ಬೆಂಗಳೂರು: ಆಪಲ್ ಐಫೋನ್ (Apple iPhone) ತಯಾರಿಸುವ ತೈವಾನಿನ ಫಾಕ್ಸ್‌ಕಾನ್ (Foxconn) ಕಂಪನಿ ಬೆಂಗಳೂರಿನಲ್ಲಿ (Bengaluru) ಜಾಗ ಖರೀದಿಸಿದೆ.
ದೇವನಹಳ್ಳಿ (Devanahalli) ಬಳಿ 13 ದಶಲಕ್ಷ ಚದರ ಅಡಿಯ ಜಾಗವನ್ನು ಖರೀದಿಸಿರುವುದಾಗಿ ಫಾಕ್ಸ್‌ಕಾನ್ ಕಂಪನಿ ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಮಂಗಳವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement
ಫಾಕ್ಸ್‌ಕಾನ್ ಕಂಪನಿಯ ಅಂಗಸಂಸ್ಥೆಯಾದ Hon Hai Technology India Mega Development 37 ದಶಲಕ್ಷ ಡಾಲರ್ (ಅಂದಾಜು 300 ಕೋಟಿ ರೂ.) ನೀಡಿ ಈ ಜಾಗವನ್ನು ಖರೀದಿಸಿದೆ ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಫಾಕ್ಸ್‌ಕಾನ್ 5.7 ಸಾವಿರ ಕೋಟಿ ರೂ. ಹೂಡಿಕೆ – 1 ಲಕ್ಷ ಉದ್ಯೋಗ ಸೃಷ್ಟಿ
Advertisement
Advertisement
ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ಮಾಧ್ಯಮವೊಂದು ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕ ತೆರೆಯಲಿದೆ. ಇದಕ್ಕಾಗಿ ಕಂಪನಿ ಸುಮಾರು 700 ಮಿಲಿಯನ್ ಡಾಲರ್ (ಸುಮಾರು 5.7 ಸಾವಿರ ಕೋಟಿ ರೂ.) ಹೂಡಿಕೆ ಮಾಡಲು ಮುಂದಾಗಿದೆ ಎಂದು ವರದಿ ಮಾಡಿತ್ತು.
Advertisement
ಬೆಂಗಳೂರಿನ ಸಮೀಪ ನಿರ್ಮಾಣವಾಗುತ್ತಿರುವ ಆಪಲ್ ಉತ್ಪಾದನಾ ತಾಣ ಸುಮಾರು 1 ಲಕ್ಷದಷ್ಟು ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ತೆಲಂಗಾಣದಲ್ಲಿ ಐಫೋನ್ ಫ್ಯಾಕ್ಟರಿ (iPhone Factory), ಕರ್ನಾಟಕದಲ್ಲಿ ಪ್ರಾಜೆಕ್ಟ್ ಎಲಿಫೆಂಟ್ (Project Elephant) ಆರಂಭಿಸಲಾಗುವುದು ಎಂದು ತೈವಾನಿನ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪನಿ ಫಾಕ್ಸ್‌ಕಾನ್ ಈ ಹಿಂದೆ ಅಧಿಕೃತವಾಗಿ ತಿಳಿಸಿತ್ತು.
ಫಾಕ್ಸ್‌ಕಾನ್ 2019ರಿಂದ ಆಪಲ್ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುತ್ತಿದ್ದು, ತಮಿಳುನಾಡಿನಲ್ಲಿ ತನ್ನ ಘಟಕ ತೆರದಿದೆ. ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟ್ರಾನ್ ಕಂಪನಿ ಐಫೋನ್ ತಯಾರಿಸುತ್ತಿದೆ. ಇದನ್ನೂ ಓದಿ: ತೈವಾನ್ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್ ಉತ್ಪಾದನೆ
ಭಾರತದಲ್ಲಿ ತನ್ನ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆಪಲ್ ಕಂಪನಿ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದೆ. ಏಪ್ರಿಲ್‌ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಆಪಲ್ ತನ್ನ ಅಧಿಕೃತ ರಿಟೇಲ್ ಸ್ಟೋರ್ ತೆರೆದಿತ್ತು.