಬಹುದು. ಆದರೆ ಈ ಫೀಚರ್ ಕೇವಲ ಹೊಸ ಐಫೋನ್‍ಗಳಲ್ಲಿ ಮಾತ್ರವೇ ಲಭ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ
Advertisement
ಕೊರೊನಾ ಹಾವಳಿ ಪ್ರಾರಂಭವಾದಾಗಿನಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಈ ನಿಯಮ 2 ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಆಪಲ್ ಈ ಹೊಸ ಫೀಚರ್ ಬಗ್ಗೆ ಪರೀಕ್ಷೆ ನಡೆಸುತ್ತಿರುವ ಪ್ರಯತ್ನ ಮೊದಲನೆಯದ್ದೇ. ಆಪಲ್ ಕನ್ನಡಕ ಹಾಕಿಕೊಂಡು ಫೇಸ್ ಐಡಿ ಅನ್‍ಲಾಕ್ ಮಾಡುವ ವೈಶಿಷ್ಟ್ಯವನ್ನು ಸುಧಾರಿಸುತ್ತಿದೆ. ಆದರೆ ಸನ್‍ಗ್ಲಾಸ್ ನೊಂದಿಗೆ ಫೇಸ್ ಮಾಸ್ಕ್ ಬಳಸಿದಾಗ ಈ ಫೀಚರ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಎಚ್ಚರಿಸಿದೆ.