ಟ್ರಂಪ್‌ ಪ್ರಮಾಣವಚನ ಸಮಾರಂಭ – 8.57 ಕೋಟಿ ದೇಣಿಗೆ ನೀಡಲಿದ್ದಾರೆ ಟಿಮ್‌ ಕುಕ್‌

Public TV
1 Min Read
Tim Cook Donald Trump

ವಾಷಿಂಗ್ಟನ್‌: ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅದ್ದೂರಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಪಲ್ ಸಿಇಒ (Apple CEO) ಟಿಮ್ ಕುಕ್ (Tim Cook) ವೈಯಕ್ತಿಕವಾಗಿ 1 ಮಿಲಿಯನ್‌ ಡಾಲರ್‌ (ಅಂದಾಜು 8.57 ಕೋಟಿ ರೂ.) ಹಣವನ್ನು ದೇಣಿಗೆ ನೀಡಲಿದ್ದಾರೆ.

ಜ.20 ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕುಕ್‌ ವೈಯಕ್ತಿಕವಾಗಿ ದೇಣಿಗೆ (Donation) ನೀಡುತ್ತಿದ್ದಾರೆ ಹೊರತು ಆಪಲ್‌ ಕಂಪನಿಯಿಂದ ಯಾವುದೇ ದೇಣಿಗೆ ಬರುವ ನಿರೀಕ್ಷೆಯಿಲ್ಲ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

mark zuckerberg donald trump

ಟಿಮ್‌ ಕುಕ್‌ ಡಿಸೆಂಬರ್ 13 ರಂದು ಫ್ಲೋರಿಡಾದಲ್ಲಿರುವ ಟ್ರಂಪ್‌ ಅವರ ಮಾರ್-ಎ-ಲಾಗೊ ರೆಸಾರ್ಟ್‌ಗೆ ಆಗಮಿಸಿ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭಕ್ಕೆ ಈಗಾಗಲೇ ಹಲವಾರು ಉದ್ಯಮಿಗಳು ದೇಣಿಗೆ ನೀಡಿದ್ದಾರೆ. ಓಪನ್ ಎಐನ ಸ್ಯಾಮ್ ಆಲ್ಟ್‌ಮ್ಯಾನ್, ಮೆಟಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಅಮೆಜಾನ್‌ನ ಜೆಫ್ ಬೆಜೋಸ್ ದೇಣಿಗೆ ನೀಡಿದ್ದಾರೆ. ಈಗಾಗಲೇ ಮೆಟಾ ಪ್ಲಾಟ್‌ಫಾರ್ಮ್‌ಗಳು ಮತ್ತು ಅಮೆಜಾನ್ 1 ಮಿಲಿಯನ್‌ ಡಾಲರ್‌ ಹಣವನ್ನು ಉದ್ಘಾಟನಾ ನಿಧಿಗೆ ದೇಣಿಗೆ ನೀಡಿವೆ ಎಂದು ವರದಿಯಾಗಿದೆ.

ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ಯುರೋಪಿಯನ್‌ ಒಕ್ಕೂಟ ಆಪಲ್‌ ಕಂಪನಿಗೆ 14.34 ಶತಕೋಟಿ ಡಾಲರ್‌ ದಂಡ ವಿಧಿಸಿದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆಪಲ್‌ ಅಮೆರಿಕದ ಆರ್ಥಿಕತೆ ದೊಡ್ಡ ಕೊಡುಗೆ ನೀಡುತ್ತಿದೆ ಅಷ್ಟೇ ಅಲ್ಲದೇ ಜಾಗತಿಕವಾಗಿಯೂ ದೊಡ್ಡ ತೆರಿಗೆ ಕಂಪನಿಯಾಗಿದೆ.

 

Share This Article